ಉತ್ತರಾಖಂಡದ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಕಟ್ಟಲಾಗಿರುವ ಅನಧಿಕೃತ ಗೋರಿ !

(ಗೋರಿ ಅಂದರೆ ಮುಸಲ್ಮಾನರ ಕಬರ)

ಡೆಹರಾಡೂನ (ಉತ್ತರಾಖಂಡ) – ಇಲ್ಲಿಯ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಮುಸಲ್ಮಾನರು ಅನಧಿಕೃತವಾಗಿ ಅನೇಕ ಗೋರಿಗಳನ್ನು ಕಟ್ಟಿರುವುದು ಬೆಳಕಿಗೆ ಬಂದಿದೆ. ‘ಆಪ್ ಇಂಡಿಯಾ’ ಈ ಜಾಲತಾಣವು ಸುದ್ದಿಯನ್ನು ಪ್ರಸಾರ ಮಾಡಿದೆ.

೧. ಈ ಜಾಲತಾಣದ ವರದಿಗಾರನು ಈ ಅಭಯಾರಣ್ಯದಲ್ಲಿ ಪ್ರವಾಸ ಮಾಡಿದಾಗ ಅವನಿಗೆ ಇಲ್ಲಿಯ ಅನಧಿಕೃತ ಗೋರಿಗಳು ಕಂಡು ಬಂದವು. ಅನೇಕ ಗೋರಿಗಳಂತೂ ನಿರ್ಬಂಧಿತ ಪ್ರದೇಶದಲ್ಲಿ ಅಂದರೆ ಕ್ರೂರ ಪ್ರಾಣಿಗಳಿಂದ ಹೆಚ್ಚು ಅಪಾಯವಿರುವುದರಿಂದ ಅಲ್ಲಿ ಪ್ರವಾಸಿಗರನ್ನು ವಾಹನದಿಂದ ಕೆಳಗೆ ಇಳಿಯುವುದನ್ನು ನಿಷೇಧಿಸಲಾಗಿದೆ ಆ ಸ್ಥಳದಲ್ಲಿ ಕಟ್ಟಿರುವುದು ಕಂಡು ಬಂದಿತು. ಈ ಗೋರಿಗಳ ವಿಷಯದಲ್ಲಿ ಅಭಯಾರಣ್ಯದ ‘ಗೈಡ್’ (ಅಭಯಾರಣ್ಯವನ್ನು ತೋರಿಸುವವ) ಇವನಿಗೂ ಈ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲದಿರುವುದು ಗಮನಕ್ಕೆ ಬಂದಿತು. ಈ ಗೋರಿಯ ಸ್ಥಳದಲ್ಲಿ ಯಾವುದೇ ವ್ಯಕ್ತಿ ಕಂಡು ಬರಲಿಲ್ಲ. ಒಂದು ವೇಳೆ ಪ್ರವಾಸಿಗರಿಗೆ ವಾಹನದಿಂದ ಕೆಳಗೆ ಇಳಿಯಲು ನಿರ್ಬಂಧವಿದ್ದರೆ, ಈ ಗೋರಿಯನ್ನು ಇಲ್ಲಿ ಯಾರು ಮತ್ತು ಹೇಗೆ ಕಟ್ಟಿದರು ? ಅವರು ಕಟ್ಟಡದ ಎಲ್ಲ ಸಾಮಗ್ರಿಗಳನ್ನು ಇಲ್ಲಿ ಹೇಗೆ ತಂದರು ? ಎನ್ನುವ ಪ್ರಶ್ನೆ ನಿರ್ಮಾಣವಾಗಿದೆ.

೨. ಅಭಯಾರಣ್ಯದಲ್ಲಿ ಮೊದಲು ಇಲ್ಲಿಯ ರಾಮನಗರದ ಅರಣ್ಯದಲ್ಲಿ ಒಂದು ರಸ್ತೆಗೆ ಹೊಂದಿಕೊಂಡಂತೆ ಒಂದು ದೊಡ್ಡ ಗೋರಿ ಕಂಡು ಬಂದಿತು. ಅಲ್ಲಿ ಒಬ್ಬ ವ್ಯಕ್ತಿಯೂ ಇರಲಿಲ್ಲ. ಅದರ ಮೇಲಿನ ಒಂದು ಫಲಕದಲ್ಲಿ ‘ಭೂರೆ ಶಾಹ ಶೇರ ಅಲಿ ಜುಲ್ಫಕಾರ ದಾದಮಿಯಾ ಕಾ ಉರ್ಸ’, ಎಂದು ಬರೆಯಲಾಗಿತ್ತು.

೩. ‘ಒಟ್ಟಾರೆ ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಚೌಕಿ ಇರುವಾಗ ಗೋರಿ ಯಾವಾಗ ಮತ್ತು ಯಾರು ಕಟ್ಟಿದ್ದಾರೆ ?’, ಎನ್ನುವ ಪ್ರಶ್ನೆ ಎದುರಾಗಿದೆ. ಇಲ್ಲಿಯ ಕೆಲವು ಪ್ರದೇಶಗಳು ಕೇವಲ ಹುಲಿಗಾಗಿ ಮೀಸಲಿಟ್ಟ ಪ್ರದೇಶವಾಗಿದೆಯೆಂದು ಹೇಳಲಾಗುತ್ತದೆ, ಅಲ್ಲಿಯೂ ಗೋರಿ ಕಂಡು ಬಂದಿತು.

೪. ಅಲ್ಲಿದ್ದ ರಮೇಶ ಹೆಸರಿನ ‘ಗೈಡ್’, ಇಲ್ಲಿ ಪ್ರವಾಸಿಗರಿಗೆ ಅಭಯಾರಣ್ಯ ತೋರಿಸುವ ಹೆಚ್ಚಿನ ವಾಹನಗಳು ಮುಸಲ್ಮಾನರದ್ದಾಗಿವೆ. ನೈನಿತಾಲ ಜಿಲ್ಲೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೧೨.೬೫ ರಷ್ಟಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಗೋರಿ ಕಟ್ಟುವ ವರೆಗೆ ಸರಕಾರ ಮತ್ತು ಅರಣ್ಯಾಧಿಕಾರಿಗಳು ಏನು ಮಾಡುತ್ತಿದ್ದರು? ಮತ್ತು ಈಗಲಾದರೂ ಅವರ ಮೇಲೆ ಕ್ರಮ ಕೈಗೊಳ್ಳುವುದೇ ? ಎಂಬ ಪ್ರಶ್ನೆ ನಿರ್ಮಾಣವಾಗಿದೆ ! ರಾಜ್ಯದ ಭಾಜಪ ಸರಕಾರವು ಇದರ ವಿಚಾರಣೆ ನಡೆಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !