ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಜಾಗದಲ್ಲಿ ೨ ಮಹಿಳೆಯರಿಂದ ನಮಾಜ ಪಠಣ

ಬೆಂಗಳೂರು – ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರು ಕುಳಿತುಕೊಳ್ಳುವ ಜಾಗದಲ್ಲಿ ಇಬ್ಬರು ಮಹಿಳೆಯರು ನಮಾಜ್ ಸಲ್ಲಿಸುತ್ತಿರುವ ವಿಡಿಯೋ ’ಸಂವಾದ’ ಎಂಬ ಯುಟ್ಯೂಬ ಚಾನೆಲನಲ್ಲಿ ಪ್ರಸಾರವಾಗಿದೆ. ಅದಕ್ಕೆ ’ಕರ್ನಾಟಕ ಹೈಕೋರ್ಟನಲ್ಲಿ ನಮಾಜ್’ ಎಂದು ಶೀರ್ಷಿಕೆ ನೀಡಲಾಗಿದೆ. ಅನುಮತಿಯಿಲ್ಲದೆ ನ್ಯಾಯಾಲಯದಲ್ಲಿ ಚೀತ್ರಿಕರಣ ಮಾಡಿದ್ದಕ್ಕಾಗಿ ’ಸಂವಾದ’ ಯುಟ್ಯೂಬ ಚಾನೆಲ ವಿರುದ್ಧವೇ ಅಪರಾಧವನ್ನು ನೋಂದಾಯಿಸಲಾಗಿದೆ. ’ಈ ರೀತಿಯ ವಿಡಿಯೋಗಳನ್ನು ಮಾಡಿ ಅವು ಪ್ರಸಾರ ಮಾಡಿ ಎರಡು ಧರ್ಮಗಳ ವಿರುದ್ಧ ದ್ವೇಷ ಹರಡುವ ಪ್ರಯತ್ನ ಇದಾಗಿದೆ ಎಂದು ಅಪರಾಧ ನೋಂದಾಯಿಸುವಾಗ ಹೇಳಲಾಗಿದೆ. ಈಗ ಯುಟ್ಯೂಬನಿಂದ ವಿಡಿಯೋ ಅಳಿಸಲಾಗಿದೆ. ನ್ಯಾಯವಾದಿ ಆರ ಪುಟ್ಟರೈಯ್ಯಾ ಇವರು ನ್ಯಾಯಾಧೀಶರ ಜಾಗದಲ್ಲಿ ನಮಾಜ್ ಸಲ್ಲಿಸಿದ ಇಬ್ಬರು ಮಹಿಳೆಯರ ವಿರುದ್ಧ ನ್ಯಾಯಾಲಯದ ರಿಜಿಸ್ಟ್ರಾರಿಗೆ ದೂರು ನೀಡಿದ್ದಾರೆ. (ಇಂತಹ ಬೇಡಿಕೆಯನ್ನು ಏಕೆ ಮಾಡಬೇಕು? ನ್ಯಾಯಾಲಯದ ಆಡಳಿತವು ಈ ರೀತಿ ಆಗಿರುವುದು ತಪ್ಪು ಎಂದು ಭಾವಿಸುವದಿಲ್ಲವೇ? ಅವರು ಅದಕ್ಕೆ ಅನುಮತಿ ನೀಡಿದ್ದಾರೆಯೇ? – ಸಂಪಾದಕರು)

ಸಂಪಾದಕೀಯ ನಿಲುವು

* ನಮಾಜ ಪಠಣದ ವಿಡಿಯೋ ಪ್ರಸಾರ ಮಾಡುವ ಯುಟ್ಯೂಬ ಚಾನೆಲ ಮೇಲೆ ಅಪರಾಧ ದಾಖಲಾಗಿದೆ!

* ಮಸೀದಿಯಲ್ಲಿ ಮಹಿಳೆಯರಿಗೆ ನಮಾಜ ಮಾಡಲು ಅವಕಾಶವಿಲ್ಲದಿರುವಾಗ ಅನುಮತಿಯಿಲ್ಲದೆ ನ್ಯಾಯಾಲಯದಲ್ಲಿ ನಮಾಜು ಮಾಡಬಹುದೇ?