ಸನಾತನ ಪರಂಪರೆಯ ಮೂಲಕ ಭಾರತವನ್ನು ‘ವಿಶ್ವಗುರು’ ಮಾಡೋಣ ! – ಯೋಗ ಋಷಿ ರಾಮದೇವ ಬಾಬಾ

ರಾಮದೇವ ಬಾಬಾರವರು ಮದರಸಾದ ಮೇಲೆ ರಾಷ್ಟ್ರಧ್ವಜ ಹಾರಿಸಿದರು

ಹರಿದ್ವಾರ (ಉತ್ತರಾಖಂಡ) – ಯೋಗ ಋಷಿ ರಾಮದೇವ ಬಾಬಾರವರು ಭಾರತದ ಅಮೃತಮಹೋತ್ಸವದ ಸಂದರ್ಭದಲ್ಲಿ ೧೫ ಅಗಸ್ಟರಂದು ಇಲ್ಲಿಯ ಬೋದಹೇರಿ ಮೋಹಿಯುದ್ದೀನಪೂರ ಗ್ರಾಮದ ಒಂದು ಮದರಸಾದ ಮೇಲೆ ರಾಷ್ಟ್ರಧ್ವಜ ಹಾರಿಸಿದರು. ಈ ಸಂದರ್ಭದಲ್ಲಿ ಅವರು, ಮುಂದಿನ ೨೫ ವರ್ಷಗಳಲ್ಲಿ ನಾವು ‘ಸನಾತನ ಪರಂಪರೆ’ಯ ಮಾಧ್ಯಮದಿಂದ ಭಾರತವನ್ನು ‘ವಿಶ್ವಗುರು’ವನ್ನಾಗಿ ಮಾಡುವವರಿದ್ದೇವೆ. ಮದರಸಾ ಮೇಲೆ ರಾಷ್ಟ್ರಧ್ವಜ ಹಾರಿಸಿದ ಬಳಿಕ ಅವರು ರಾಷ್ಟ್ರೀಯ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವ ಇವುಗಳ ಸಂಗಮವಾಗಿದೆ ಎಂದು ಹೇಳಿದರು.

ಮಸೀದಿಯ ಮೇಲೆ ಧ್ವಜಾರೋಹಣ ಮಾಡಿದ ಬಗ್ಗೆ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ರಾಮದೇವ ಬಾಬಾರವರು, “ಇದು ನಮಗೆ ಹೊಸದೇನಿಲ್ಲ ಬದಲಾಗಿ ಸನಾತನ ಪರಂಪರೆಯಾಗಿದೆ. ಈ ಪರಂಪರೆಯ ಮಾಧ್ಯಮದಿಂದ ನಾವು ಸಂಘಟಿತರಾಗಿ ರಾಷ್ಟ್ರದ ಏಕತೆ ಮತ್ತು ಅಖಂಡತೆಗಾಗಿ ಹಾಗೆಯೇ ರಾಷ್ಟ್ರದ ಗೌರವ ಮತ್ತು ವೈಭವ ಹೆಚ್ಚಿಸಲು ಕಟಿಬದ್ಧರಾಗಿದ್ದೇವೆ. ನಾವೆಲ್ಲರೂ ಒಂದಾಗಿ ಸ್ವಾತಂತ್ರ್ಯದ ಅಮೃತಮಹೋತ್ಸವದಿಂದ ಶತಾಬ್ದಿ ವರ್ಷದ ವರೆಗೆ ‘ಸಾರೆ ಜಹಾಂ ಸೆ ಅಚ್ಛಾ’ ಅನುಸಾರ ಈ ಭಾರತವನ್ನು ಸಾಕಾರಗೊಳಿಸೋಣ. ಇದರಿಂದ ಭಾರತ ಮತ್ತೊಮ್ಮೆ ಮಹಾಶಕ್ತಿ, ಪರಮ ವೈಭವಶಾಲಿ, ಜಗದ್ಗುರು, ವಿಶ್ವಗುರು ಮತ್ತು ‘ಸೂಪರ ಪಾವರ’ ಆಗಲಿದೆ.” ಎಂದು ಹೇಳಿದರು.