
‘ಇಂದಿನ ನಮ್ಮ ಯುವ ಪೀಳಿಗೆಯು ಹೆಚ್ಚಾಗಿ ಭೌತಿಕವಾದಿ ಮತ್ತು ವ್ಯಾವಹಾರಿಕವಾಗಿದೆ. ಅವರು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಹಾಗೆಯೇ ಅವರು ತಮ್ಮ ಧರ್ಮ ಮತ್ತು ಸಂಪ್ರದಾಯಗಳಿಂದ ದೂರ ಹೋಗುತ್ತಿದ್ದಾರೆ’ ಎಂದು ಹಲವು ಬಾರಿ ಹೇಳಲಾಗುತ್ತದೆ. ಇದೆಲ್ಲವೂ ನಿಜವೂ ಇರಬಹುದು; ಆದರೆ ನಾನು ಇನ್ನೂ ಆಶಾವಾದಿಯಾಗಿದ್ದೇನೆ. ನಮ್ಮ ಸುತ್ತಲಿನ ಅನಿಶ್ಚಿತತೆ ಮತ್ತು ಅಸ್ಥಿರತೆ ಹೆಚ್ಚಾದಾಗ, ವ್ಯಕ್ತಿಯು ಸಹಾಯ, ಆಸರೆ ಮತ್ತು ಸ್ಥಿರತೆಯನ್ನು ಪಡೆಯಲು ಅಧ್ಯಾತ್ಮ, ಧರ್ಮ ಹಾಗೂ ದೇವರ ಕಡೆಗೆ ತಿರುಗುತ್ತಾನೆ ಎಂಬ ನಂಬಿಕೆ ನನಗಿದೆ. ಇಂದಿನ ಜಗತ್ತು ತೀವ್ರ ಅನಿಶ್ಚಿತತೆಯ ಮೂಲಕ ಸಾಗುತ್ತಿದೆ, ವಿಶೇಷವಾಗಿ ಯುವ ಪೀಳಿಗೆ. ಈ ಪೀಳಿಗೆಯು ಜಗತ್ತಿನಲ್ಲಿ ವೇಗವಾಗಿ ಆಗುತ್ತಿರುವ ಆಮೂಲಾಗ್ರ ಬದಲಾವಣೆಗಳನ್ನು ಎದುರಿಸುತ್ತಿದೆ. ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನದಿಂದಾಗಿ ಈ ಪೀಳಿಗೆಗೆ ಕೆಲಸ ಪಡೆಯುವುದು ಕಷ್ಟವಾಗುತ್ತಿದೆ. ಕೆಲಸದಲ್ಲಿ ಇರುವವರಿಗೂ ಅದನ್ನು ಉಳಿಸಿಕೊಳ್ಳುವುದು ಕಷ್ಟದಾಯಕವಾಗಿದೆ. ಈ ಪರಿಸ್ಥಿತಿಯು ಭಾರತದ ಯುವಕರಿಗೆ ಇನ್ನೂ ಹೆಚ್ಚಿನ ಗಂಭೀರವಾಗಿದೆ. ಜಗತ್ತಿನಲ್ಲೇ ಅತಿ ದೊಡ್ಡ ಯುವ ಜನಸಂಖ್ಯೆ ನಮ್ಮ ದೇಶದಲ್ಲಿ ಇರುವುದರಿಂದ ಸ್ಪರ್ಧೆಯು ತೀವ್ರವಾಗಿದೆ. ಮನುಷ್ಯರು ಮತ್ತು ಸಂಬಂಧಗಳು ಹೆಚ್ಚು ವ್ಯಾವಹಾರಿಕವಾಗುತ್ತಿರುವ ಇಂತಹ ವಾತಾವರಣದಲ್ಲಿ ‘ಯಾರನ್ನು ನಂಬಬೇಕು ?’ ಎಂದು ಗುರುತಿಸುವುದು ಸಹ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಯುವ ಪೀಳಿಗೆಯು ಅಧ್ಯಾತ್ಮದ ಕಡೆಗೆ ಒಲವು ತೋರುವ ಸಾಧ್ಯತೆ ತುಂಬಾ ಹೆಚ್ಚಿದೆ. ತಮ್ಮ ಜೀವನಕ್ಕೆ ಸರಿಯಾದ ದಿಕ್ಕನ್ನು ಕಂಡುಕೊಳ್ಳಲು ಅವರು ಅಧ್ಯಾತ್ಮದ ಆಸರೆಯನ್ನು ಪಡೆಯುತ್ತಾರೆ. ಮುಂಬರುವ ದಿನಗಳಲ್ಲಿ ಇದು ದೇಶಕ್ಕೆ ಅತ್ಯಂತ ಸಕಾರಾತ್ಮಕವಾಗಿ ಪರಿಣಮಿಸಲಿದೆ; ಏಕೆಂದರೆ ದೇವರು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾನೆ. ಅವರ ಇಚ್ಛೆಗಳು ಮತ್ತು ಅಗತ್ಯಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದನ್ನು ಕಲಿಸುವ ಸರಿಯಾದ ಜೀವನಶೈಲಿಯನ್ನು ಅವರಿಗೆ ಕಲಿಸುತ್ತಾನೆ. ಹಾಗೆಯೇ ಕೇವಲ ಸ್ವಂತ ಆಲೋಚನೆಗಳಿಂದ ಆಚೆಗೆ ಬಂದು ಸಮಾಜ ಮತ್ತು ದೇಶದ ಅಗತ್ಯತೆಗಳ ಬಗ್ಗೆ ಯೋಚಿಸುವ ಮನೋಭಾವವನ್ನೂ ಅವರ ಮನಸ್ಸಿನಲ್ಲಿ ಬಿತ್ತುತ್ತಾನೆ.’ – ಸೌ. ಸುಜಾತಾ ಜೋಶಿ, ಮುಂಬಯಿ (೨೮.೧೦.೨೦೨೫)
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….
ಸ್ಥೂಲ ಶರೀರ ಮತ್ತು ಸೂಕ್ಷ್ಮ ಮನಸ್ಸಿನ ನಿಯಂತ್ರಣಕ್ಕಾಗಿ ಪ್ರಾಣಾಯಾಮದ ಮಹತ್ವ !