ಶ್ರೀರಂಗಪಟ್ಟಣ (ಕರ್ನಾಟಕ) ದಲ್ಲಿರುವ ಜಾಮಾ ಮಸೀದಿಯನ್ನು ಆಂಜನೇಯ ದೇವಸ್ಥಾನದ ಮೇಲೆ ಕಟ್ಟಲಾಗಿದೆ ಎಂದು ಹಿಂದೂಗಳ ಅಭಿಪ್ರಾಯ

ಬೆಂಗಳೂರು (ಕರ್ನಾಟಕ) ವಾರಾಣಸಿಯಲ್ಲಿನ ಜ್ಞಾನವಾಪಿ ಮಸೀದಿಯಲ್ಲಿ ನಡೆಸಿರುವ ಸಮೀಕ್ಷೆ ಮತ್ತು ಆಗ್ರಾದಲ್ಲಿನ ತಾಜ್ ಮಹಲ್ ನಲ್ಲಿ ಶಿವಲಿಂಗ ಇರುವ ಚರ್ಚೆಯ ನಂತರ ಈಗ ಕರ್ನಾಟಕದ ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ ಸಂದರ್ಭದಲ್ಲಿ ಇದೇ ರೀತಿಯ ದಾವೆ ಮಾಡಲಾಗುತ್ತಿದೆ. ಟಿಪ್ಪು ಸುಲ್ತಾನನ ಆಡಳಿತದಲ್ಲಿ ಇಲ್ಲಿಯ ಆಂಜನೇಯ ದೇವಸ್ಥಾನದ ಮೇಲೆ ಜಾಮಿಯಾ ಮಸೀದಿ ಕಟ್ಟಲಾಗಿದೆ ಎಂಬುದರ ಐತಿಹಾಸಿಕ ಪುರಾವೆಗಳು ಇವೆ. ಇದು ಮೂಲ ಮಂದಿರದ ಕಟ್ಟಡವಾಗಿದ್ದು ಅದನ್ನು ಮಸೀದಿಯಲ್ಲಿ ರೂಪಾಂತರಿಸಲಾಗಿದೆ. ಎಂದು ರಾಜ್ಯದ ಕೆಲವು ಹಿಂದುತ್ವನಿಷ್ಠ ಸಂಘಟನೆಗಳ ಹೇಳಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಹಿಂದುತ್ವನಿಷ್ಠರು ಈ ಮಸೀದಿಯಲ್ಲಿ ಆಂಜನೇಯ ಮೂರ್ತಿಯ ಪೂಜೆ ಮಾಡಲು ಅನುಮತಿ ಕೋರಿದ್ದಾರೆ. ಬೇಡಿಕೆಗಾಗಿ ಅವರು ಉಪ ಆಯುಕ್ತರಿಗೆ ನಿವೇದನೆಯನ್ನು ಸಹ ನೀಡಲಾಗಿದೆ. ನಿವೇದನೆಯಲ್ಲಿ ಪುರಾತತ್ವ ಇಲಾಖೆ ಐತಿಹಾಸಿಕ ತತ್ವಗಳ ಅಭ್ಯಾಸ ನಡೆಸಿ ಈ ಪ್ರಕರಣದ ಅನ್ವೇಷಣೆ ಮಾಡಬೇಕು ಎಂದು ಹೇಳಲಾಗಿದೆ

ಸಂಪಾದಕೀಯ ಭೂಮಿಕೆ

ಅನ್ಯಾಯ ಮತ್ತು ಶಾಂತಿ ಒಂದೇ ಸಮಯದಲ್ಲಿ ಒಟ್ಟಿಗೆ ಇರಲು ಸಾಧ್ಯವಿಲ್ಲ. ಇದನ್ನು ಅರಿತುಕೊಂಡು ಈಗ ಕೇಂದ್ರ ಸರಕಾರವು ಪ್ಲೇಸಸ್ ಅಫ್ ವರ್ಷಿಪ್ ಆಕ್ಟ್ ಅನ್ನು ಒಂದೇ ಸಲಕ್ಕೆ ರದ್ದುಪಡಿಸಿ ಹಿಂದೂಗಳ ಎಲ್ಲಾ ಮಂದಿರಗಳನ್ನು ಹಿಂದೂಗಳ ಸ್ವಾಧೀನಕ್ಕೆ ಒಪ್ಪಿಸಬೇಕು. ಆಗ ಈ ರೀತಿಯಲ್ಲಿ ಒಂದೊಂದೇ ಮಂದಿರಗಳ ಮೇಲೆ ಹಿಂದೂಗಳು ತಮ್ಮ ಅಧಿಕಾರ ಇದೆ ಎಂದೂ ಬೇಡಿಕೆ ನೀಡಲು ಶಕ್ತಿ ವ್ಯಯ ಮಾಡಬೇಕಾಗುವುದಿಲ್ಲ .