ಭಾರತೀಯ ಸೈನ್ಯದಲ್ಲಿ ‘ಅಮಿತ’ ಎಂದು ಹೇಳಿ ಸೇರಲು ಪ್ರಯತ್ನಿಸುತ್ತಿದ್ದ ತಾಹಿರ್ ಖಾನ್‌ನ ಬಂಧನ

ಅಲ್ಮೋಡ (ಉತ್ತರಾಖಂಡ) – ಉತ್ತರಖಂಡದಲ್ಲಿ ಪ್ರಸ್ತುತ ಭಾರತೀಯ ಸೈನ್ಯದಲ್ಲಿ ಅಗ್ನಿವೀರ ಯೋಜನೆಯ ಅಡಿಯಲ್ಲಿ ಸೈನಿಕರನ್ನು ನೇಮಕ ಮಾಡಲಾಗುತ್ತಿದೆ. ಅದಕ್ಕಾಗಿ ರಾಣಿಕೇತನಲ್ಲಿನ ಕುಮಾವು ರೆಜಿಮೆಂಟ್ ಸೆಂಟರ್‌ನ ಮುಖ್ಯ ಕಾರ್ಯಾಲಯದ ಸೋಮನಾಥ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಂದಿದ್ದಾರೆ. ಅಲ್ಲಿಂದ ಪೊಲೀಸರು ಅಮಿತ ಎಂಬ ಹೆಸರು ಹೇಳಿ ಬಂದಿರುವ ತಾಹಿರ್ ಖಾನ್ ಎಂಬ ಯುವಕನನ್ನು ಬಂಧಿಸಿದ್ದಾರೆ.

ಅವನ ಗುರುತಿನ ಚೀಟಿಯಲ್ಲಿ ‘ಅಮಿತ’ ಎಂಬ ಹೆಸರು ಇದೆ. ನೇಮಕ ವ್ಯವಸ್ಥೆಯ ಅಧಿಕಾರಿಗಳಿಗೆ ಅವನ ಬಗ್ಗೆ ಅನುಮಾನ ಬಂದ ನಂತರ ಅವರು ಅವನ ದಾಖಲೆಗಳನ್ನು ಪರಿಶೀಲಿಸಿದಾಗ ಅವುಗಳು ನಕಲಿ ಆಗಿರುವುದು ತಿಳಿದು ಬಂದಿತು. ನಂತರ ಅವನನ್ನು ಪೊಲೀಸರ ವಶಕ್ಕೆ ನೀಡಿದ ನಂತರ ಅವನನ್ನು ಬಂಧಿಸಲಾಯಿತು. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇರುವ ಬಗ್ಗೆ ಹೇಳಲಾಗುತ್ತಿದೆ.


ತಾಹಿರ್ ಖಾನ್ ಉತ್ತರ ಪ್ರದೇಶದ ಬುಲಂದಶಹರನ ಸಿಕಂದರಾಬಾದಿನ ಕೊಕರ ಗ್ರಾಮದವನಾಗಿದ್ದಾನೆ. ಆತ ಶಾಲೆಯ ನಕಲಿ ಪ್ರಮಾಣ ಪತ್ರ, ಉತ್ತರಾಖಂಡದ ನೈನಿತಾಲದ ಹಲ್ದಾನಿಯ ನಿವಾಸಿ ಎಂದು ಸುಳ್ಳು ನಿವಾಸ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮತ್ತು ಆಧಾರ ಕಾರ್ಡ ತಯಾರಿಸಿಕೊಂಡಿದ್ದನು. ನೇಮಕಾತಿಯ ನೋಂದಣಿಗಾಗಿ ಅವನು ತನ್ನ ಹೆಸರು ‘ಅಮಿತ’ ಎಂದು ಬರೆದಿದ್ದನು. ಅವನು ನೇಮಕಾತಿಗಾಗಿ ಒಂದು ಸಾವಿರ ೬೦೦ ಮೀಟರ್ ಓಟ ಸಹ ಪೂರ್ಣಗೊಳಿಸಿದ್ದನು. ದಾಖಲೆಗಳ ಪರಿಶೀಲನೆ ಮಾಡುವಾಗ ಅವನ ಮೇಲೆ ಅನುಮಾನ ಬಂದಿದೆ.

ಸಂಪಾದಕೀಯ ನಿಲುವು

ಈವರೆಗೆ ‘ಲವ್ ಜಿಹಾದ್’ಗಾಗಿ ಮುಸಲ್ಮಾನ ಯುವಕರು ‘ಹಿಂದೂ’ ಎಂದು ಹೇಳುತ್ತಿದ್ದರು. ಈಗ ಅವರು ದೇಶ ವಿರೋಧಿ ಕೃತ್ಯ ನಡೆಸುವುದಕ್ಕಾಗಿಯೂ ಈ ಮಾರ್ಗ ಉಪಯೋಗಿಸುತ್ತಿದ್ದಾರೆ, ಇದು ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ. ಈಗ ನೇಮಕಗೊಳ್ಳುವ ಪ್ರತಿಯೊಬ್ಬರನ್ನು ಬಿಗಿಯಾಗಿ ವಿಚಾರಣೆ ನಡೆಸುವುದು ಅವಶ್ಯಕವಾಗಿದೆ !