ಮಂಗಳೂರಿನ ಚೈತನ್ಯದಾಯಕ ವಾತಾವರಣದಲ್ಲಿ ಸಂಪನ್ನಗೊಂಡ ೩ ದಿನಗಳ ‘ನ್ಯಾಯವಾದಿ ಸಾಧನಾ ಶಿಬಿರ’
ಮಂಗಳೂರು – ಇಂದು ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡುವುದು ಮತ್ತು ಯೋಗ್ಯ ಕೃತಿಗಳಿಗಾಗಿ ನ್ಯಾಯ ಒದಗಿಸುವುದು ನ್ಯಾಯವಾದಿಗಳ ಕರ್ತವ್ಯವಾಗಿದೆ. ಅಂತಹ ಅನೇಕ ಘಟನೆಗಳನ್ನು ಎದುರಿಸಲು ನ್ಯಾಯವಾದಿಗಳು ಸಾಧನೆಯನ್ನು ಮಾಡುವುದು, ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಮಾಡುವುದು ಅತ್ಯಾವಶ್ಯಕವಾಗಿದೆ. ಇಂದು ಹಿಂದೂ ವಿಧಿಜ್ಞ ಪರಿಷತ್ ನಲ್ಲಿ ಅನೇಕ ನ್ಯಾಯವಾದಿಗಳು ರಾಷ್ಟ್ರ ಮತ್ತು ಧರ್ಮ ಇವುಗಳ ಸೇವೆಯೊಂದಿಗೆ ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ಸಂತ ಪದವಿಯನ್ನು ತಲುಪಿದ್ದಾರೆ. ಅದೇ ಪ್ರೇರಣೆಯನ್ನು ಪಡೆದು ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಹಿಂದೂ ವಿಧಿಜ್ಞ ಪರಿಷದ್‌ನ ನ್ಯಾಯವಾದಿ ಸಂಘಟಕರಾದ ನ್ಯಾಯವಾದಿ ನಿಲೇಶ ಸಾಂಗೋಲಕರ ಇವರು ಹೇಳಿದರು.
ಮೇ ೧೩ ರಿಂದ ೧೫ ರ ವರೆಗೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಧರ್ಮ ಮತ್ತು ರಾಷ್ಟ್ರ ಪ್ರೇಮಿ ನ್ಯಾಯವಾದಿಗಳಿಗಾಗಿ ‘ಆಧ್ಯಾತ್ಮಿಕ ಸಾಧನಾ ಶಿಬಿರ’ವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
ಈ ಶಿಬಿರದ ಉದ್ಘಾಟನೆಯನ್ನು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಮತ್ತು ನ್ಯಾಯವಾದಿ ಶ್ರೀ ನೀಲೇಶ ಸಾಂಗೊಲಕರ್ ಇವರು ದೀಪಪ್ರಜ್ವಲನೆಯ ಮೂಲಕ ಮಾಡಿದರು. ಈ ಶಿಬಿರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ನ್ಯಾಯವಾದಿಗಳು ಉಪಸ್ಥಿತರಿದ್ದರು. ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ (ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟ), ಇವರು ಹಿಂದೂ ರಾಷ್ಟ್ರದ ಸ್ಥಾಪನೆಯ ಸಂಕಲ್ಪ ಮತ್ತು ಹಲಾಲ ಅರ್ಥವ್ಯವಸ್ಥೆ ಇವುಗಳ ಬಗ್ಗೆ ಉಪಸ್ಥಿತರಿಗೆ ಮಾಹಿತಿ ನೀಡಿದರು. ಸನಾತನ ಸಂಸ್ಥೆಯ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಧರ್ಮಪ್ರಚಾರಕಿ ಸೌ. ಮಂಜಳಾ ಗೌಡ ಇವರು ‘ಪ್ರಾರ್ಥನೆಂಯ ಮಹತ್ವ ಮತ್ತು ಸ್ವಭಾವದೋಷ ನಿರ್ಮೂಲನೆ ಹೇಗೆ ಮಾಡಬೇಕು ?’, ಈ ಬಗ್ಗೆ ಸವಿಸ್ತಾರವಾಗಿ ಮಾರ್ಗದರ್ಶನ ಮಾಡಿದರು. ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಸಮಿತಿಯ ವ್ಯಾಪಕ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಅನೇಕ ನ್ಯಾಯವಾದಿಗಳು ‘ನಮಗೆ ೩ ಅಥವಾ ೬ ತಿಂಗಳಿಗೊಮ್ಮೆ ಇಂತಹ ಶಿಬಿರಗಳ ಆಯೋಜನೆ ಮಾಡಿ’ ಎಂದು ಹೇಳಿದರು.