ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡಾ. ಹೆಡಗೇವಾರ್ ಅಲ್ಲದೆ ಜಿನ್ನಾ ಪಾಠ ಕಲಿಸುವಿರಾ ? – ಈಶ್ವರಪ್ಪ, ಕರ್ನಾಟಕದ ಭಾಜಪ ಶಾಸಕ

ಬೆಂಗಳೂರು – ಶಾಲಾ ಪಠ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ ಬಳಿರಾಮ್ ಹೆಡಗೇವಾರ್ ಅಲ್ಲ, ಮೊಹಮ್ಮದ್ ಅಲಿ ಜಿನ್ನಾ ಇವರ ಪಾಠವನ್ನು ಕಲಿಸುವಿರಾ ? ರಾಜ್ಯದ ಮಾಜಿ ಸಚಿವ ಹಾಗೂ ಭಾಜಪ ಶಾಸಕ ಈಶ್ವರಪ್ಪ ಆಕ್ರೋಶ ಭರಿತ ವಿಚಾರಿಸಿದ್ದಾರೆ. ಈಶ್ವರಪ್ಪ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಡಾ. ಹೆಡಗೇವಾರ್ ಅವರ ಭಾಷಣಗಳ ಆಧಾರದ ಮೇಲೆ ಪಾಠವನ್ನು ಸೇರಿಸುವ ಉದ್ದೇಶವು ‘ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯನ್ನು ಬಲಪಡಿಸುವುದಾಗಿದೆ’, ಎಂದು ಹೇಳಿದರು.

(ಸೌಜನ್ಯ : Public TV)

ರಾಜ್ಯದಲ್ಲಿ ೩೬ ಸಾವಿರ ದೇವಾಲಯಗಳು ಕೆಡವಿ ಮಸೀದಿಗಳನ್ನು ನಿರ್ಮಿಸಿದ ಸ್ಥಳಗಳ ಮೇಲೆ ಹಿಂದೂಗಳು ನ್ಯಾಯಾಂಗ ದಾವೆಯನ್ನು ಮಾಡಲಿದೆ !
ಈಶ್ವರಪ್ಪ ತಮ್ಮ ಮಾತನ್ನು ಮುಂದುವರೆಸುತ್ತಾ, ರಾಜ್ಯದಲ್ಲಿ ೩೬ ಸಾವಿರ ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಲಾಗಿದೆ. ಮಸೀದಿಗಳನ್ನು ಬೇರೆಲ್ಲಿಯಾದರೂ ನಿರ್ಮಿಸಬಹುದು ಮತ್ತು ಅಲ್ಲಿ ನಮಾಜ ಮಾಡಬಹುದು; ಆದರೆ, ನಮ್ಮ ದೇವಾಲಯಗಳನ್ನು ಕೆಡವಿ ಅದರ ಮೇಲೆ ಮಸೀದಿಗಳನ್ನು ಕಟ್ಟಲು ಅವಕಾಶ ನೀಡುವುದಿಲ್ಲ. ಈ ಎಲ್ಲಾ ೩೬ ಸಾವಿರ ದೇವಾಲಯಗಳು ಕಾನೂನುಬದ್ಧವಾಗಿ ದಾವೆ ಮಾಡಲಾಗುವುದು ಎಂದು ಹೇಳಿದರು.