ಮಸೀದಿಯ ಜಾಗದಲ್ಲಿ ಹಿಂದೆ ದೇವಸ್ಥಾನಗಳಿರುವ ಹೇಳಿಕೆಗಳನ್ನು ಮುಸಲ್ಮಾನರು ವಿರೋಧಿಸಬೇಕು ! – ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಎಚ್ಚರಿಕೆ

ಬೆಂಗಳೂರು – ಮಸೀದಿಯ ಜಾಗದಲ್ಲಿ ಹಿಂದೆ ದೇವಸ್ಥಾನಗಳಿರುವ ಹೇಳಿಕೆಗಳನ್ನು ಮುಸಲ್ಮಾನರು ವಿರೋಧಿಸಬೇಕು, ಎಂಬ ಎಚ್ಚರಿಕೆಯನ್ನು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಎಂಬ ಜಿಹಾದಿ ಸಂಘಟನೆಯು ಇತ್ತೀಚೆಗೆ ನಡೆದ ತಮ್ಮ ಒಂದು ಸಭೆಯಲ್ಲಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಒಂದು ಪತ್ರವನ್ನು ಪ್ರಸಾರಿಸಲಾಗಿದೆ.

ಈ ಪತ್ರದಲ್ಲಿ, ಜ್ಞಾನವಾಪಿ ಮಸೀದಿ ಹಾಗೂ ಮಥುರಾದಲ್ಲಿನ ಶಾಹೀ ಇದಗಾಹ ಮಸೀದಿಗಳ ವಿರುದ್ಧ ರಾ. ಸ್ವ. ಸಂಘ ಪರಿವಾರದ ಸಂಘಟನೆಗಳ ಅರ್ಜಿಗಳು ‘ಧಾರ್ಮಿಕ ಸ್ಥಳಗಳ ಕಾನೂನು ೧೯೯೧’ರ ವಿರುದ್ಧ ಇವೆ. ನ್ಯಾಯಾಲಯವು ಈ ಅರ್ಜಿಗಳ ಮೇಲೆ ಆಲಿಕೆಯನ್ನು ನಡೆಸಬಾರದು. ಸರ್ವೋಚ್ಚ ನ್ಯಾಯಾಲಯವು ಜ್ಞಾನವಾಪಿಯಲ್ಲಿನ ವಜೂಖಾನೆಯ (ನಮಾಜಿನ ಮೊದಲು ಕೈ-ಕಾಲು ತೊಳೆಯುವ ಜಾಗ) ಬಳಕೆಯ ಮೇಲೆ ನಿರ್ಬಂಧ ಹೇರಿರುವುದು ನಿರಾಶಕರವಾಗಿದೆ. ನ್ಯಾಯಾಲಯಕ್ಕೆ ಇಂತಹ (ಜ್ಞಾನವಾಪಿಯಲ್ಲಿ ಶಿವಲಿಂಗ ದೊರೆತಿರುವುದರ) ಅರ್ಜಿಗಳ ಮೇಲೆ ಪುರಾವೆಗಳ ಆಧಾರದಲ್ಲಿ ತಪಾಸಣೆಯನ್ನು ಮಾಡುವ ಆವಶ್ಯಕತೆಯ ಅರಿವಾಗದೇ, ಅವರು ಆ ಸ್ಥಳವನ್ನು ಮುಚ್ಚಿದ್ದಾರೆ. ಇದರಿಂದ ದೇಶದಲ್ಲಿ ಯಾರಾದರೂ ಎಲ್ಲಿಬೇಕಾದರೂ ಧಾರ್ಮಿಕ ಸ್ಥಳಗಳ ಬಗ್ಗೆ ಇಂತಹ ಅರ್ಜಿಗಳನ್ನು ದಾಖಲಿಸುವ ರೂಢಿ ನಿರ್ಮಾಣವಾಗಬಹುದು. (ಎಲ್ಲಿಯೂ ಅಲ್ಲ, ಆದರೆ ಎಲ್ಲಿ ಹಿಂದೂ ದೇವಸ್ಥಾನಗಳನ್ನು ಕೆಡವಿ ಮಸೀದಿ ಹಾಗೂ ದರ್ಗಾಗಳನ್ನು ಕಟ್ಟಲಾಗಿದೆಯೋ, ಆ ಜಾಗಗಳಲ್ಲಿ ಅರ್ಜಿ ನೀಡಲಾಗುತ್ತಿದೆ, ಎಂಬುದನ್ನು ಗಮನದಲ್ಲಿಡಬೇಕು ! – ಸಂಪಾದಕರು)

ಸಂಪಾದಕೀಯ ಭೂಮಿಕೆ

* ‘ದೇಶದಲ್ಲಿನ ಸಾವಿರಾರು ದೇವಸ್ಥಾನಗಳನ್ನು ಕೆಡವಿ ಮಸೀದಿ, ದರ್ಗಾಗಳನ್ನು ಕಟ್ಟಿರುವ ಇತಿಹಾಸವಿದೆ. ಆದುದರಿಂದ ಮುಸಲ್ಮಾನ ಸಂಘಟನೆಗಳು ಮುಂದೆ ಬಂದು ಈ ಜಾಗಗಳನ್ನು ಹಿಂದೂಗಳಿಗೆ ಒಪ್ಪಿಸಿ ಜಾತ್ಯಾತೀತತೆಯ ಆದರ್ಶವನ್ನು ಜಗತ್ತಿನ ಎದುರು ಸಾದರಪಡಿಸಬೇಕು’, ಎಂದು ಜಾತ್ಯಾತೀತವಾದಿಗಳು ಹಾಗೂ ಪುರೋ(ಅಧೋ)ಗಾಮಿಗಳು ಕರೆ ನೀಡುವರೇ ?

* ಇಂತಹ ಬೆದರಿಕೆಗಳಿಂದ ಕಾನೂನು ಮತ್ತು ಸುವ್ಯವಸ್ಥೆಯು ಕೆಡುವುದಿಲ್ಲವೇ ? ಸಮಾಜದಲ್ಲಿ ಆಗಾಗ ಅಶಾಂತಿಯನ್ನು ನಿರ್ಮಿಸುವ ಇಂತಹ ಸಂಘಟನೆಗಳ ಮೇಲೆ ಸರಕಾರವು ನಿರ್ಬಂಧವನ್ನು ಹೇರಲೇಬೇಕು !