ಹಿಂದೂ ಯುವಕನ ಸಂಪತ್ತನ್ನು ಕಬಳಿಸಲು ವಿವಾಹಿತ ಮುಸಲ್ಮಾನ ಮಹಿಳೆಯು ಹಿಂದೂ ಧರ್ಮವನ್ನು ಸ್ವೀಕರಿಸಿದಳು !

ದೆಹರಾಡೂನ (ಉತ್ತರಾಖಂಡ) – ಇಲ್ಲಿನ ಸುಕಾಂತ ಎಂಬ ಹಿಂದೂ ಯುವಕನ ಕೋಟ್ಯಾಂತರ ರೂಪಾಯಿಗಳ ಸಂಪತ್ತನ್ನು ಕಬಳಿಸಲು ಶೊರೆನ ಎಂಬ ಹೆಸರಿನ ವಿವಾಹಿತ ಮುಸಲ್ಮಾನ ಮಹಿಳೆಯು ಆತನೊಂದಿಗೆ ಸ್ನೇಹ ಬೆಳೆಸಿದಳು. ಶೋರೇನಳು ತಾನು ಅವಿವಾಹಿತಳಾಗಿರುವುದಾಗಿ ಹೇಳಿ ‘ಹೊಟೆಲ್‌ ಮ್ಯಾನೇಜಮೆಂಟ್‌’ನಲ್ಲಿ ಶಿಕ್ಷಣ ಪಡೆದಿರುವ ಬಗ್ಗೆ ಸುಳ್ಳು ಹೇಳಿದ್ದಾಳೆ. ಆಕೆಯು ಮತಾಂತರ ಮಾಡಿ ಹಿಂದೂ ಧರ್ಮವನ್ನು ಸ್ವೀಕರಿಸಿ ಸಪ್ಟೆಂಬರ್‌ ೨೦೧೯ರಂದು ಸುಕಾಂತನೊಂದಿಗೆ ವಿವಾಹವಾದಳು. ಮುಂದೆ ಆಕೆಯ ಬಂಡವಾಳ ಬಯಲಾದಾಗ ಆಕೆಯು ಸುಕಾಂತನಿಗೆ ‘ನಿನ್ನ ಸಂಪತ್ತನ್ನು ಮಾರಿ ನನಗೆ ೪ ಕೋಟಿ ರೂಪಾಯಿ ಕೊಡು, ಇಲ್ಲದಿದ್ದರೆ ನಿನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗುವುದು, ಎಂದು ಹೇಳಿದ್ದಾಳೆ.

ಸುಕಾಂತನು ನೀಡಿರುವ ಮಾಹಿತಿಯ ಅನುಸಾರ ವಿವಾಹದ ನಂತರವೂ ಶೋರೇನಳು ಓರ್ವ ಪುರುಷನೊಂದಿಗೆ ಸಂಪರ್ಕದಲ್ಲಿದ್ದಳು ಹಾಗೂ ಆಕೆ ಅವನನ್ನು ಭೇಟಿಯಾಗುತ್ತಿದ್ದಳು. ಕಾಲಾಂತದಲ್ಲಿ ಸುಕಾಂತನಿಗೆ ಪುಣೆಯ ಹೋಟೆಲ ಒಂದರಲ್ಲಿ ನೌಕರಿ ದೊರೆಯಿತು. ಅವನು ಶೋರೇನಳನ್ನು ಅಲ್ಲಿಗೆ ಕರೆದೊಯ್ದನು. ಅವನು ಆಕೆಗೂ ಪುಣೆಯಲ್ಲಿನ ಇನ್ನೊಂದು ಹೋಟೇಲಿನಲ್ಲಿ ನೌಕರಿ ಕೊಡಿಸಲು ಪ್ರಯತ್ನಿಸತೊಡಗಿದನು. ಆಗ ಅವನಿಗೆ ಆಕೆಯು ಹತ್ತನೇಯ ತರಗತಿಯ ವರೆಗೂ ಓದಿಲ್ಲ ಎಂಬುದು ತಿಳಿಯುತು. ಆಕೆಯ ಬಂಡವಾಳ ಬಯಲಾದ ನಂತರ ಅವಳು ಸುಕಾಂತನಿಗೆ ದೆಹರಾಡೂನನಲ್ಲಿರುವ ಅವನ ಸಂಪತ್ತನ್ನು ಮಾರಿ ಅದರ ಹಣವನ್ನು ತನಗೆ ನೀಡುವಂತೆ ಒತ್ತಡ ಹೇರಿದಳು. ಈ ಷಡ್ಯಂತ್ರದಲ್ಲಿ ಶೋರೇನಳ ತಂದೆ-ತಾಯಿಯೂ ಸಹಭಾಗಿಯಾಗಿದ್ದರು. ಪೊಲೀಸರು ಈ ಪ್ರಕರಣದಲ್ಲಿ ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸಲ್ಮಾನರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು !