ಆನ್ ಲೈನ್ ಗೇಮಿಂಗ್ ನೆಪದಲ್ಲಿ ಭಯೋತ್ಪಾದನೆಯ ಜಾಲ !

ತನಿಖಾ ಸಂಸ್ಥೆಗಳ ಮೂಲಗಳು ನೀಡಿರುವ ಮಾಹಿತಿಯಂತೆ, ಈ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ ಶಂಕಿತ ಆರೋಪಿಗಳು ಸಂವಹನಕ್ಕಾಗಿ ಪಬ್ ಜಿ ಮತ್ತು ಫ್ರೀ ಫೈರ್ ನಂತಹ ಜನಪ್ರಿಯ ಆನ್‌ಲೈನ್ ಗೇಮ್ಸ್ಗಳನ್ನು ಬಳಸುತ್ತಿದ್ದರು.
ಅ. ಆರಂಭಿಕ ಸಂಪರ್ಕ : ಗೇಮಿಂಗ್ ಪ್ಲಾಟ್‌ಫಾರ್ಮ್ಗಳ ಚಾಟ್‌ನಲ್ಲಿ (Iಟಿ-gಚಿme ಛಿhಚಿಣ) ಪರಿಚಯ ಬೆಳೆಸಿಕೊಳ್ಳುತ್ತಿದ್ದರು.
ಆ. ನಿಧಾನವಾಗಿ ‘ಬ್ರೈನ್‌ವಾಶ್ (ಮನಃಪರಿವರ್ತನೆ): ಆರಂಭದಲ್ಲಿ ಸ್ನೇಹಪರವಾಗಿ ಮಾತನಾಡಿ, ನಂತರ ಧಾರ್ಮಿಕ ಕಟ್ಟರ ವಿಚಾರಧಾರೆಗಳ ವಿಷ ಬೀಜ ಬಿತ್ತುತ್ತಿದ್ದರು.
ಇ. ಎನ್‌ಕ್ರಿಪ್ಟೆಡ್ ಆಪ್ಸ್ ಬಳಕೆ : ಒಮ್ಮೆ ವಿಶ್ವಾಸ ಗಳಿಸಿದ ಬಳಿಕ, ತನಿಖಾ ಸಂಸ್ಥೆಗಳ ಕಣ್ತಪ್ಪಿಸಲು ಸಂಭಾಷಣೆಯನ್ನು ಟೆಲಿಗ್ರಾಮ್ ಅಥವಾ ಸಿಗ್ನಲ್ನಂತಹ ಆಪ್ಸ್ಗಳಿಗೆ ವರ್ಗಾಯಿಸುತ್ತಿದ್ದರು. ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವನ್ನು ಪ್ರಗತಿಯ ಸಾಧನೆ ಎಂದು ಪರಿಗಣಿಸಲಾಗುತ್ತದೆಯೋ, ಅದೇ ತಂತ್ರಜ್ಞಾನವನ್ನು ವಿನಾಶಕಾರಿ ಶಕ್ತಿಗಳು ಯುವಕರನ್ನು ದಾರಿ ತಪ್ಪಿಸಲು ಬಳಸಿ ಕೊಳ್ಳುತ್ತಿರುವ ಆಘಾತಕಾರಿ ವಾಸ್ತವ ಬಹಿರಂಗವಾಗಿದೆ. ನಿಷೇಧಿತ ಭಯೋತ್ಪಾದನಾ ಸಂಘಟನೆ ಐಸಿಸ್ನ ‘ಆನ್‌ಲೈನ್ ಪ್ರಚಾರ ಮತ್ತು ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಮತ್ತು ದೆಹಲಿ ಪೊಲೀಸರ ವಿಶೇಷ ದಳ ದೊಡ್ಡ ಕಾರ್ಯಾಚರಣೆ ನಡೆಸಿವೆ. ಈ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರದ ಇಬ್ಬರು ಯುವಕರನ್ನು ಬಂಧಿಸಲಾಗಿದ್ದು, ಕೇವಲ ೧೫ ವರ್ಷದ ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರು ಪ್ರಮುಖ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಮುಂಬಯಿಯ ಕುರ್ಲಾ ನಿವಾಸಿಯಾದ ಮಹಮ್ಮದ್ ಹಮಾದ ಸಿದ್ದಿಕಿ (ವಯಸ್ಸು ೧೮ ವರ್ಷ) ಎಂಬ ಈ ವಿದ್ಯಾರ್ಥಿ ೧೨ ನೇ ತರಗತಿಯಲ್ಲಿ ಓದುತ್ತಿದ್ದಾನೆ. ಠಾಣೆ ಜಿಲ್ಲೆಯ ಖಡವಲಿಯ ಮೊಸೈಬ್ ಅಹ್ಮದ್ ಅಲಿಯಾಸ್ ಸೋನು (ವಯಸ್ಸು ೩೩ ವರ್ಷ) ಎಂಬ ಈ ಯುವಕ ಆಟೋ ಎಲೆಕ್ಟ್ರಿಕಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರಲ್ಲದೆ, ಒಡಿಶಾದಿಂದ ಬಡಾ ಇಮ್ರಾನ್ ಹೆಸರಿನ ಶಂಕಿತ ಹ್ಯಾಂಡ್ಲರ್ ಒಬ್ಬನನ್ನು ಬಂಧಿಸಲಾಗಿದೆ. ಈ ವ್ಯಕ್ತಿಯು ಐಸಿಸ್ನ ಆನ್‌ಲೈನ್ ಪ್ರಚಾರದ ಮುಖ್ಯ ಜಾಲವನ್ನು ನಡೆಸುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.
೧. ರಡಾರ್‌ಗೆ ಸಿಲುಕಿದ ಹೊಸ ಶಂಕಿತರು
ತನಿಖೆ ಚುರುಕುಗೊಂಡ ನಂತರ ತನಿಖಾ ಸಂಸ್ಥೆಗಳ ಕೈಗೆ ಇನ್ನು ಇಬ್ಬರು ಪ್ರಮುಖ ವ್ಯಕ್ತಿಗಳ ಹೆಸರುಗಳು ಸಿಕ್ಕಿವೆ. ಇದರಲ್ಲಿ ಕಾಂದಿವಲಿಯ ೧೫ ವರ್ಷದ ವಿದ್ಯಾರ್ಥಿಯೊಬ್ಬ ಸೇರಿರುವುದರಿಂದ ಭದ್ರತಾ ಸಂಸ್ಥೆಗಳೇ ಬೆಚ್ಚಿಬಿದ್ದಿವೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಇಂತಹ ಕಟ್ಟರಪಂಥೀಯ ವಿಚಾರಧಾರೆಯ ಕಡೆಗೆ ಸೆಳೆಯಲ್ಪಡುವುದು ಚಿಂತಾಗ್ರಸ್ಥವಾಗಿದೆ.
೨. ಕುಟುಂಬಸ್ಥರ ಆಕ್ರೋಶ ಮತ್ತು ಗೊಂದಲ
ಬಂಧಿತ ಮಹಮ್ಮದ್ ಹಮಾದ್ ಸಿದ್ದಿಕಿಯ ತಂದೆ ಮಗನ ಮೇಲಿನ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದು, ನನ್ನ ಮಗ ಓದಿನಲ್ಲಿ ಜಾಣನಿದ್ದಾನೆ. ಅವನ ಉಜ್ವಲ ಭವಿಷ್ಯಕ್ಕಾಗಿ ನಾನು ಸಾಲ ಮಾಡಿ ಓದಿಸುತ್ತಿದ್ದೆ. ಅವನು ಗಂಟೆಗಟ್ಟಲೆ ಮೊಬೈಲ್ ನಲ್ಲಿ ಆನ್‌ಲೈನ್ ಗೇಮ್ಸ್ ಆಡುತ್ತಿದ್ದ; ಆದರೆ ಅವನು ಇಂತಹ ಗಂಭೀರ ಅಪರಾಧದಲ್ಲಿ ತೊಡಗಿದ್ದಾನೆಂದು ಯೋಚಿಸಿರಲಿಲ್ಲ ಎಂದಿದ್ದಾರೆ.
೩. ರಾಷ್ಟ್ರೀಯ ಭದ್ರತೆಗೆ ಅಪಾಯ
ಈ ಯುವಕರು ವಿದೇಶಿ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದರು ಮತ್ತು ಭಾರತದ ಕೆಲವು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಸಂಶಯ ತನಿಖಾ ಸಂಸ್ಥೆಗಳಿಗಿದೆ. ಬಂಧಿತ ಹಮಾದ್ ಮತ್ತು ಮೊಸೈಬ್ ಅವರನ್ನು ಮುಂಬಯಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಅವರ ಟ್ರಾನ್ಸಿಟ್ ರಿಮಾಂಡ್ ಮಂಜೂರು ಮಾಡಲಾಗಿದೆ. (ಟ್ರಾನ್ಸಿಟ್ ರಿಮಾಂಡ್ ಎಂದರೆ, ಯಾವುದೇ ಅಪರಾಧದ ಶಂಕಿತ ಆರೋಪಿಯನ್ನು ಬೇರೆ ರಾಜ್ಯದಿಂದ ಬಂಧಿಸಿದ ನಂತರ ಮುಂದಿನ ತನಿಖೆಗಾಗಿ ಅಥವಾ ವಿಚಾರಣೆಗಾಗಿ ಆತನನ್ನು ಅಪರಾಧ ನಡೆದ ಮುಖ್ಯ ಸ್ಥಳಕ್ಕೆ ಕರೆದೊಯ್ಯಲು ಪೊಲೀಸರಿಗೆ ನೀಡಲಾಗುವ ಅಧಿಕೃತ ಅನುಮತಿ.)
ಈ ಘಟನೆಯು ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಮಕ್ಕಳು ಇಂಟರ್ನೆಟ್‌ನಲ್ಲಿ ಏನು ನೋಡುತ್ತಿದ್ದಾರೆ ? ಮತ್ತು ಆನ್‌ಲೈನ್ ಗೇಮ್ಸ್ ಹೆಸರಿನಲ್ಲಿ ಅವರು ಜಾಲದಲ್ಲಾದರೂ ಸಿಲುಕುತ್ತಿಲ್ಲ ತಾನೇ ?, ಎಂಬುದರ ಕಡೆಗೆ ನಿಗಾ ಇಡಬೇಕಿದೆ. ಯುವಕರ ಮಾನಸಿಕತೆಯ ದುರ್ಬಳಕೆ ಮಾಡಿಕೊಳ್ಳುವ ಉಗ್ರ ಸಂಘಟನೆಗಳ ಕ್ರೂರ ವಾಸ್ತವವನ್ನು ಮತ್ತೊಮ್ಮೆ ಬಹಿರಂಗಗೊಳಿಸಿದೆ.
– ಸಂತೋಷ ವಾಘ (ಆಧಾರ : ಹಿಂದೂಸ್ಥಾನ ಪೋಸ್ಟ್)
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….
ಸ್ಥೂಲ ಶರೀರ ಮತ್ತು ಸೂಕ್ಷ್ಮ ಮನಸ್ಸಿನ ನಿಯಂತ್ರಣಕ್ಕಾಗಿ ಪ್ರಾಣಾಯಾಮದ ಮಹತ್ವ !
ನಾಭಿ ಸಮತೋಲನಕ್ಕಾಗಿ ಉಪಯುಕ್ತ ಕೆಲವು ಯೋಗಾಸನಗಳು !