ಹರಿದ್ವಾರದಲ್ಲಿ ಕಾವಡ ಯಾತ್ರೆಯ ಮಾರ್ಗದಲ್ಲಿ ನಮಾಜ ಮಾಡುತ್ತಿದ್ದ ೮ ಜನರ ಬಂಧನ !

ಹರಿದ್ವಾರ (ಉತ್ತರಾಖಂಡ) – ಇದೀಗ ಹರಿದ್ವಾರ ತೀರ್ಥಕ್ಷೇತ್ರದಲ್ಲಿ ಕಾವಡ ಯಾತ್ರೆ ನಡೆಯುತ್ತಿದ್ದು, ಅದರ ಮೇಲೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದೆ. ಅದೆ ರೀತಿ ರಾಣಿಪುರ ಪ್ರದೇಶದಲ್ಲಿರುವ ಶಿವಾಲಿಕ ನಗರದಲ್ಲಿ ಜುಲೈ ೨೧ ರ ಸಂಜೆ, ವಾರದ ಮಾರುಕಟ್ಟೆಯ ಮಧ್ಯಭಾಗದಲ್ಲಿರುವ ಬೀದಿಯಲ್ಲಿ ೮ ಜನ ಮುಸ್ಲಿಮರು ಸಾಮೂಹಿಕ ನಮಾಜ ಸಲ್ಲಿಸಿದರು. ಈ ಮಾರ್ಗವಾಗಿ ಕವಾಡ ಯಾತ್ರೆ ಸಾಗುವುದಿತ್ತು. ನಮಾಜ ನಡೆಯುತ್ತಿರುವುದು ಪೊಲೀಸರಿಗೆ ತಿಳಿದ ತಕ್ಷಣ ೮ ಜನರನ್ನೂ ಬಂಧಿಸಲಾಯಿತು. ಬಂಧಿತರಲ್ಲಿ ಮಹಮ್ಮದ ನಿಜಾಮ, ನಸೀಮ, ಮುರ್ಸಲೀನ, ಅಶ್ರಫ, ಅಶ್ರಫ ಅಸಗರ, ಮುಸ್ತಫಾ, ಸಜ್ಜಾದ ಅಹಮ್ಮದ ಮತ್ತು ಇಕ್ರಮ ಸೇರಿದ್ದಾರೆ.

ಸಂಪಾದಕೀಯ ನಿಲುವು

ಯಾವುದಾದರೊಂದು ನೆಪಮಾಡಿ ಹಿಂದೂಗಳ ಮೇಲೆ ದಾಳಿ ಮಾಡುವ ಮತಾಂಧರಿಂದ ಕಾವಡ ಯಾತ್ರೆಯ ಸಮಯದಲ್ಲಿ ಅದೂ ಹರಿದ್ವಾರದಂತಹ ತೀರ್ಥಕ್ಷೇತ್ರದಲ್ಲಿ ಗಲಭೆಗಳನ್ನು ಸೃಷ್ಟಿಸಲು ಮಾಡಿರುವ ಪ್ರಯತ್ನ ಏಕಿರಬಾರದು?