ಅಂಕಿತಾ ಭಂಡಾರಿ ಹತ್ಯೆಯ ಪ್ರಕರಣದಲ್ಲಿ ಭಾಜಪದ ಮುಖಂಡನ ಮಗನ ಬಂಧನ

ಭಾಜಪದ ಮುಖಂಡ ವಿನೋದ ಆರ್ಯ ಮತ್ತು ಇವರ ಪುತ್ರ ಪುಲಕಿತ ಆರ್ಯ

ಹೃಷಿಕೇಶ್ – ಜಿಲ್ಲೆಯಲ್ಲಿ ಒಂದು ರೆಸಾರ್ಟ್‌ನಿಂದ ನಾಪತ್ತೆ ಆಗಿರುವ ೧೯ ವರ್ಷದ ‘ರೇಸೆಪ್ಶನಿಸ್ಟ’ ಅಂಕಿತಾ ಭಂಡಾರಿ ಇವಳ ಮೃತ ದೇಹ ಉತ್ತರಖಂಡ ಪೊಲೀಸರಿಗೆ ‘ಚ್ಚಿಲ್ಲಾ ಪವರ್ ಹೌಸ್’ ಹತ್ತಿರದ ಕಾಲುವೆಯಲ್ಲಿ ದೊರೆತಿದೆ. ಅಂಕಿತ ಭಂಡಾರಿ ಸಪ್ಟೆಂಬರ್ ೧೮ ರಂದು ನಾಪತ್ತೆ ಆಗಿದ್ದಳು. ಈ ಪ್ರಕರಣದಲ್ಲಿ ಭಾಜಪದ ಮುಖಂಡ ವಿನೋದ ಆರ್ಯ ಇವರ ಪುತ್ರ ಪುಲಕಿತ ಆರ್ಯ ಸಹಿತ ೩ ಜನರನ್ನು ಬಂಧಿಸಲಾಗಿದೆ. ವೈಯಕ್ತಿಕ ವಿವಾದಗಳ ನಂತರ ಯುವತಿಯನ್ನು ರೆಸಾರ್ಟ್ ಹತ್ತಿರದ ಕಾಲುವೆಗೆ ತಳ್ಳಿರುವುದೆಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಂಕಿತಾ ಭಂಡಾರಿ ಈಕೆಯನ್ನು ಅಪರಾಧಿಗಳು ವೇಶ್ಯಾವಾಟಿಕೆಯಲ್ಲಿ ತಳ್ಳಲು ಪ್ರಯತ್ನಿಸುತ್ತಿದ್ದರು; ಆದರೆ ಆಕೆ ವಿರೋಧಿಸಿರುವುದರಿಂದ ಆಕೆಯ ಹತ್ಯೆ ಮಾಡಲಾಯಿತು. ‘ರೆಸಾರ್ಟಿ’ನ ಮಾಲೀಕ ಪುಲಕಿತ ಆರ್ಯ, ವ್ಯವಸ್ಥಾಪಕ ಸೌರಭ ಭಾಸ್ಕರ್ ಮತ್ತು ಸಹ ವ್ಯವಸ್ತಾಪಕ ಅಂಕಿತ ಗುಪ್ತ ಇವರ ಮೇಲೆ ಯುವತಿಯ ಹತ್ಯೆಯ ಆರೋಪವಿದೆ. ‘ಅಂಕಿತಾ ಈಕೆಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಹತ್ಯೆ ಮಾಡಲಾಗಿದೆ’, ಎಂದು ಅಂಕಿತಾಳ ತಂದೆ ಆರೋಪಿಸಿದ್ದಾರೆ.

೧. ಉತ್ತರಾಖಂಡದಲ್ಲಿನ ಪೌರಿ ಇಲ್ಲಿ ಪುಲಕಿತ ಆರ್ಯ ಇವರ ‘ವನತಾರ’ ಎಂಬ ರೆಸಾರ್ಟ್ ಇತ್ತು. ಈ ರೆಸಾರ್ಟ್ ನಲ್ಲಿ ರಿಸೆಪ್ಶನಿಸ್ಟ ಎಂದು ಕೆಲಸ ಮಾಡುವ ಅಂಕಿತಾ ಹಟತ್ತಾಗಿ ನಾಪತ್ತೆಯಾಗಿದ್ದಳು. ಈ ವಿಷಯವಾಗಿ ಯುವತಿಯ ಕುಟುಂಬದವರು ಮತ್ತು ಪುಲಕಿತ ಆರ್ಯ ಇವರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು.

೨. ಈ ಹತ್ಯೆಯ ಹಿಂದೆ ಪುಲಕಿತನ ಕೈವಾಡ ಇರುವುದು ಬೆಳಕಿಗೆ ಬಂದ ನಂತರ ರಾಜ್ಯ ಸರಕಾರದ ಆದೇಶದ ನಂತರ ‘ವನತಾರಾ’ ರೆಸಾರ್ಟ್ ನೆಲಸಮ ಮಾಡಲಾಯಿತು ಹಾಗೂ ಆಕ್ರೋಶಗೊಂಡ ಗುಂಪಿನಿಂದ ಈ ‘ರೆಸಾರ್ಟಿ’ಗೆ ನುಗ್ಗಿ ಬೆಂಕಿ ಹಚ್ಚಿದರು.