ಗೋ ರಕ್ಷಣೆ ಮಾಡುವುದಕ್ಕಾಗಿ ನಿರುದ್ಯೋಗಿಗಳಿಗೆ ಹಸುಗಳನ್ನು ಸಾಕುವ ಜವಾಬ್ದಾರಿ ನೀಡಲಾಗುವುದು !

ಉತ್ತರ ಪ್ರದೇಶದ ನಂತರ ಈಗ ಉತ್ತರಾಖಂಡನ ಭಾಜಪ ಸರಕಾರದ ನಿರ್ಣಯ !

ಪ್ರತಿ ತಿಂಗಳು ೫ ಸಾವಿರ ರೂಪಾಯಿ ಸಂಬಳ ನೀಡಲಾಗುವುದು !

ಡೆಹರಾಡೂನ (ಉತ್ತರಾಖಂಡ) – ಇಲ್ಲಿಯ ಭಾಜಪ ಸರಕಾರ ‘ಗ್ರಾಮ ಗೋ ರಕ್ಷಣೆ ಸಮಿತಿ’ ಸ್ಥಾಪನೆ ಮಾಡುವ ಯೋಜನೆ ತಯಾರಿಸಿದೆ. ಈ ಸಮಿತಿಯಲ್ಲಿ ಪ್ರತಿಯೊಬ್ಬ ಸದಸ್ಯನಿಗೆ ನಿರ್ಗತಿಕ ಹಸುಗಳನ್ನು ಸಾಕುವ ಜವಾಬ್ದಾರಿ ನೀಡಲಾಗುವುದು. ಅದಕ್ಕಾಗಿ ಪ್ರತಿಯೊಬ್ಬ ಸದಸ್ಯನಿಗೆ ಪ್ರತಿ ತಿಂಗಳು ೫ ಸಾವಿರ ರೂಪಾಯಿ ಸಂಬಳ ನೀಡಲಾಗುವುದು. ಈ ಯೋಜನೆಗಾಗಿ ಮುಂದಿನ ೬ ತಿಂಗಳಿಗಾಗಿ ೧ ಕೋಟಿ ರೂಪಾಯಿಯ ಬಂಡವಾಳ ಹೂಡಲಾಗುವುದು. ಇದರಿಂದ ಕನಿಷ್ಠ ೫೦ ಗ್ರಾಮದ ನಿರುದ್ಯೋಗಿಗಳಿಗೆ ಲಾಭ ಆಗುವ ಸಾಧ್ಯತೆ ಇದೆ. ರಾಜ್ಯದ ಪಶುಸಂಗೋಪನ ಸಚಿವ ಸೌರಭ ಬಹುಗುಣಾ ಇವರು ಈ ಮಾಹಿತಿ ನೀಡಿದರು.


ಬಹುಗುಣ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ನಿರ್ಗತಿಕ ಪ್ರಾಣಿಗಳ ಸಂರಕ್ಷಣೆಗಾಗಿ ವಾರ್ಷಿಕ ಎರಡುವರೆ ಕೋಟಿ ಇಂದ ೧೫ ಕೋಟಿ ರೂಪಾಯಿ ಹೂಡುವ ನಿರ್ಣಯ ತೆಗೆದುಕೊಳ್ಳಲಾಗಿದೆ.

೨. ಉತ್ತರ ಪ್ರದೇಶ ಸರಕಾರದ ನಿರ್ಣಯದಂತೆ ನಾವು ಕೂಡ ಪ್ರತಿಯೊಂದು ಹಸುವಿನ ಮೇವುಗಾಗಿ ಪ್ರತಿ ದಿನದ ವೆಚ್ಚ ೬ ರೂಪಾಯಿಯಿಂದ ೩೦ ರೂಪಾಯಿ ಮಾಡಿದ್ದೇವೆ.

೩. ಗ್ರಾಮ ಗೋರಕ್ಷಣಾ ಸಮಿತಿಯ ಸದಸ್ಯರಿಗೆ ‘ಗೋರಕ್ಷಕ’ ಎಂದು ಹೇಳಲಾಗುವುದು. ಪ್ರತಿಯೊಬ್ಬರ ಹತ್ತಿರ ೪ ರಿಂದ ೫ ಹಸುಗಳ ಜವಾಬ್ದಾರಿ ಕೊಡಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

* ಉತ್ತರಖಂಡದಲ್ಲಿ ಪುಷ್ಕರ ಸಿಂಹ ಧಾಮಿ ಸರಕಾರದ ಅಭಿನಂದನೆ ! ಗೋಮಾತೆಯು ಎಲ್ಲಾ ರೀತಿಯಲ್ಲೂ ಮಹತ್ವದ್ದಾಗಿರುವುದರಿಂದ ಭಾಜಪದ ಇತರ ರಾಜ್ಯಗಳಲ್ಲಿ ಸಹ ಹಸುಗಳ ರಕ್ಷಣೆ ಮಾಡುವುದಕ್ಕಾಗಿ ಸರಕಾರಿ ಮಟ್ಟದಲ್ಲಿ ಇಂತಹ ಯೋಜನೆ ಜಾರಿ ಮಾಡುವುದು ಅವಶ್ಯಕವಾಗಿದೆ !