‘ವಿದ್ಯೆ ಬೇಕಿದ್ದರೆ ಸರಸ್ವತಿಯನ್ನು ಹಾಗೂ ಹಣ ಬೇಕಿದ್ದರೆ ಲಕ್ಷ್ಮೀಯನ್ನು ಪಟಾಯಿಸಿ ! (ಅಂತೆ)

ಉತ್ತರಾಖಂಡದಲ್ಲಿನ ಭಾಜಪದ ಶಾಸಕ ಬಂಶೀಧರ ಭಗತರವರ ಖೇದಕರ ಹೇಳಿಕೆ

ಹಲ್ದಾನಿ (ಉತ್ತರಾಖಂಡ) – ವಿದ್ಯೆ ಬೇಕಿದ್ದರೆ ಸರಸ್ವತಿಯನ್ನು ಪಟಾಯಿಸಿ, ಶಕ್ತಿ ಬೇಕಿದ್ದರೆ ದುರ್ಗೆಯನ್ನು ಪಟಾಯಿಸಿ ಹಾಗೂ ಹಣ ಬೇಕಿದ್ದರೆ ಲಕ್ಷ್ಮೀಯನ್ನು ಪಟಾಯಿಸಿ, ಎಂಬ ಹೇಳಿಕೆಯನ್ನು ಭಾಜಪದ ಶಾಸಕರಾದ ಬಂಶೀಧರ ಭಗತರವರು ಅಂತರಾಷ್ಟ್ರೀಯ ಬಾಲಕಿಯರ ದಿನದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಈ ಸಮಯದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದವರು ಈ ಹೇಳಿಕೆಗೆ ಜೋರಾಗಿ ನಕ್ಕು ಸಮರ್ಥನೆ ನೀಡಿದರು. ಈ ಕಾರ್ಯಕ್ರಮಕ್ಕೆ ಉತ್ತರಾಖಂಡದ ಮಹಿಳಾ ವಿಕಾಸಮಂತ್ರಿಗಳಾದ ರೇಖಾ ಆರ್ಯರವರೂ ಉಪಸ್ಥಿತರಿದ್ದರು.

ಭಗತರವರು ಮುಂದುವರಿದು, ಪುರುಷರ ಬಳಿ ಏನಿರುತ್ತದೆ ? ಒಂದು ಶಿವನಿದ್ದಾನೆ (ಭಗವಾನ ಶಿವ), ಅವರು ಕಲ್ಲುಗಳ ರಾಶಿಯಲ್ಲಿ ಹೋಗಿ ಬಿದ್ದಿದ್ದಾರೆ. ಅವರ ತಲೆಯ ಮೇಲೆ ಸರ್ಪವನ್ನು ಇಡಲಾಗಿದೆ. ಭಗವಾನ ವಿಷ್ಣುವು ಆಳವಾದ ಸಮುದ್ರದಲ್ಲಿ ಅಡಗಿ ಕುಳಿತಿದ್ದಾರೆ. ಇಬ್ಬರಿಗೂ ಪರಸ್ಪರ ಮಾತನಾಡಲೂ ಆಗುತ್ತಿಲ್ಲ’ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಈ ಹೇಳಿಕೆಯು ಹಿಂದೂಗಳು ಹಾಗೂ ಅವರ ನೇತಾರರಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರಿಗೆ ದೇವತೆಗಳ ಆಧ್ಯಾತ್ಮಿಕ ಮಹತ್ವ ತಿಳಿದಿಲ್ಲ, ಎಂಬುದನ್ನು ದರ್ಶಿಸುತ್ತದೆ !
  • ಮಹಂಮದ ಪೈಗಂಬರರವರ ಕಥಿತ ಅಪಮಾನವಾದಾಗ ಶಾಸಕ ಟಿ. ರಾಜಾ ಸಿಂಗರವರ ಮೇಲೆ ಕಾರ್ಯಾಚರಣೆಯನ್ನು ಮಾಡುವ ಭಾಜಪವು ಬಂಶೀಧರ ಭಗತರವರ ಮೇಲೆ ಕಾರ್ಯಾಚರಣೆ ಮಾಡುವುದೇ ? ಎಂಬ ಪ್ರಶ್ನೆಯು ಮನಸ್ಸಿನಲ್ಲಿ ನಿರ್ಮಾಣವಾಗುತ್ತಿದೆ !