ಭಾರತದಲ್ಲಿ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜಾತಿವಾದ ಮತ್ತು ಲಂಚದ ಕಾರಣದಿಂದಾಗಿ, ಬುದ್ಧಿವಂತ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ ! – ರಷ್ಯಾದ ದಾಳಿಯಲ್ಲಿ ಸಾವನ್ನಪ್ಪಿದ ನವೀನ್ ನ ತಂದೆ

ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜಾತಿವಾದ ಮತ್ತು ಲಂಚಗುಳಿತನದಿಂದಾಗಿ ವೈದ್ಯರಾಗಲು ಬಯಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳುತ್ತಿದ್ದಾರೆ, ಈ ರೀತಿಯ ಆರೋಪವನ್ನು ಯುಕ್ರೇನ್‌ನಲ್ಲಿ ರಷ್ಯಾದ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ನವೀನ ಶೇಖರಪ್ಪಾನ ತಂದೆ ಶೇಖರಪ್ಪಾ ಜ್ಞಾನಗೌಡಾ ಇವರು ಮಾಡಿದ್ದಾರೆ.

ಸಿದ್ಧಲಿಂಗ ಸ್ವಾಮೀಜಿ ಸಹಿತ ಪ್ರಮೋದ ಮುತಾಲಿಕ ಮತ್ತು ಇನ್ನೋರ್ವ ಹಿಂದುತ್ವನಿಷ್ಠರಿಗೆ ಮಾರ್ಚ ೩ರ ವರೆಗೆ ಕಲಬುರ್ಗಿ ಜಿಲ್ಲೆಯಲ್ಲಿ ಪ್ರವೇಶ ನಿರ್ಬಂಧ !

ಕೆಲವು ದಿನಗಳ ಹಿಂದೆ ಕಲಬುರ್ಗಿ ಜಿಲ್ಲೆಯ ಆಳಂದಿದಲ್ಲಿ ಶಿವಲಿಂಗ ಅಪವಿತ್ರಗೊಳಿಸಿದ ಶ್ರೀ ಈಶ್ವರಮಂದಿರದ ಮಹಾಶಿವರಾತ್ರಿ ನಿಮಿತ್ತ ಶುದ್ಧಿಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಹಸ್ತದಿಂದ ಶುದ್ಧೀಕರಣಗೊಳಿಸಲು ನಿರ್ಧರಿಸಲಾಗಿತ್ತು.

ಬೆಂಗಳೂರಿನ ದಂಗೆಯ ಪ್ರಕರಣದಲ್ಲಿ ಮತಾಂಧನಿಗೆ ಜಾಮೀನು ನೀಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ !

ಸರ್ವೋಚ್ಚ ನ್ಯಾಯಾಲಯವು ೨೦೨೦ರಲ್ಲಿ ನಡೆದ ಬೆಂಗಳೂರಿನ ದಂಗೆಯ ಪ್ರಕರಣದ ಆರೋಪಿಯಾದ ಮಹಮ್ಮದ ಕಲೀಮನಿಗೆ ಜಾಮೀನು ನೀಡಲು ನಿರಾಕರಿಸಿದೆ. ಕಲೀಮನು ಜಾಮೀನಿಗಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದನು. ಫೆಬ್ರುವರಿ ೨೮ರಂದು ಈ ಅರ್ಜಿಯನ್ನು ತಿರಸ್ಕರಿಸಲಾಯಿತು.

ಮಹಾವಿದ್ಯಾಲಯಗಳಿಂದ ಹಿಜಾಬನ್ನು ಧರಿಸಿ ಬಂದಂತಹ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ನಿರಾಕರಣೆ !

ಕರ್ನಾಟಕದ ಉಡುಪಿಯಲ್ಲಿನ ಪ್ರೀ ಯುನಿವರ್ಸಿಟಿ ಮಹಾವಿದ್ಯಾಲಯದಲ್ಲಿ ಪ್ರಯೋಗ ಪರೀಕ್ಷೆಯ ಸಮಯದಲ್ಲಿ ೩ ಮತಾಂಧ ವಿದ್ಯಾರ್ಥಿನಿಯರು ಹಿಜಾಬ ಧರಿಸಿ ಬಂದಿದ್ದರು. ಆದುದರಿಂದ ಮಹಾವಿದ್ಯಾಲಯದ ಆಡಳಿತವು ಅವರಿಗೆ ಪರೀಕ್ಷೆಗೆ ಹಾಜರಾಗಲು ಅನುಮತಿಯನ್ನು ನಿರಾಕರಿಸಿತು.

ಹಿಜಾಬ್ ವಿವಾದದ ಕುರಿತು ಅಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ಇಂಡಿಯನ್ ನ್ಯಾಷನಲ್ ಲೀಗ್‌ನ ಕರ್ನಾಟಕ ರಾಜ್ಯ ಅಧ್ಯಕ್ಷ ಅಬ್ದುಲ್ ರಹಿಮ್‌ನ ಬಂಧನ

ಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಗಳ ವಿರುದ್ಧ ಅಕ್ಷೇಪಾರ್ಹ ಪೊಸ್ಟ್ ಹಾಕಿದ್ದಕ್ಕಾಗಿ ಇಂಡಿಯನ್ ನ್ಯಾಷನಲ್ ಲೀಗ್ ಕರ್ನಾಟಕ ರಾಜ್ಯ ಅಧ್ಯಕ್ಷ ರಹೀಮ್‌ನನ್ನು ಸೈಬರ್ ಬ್ರಾಂಚ್ ಪೋಲಿಸರು ಬಂಧಿಸಿದ್ದಾರೆ.

ಮುಸಲ್ಮಾನರ ಕೊಲೆಯಾಗಿದಿದ್ರೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಕುಟುಂಬದವರನ್ನು ಭೇಟಿಯಾಗಲು ಬರುತ್ತಿದ್ದರು ! – ಭಾಜಪದ ಶಾಸಕ ಬಸನಗೌಡ ಪಾಟಿಲ್ ಯತ್ನಾಳ

ನಮ್ಮ ಹಿಂದೂ ಕಾರ್ಯಕರ್ತನ ಹತ್ಯೆಯಿಂದ ಇಡೀ ರಾಜ್ಯವೇ ಸ್ತಬ್ಧವಾಗಿದೆ. ಹತ್ಯೆ ಮಾಡಿದವರನ್ನು ಗಲ್ಲಿಗೆ ಏರಿಸದಿದ್ದರೆ ಹಿಂದೂಗಳ ಯುವಕರ ಹತ್ಯೆಯಾಗುತ್ತಲೇ ಇರುವುದು. ಹಿಂದೂಗಳ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಈ ಹತ್ಯೆಯ ಹಿಂದೆ ಅತಿ ದೊಡ್ಡ ಷಡ್ಯಂತ್ರ ಇದೆ. ಕೇರಳದ ಗಡಿ ಭಾಗದಿಂದ ಶಸ್ತ್ರಾಸ್ತ್ರ ಪೂರೈಕೆಯಾಗಿದೆ.

ಕರ್ನಾಟಕದ ಹಿಜಾಬ್ ವಿವಾದದ ಪ್ರಕರಣದಲ್ಲಿ ‘ಕ್ಯಾಂಪಸ ಫ್ರಂಟ ಆಪ್ ಇಂಡಿಯಾ’ದ ವಿರುದ್ಧ ದೂರು ದಾಖಲು

ಉಡುಪಿ ಜಿಲ್ಲೆಯ ಸರಕಾರಿ ಕನಿಷ್ಠ ಮಹಿಳಾ ಮಹಾವಿದ್ಯಾಲಯದ ಕೆಲವು ಶಿಕ್ಷಕರಿಗೆ ಬೆದರಿಕೆಯನ್ನು ಹಾಕಿದ ಪ್ರಕರಣದಲ್ಲಿ ‘ಕ್ಯಾಂಪಸ ಫ್ರಂಟ್ ಆಪ್ ಇಂಡಿಯಾ’ (ಸಿ.ಎಪ್.ಐ) ಈ ಸಂಘಟನೆಯ ಸದಸ್ಯರ ವಿರುದ್ಧ ಪ್ರಾಥಮಿಕ ಮಾಹಿತಿಯ ವರದಿ (ಎಫ್.ಐ.ಆರ್) ದಾಖಲಿಸಲಾಗಿದೆ ಎಂದು ಕರ್ನಾಟಕ ಸರಕಾರವು ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿತು.

ಬೆಂಗಳೂರಿನ ಮಹಾವಿದ್ಯಾಲಯದಲ್ಲಿ ಸಿಖ್ ವಿದ್ಯಾರ್ಥಿನಿಗೆ ಪಗಡಿ ತೆಗೆಯಲು ಹೇಳಿದ್ದರಿಂದ ಸಿಖ್‌ರಲ್ಲಿ ಆಕ್ರೋಶ

ಒಂದು ಮಹಾವಿದ್ಯಾಲಯದ ವ್ಯವಸ್ಥಾಪಕರು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಸಂದರ್ಭ ನೀಡುತ್ತಾ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ‘ತುರ್ಬಾನ್’ ಅಂದರೆ ಪಗಡಿ ತೆಗೆಯಲು ಹೇಳಿದಾಗ ವಿದ್ಯಾರ್ಥನಿಯು ಪಗಡಿ ತೆಗೆಯಲು ನಿರಾಕರಿಸಿದಳು.

ಅಂತಿಮ ತೀರ್ಪು ನೀಡುವ ವರೆಗೆ ಧಾರ್ಮಿಕ ವಸ್ತ್ರಗಳ ಮೇಲೆ ನಿರ್ಬಂಧವಿರಲಿದೆ ! – ಕರ್ನಾಟಕ ಉಚ್ಚ ನ್ಯಾಯಾಲಯದ ಸ್ಪಷ್ಟ ಹೇಳಿಕೆ

ಹಿಜಾಬಿನ ಮೇಲೆ ನಿರ್ಬಂಧ ಹೇರುವ ಬಗೆಗಿನ ಅರ್ಜಿಯ ಮೇಲೆ ಅಂತಿಮ ತೀರ್ಪು ನೀಡುವ ವರೆಗೆ ಶಾಲೆ ಮತ್ತು ಮಹಾವಿದ್ಯಾಲಯಗಳು ನಿರ್ಧರಿಸಿರುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪಾಲಿಸಲೇಬೇಕು, ಎಂಬ ಸ್ಪಷ್ಟ ಹೇಳಿಕೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಫೆಬ್ರುವರಿ ೨೩ರಂದು ನೀಡಿದೆ.

ಹಿಂದೂಗಳ ಪರವಾಗಿ ಧ್ವನಿ ಎತ್ತಿದ್ದಕ್ಕೆ ಹರ್ಷನ ಹತ್ಯೆ !

‘ಹರ್ಷ ಹಿಂದೂ’ ಎಂದೂ ಕರೆಯಲ್ಪಡುವ ಹರ್ಷ್ ಹಿಂದೂ ಕಾರ್ಯಕರ್ತನಾಗಿದ್ದ. ಆತ ಎಲ್ಲಾ ಪ್ರಕಾರದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ. ಅವರು ಇತ್ತಿಚೆಗೆ ಹಿಂದೂಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದ. ಹಾಗಾಗಿ ಕೆಲವರು ಕೋಪಗೊಂಡಿದ್ದರು. ಕೆಲ ಸ್ಥಳೀಯರು ಕೂಡಾ ಆತನ ವಿರುದ್ಧ ಹರಿಹಾಯ್ದಿದ್ದರು. ಅದಕ್ಕಾಗಿ ಅವನನ್ನು ಹತ್ಯೆ ಮಾಡಲಾಯಿತು.