
ನಾವು ದೇಶದ ಪ್ರಗತಿ ಯುವಕರ ಕೈಯಲ್ಲಿದೆ ಎಂದು ಹೇಳುತ್ತೇವೆ. ಭಾರತದಲ್ಲಿ ಯುವಕರ ಸಂಖ್ಯೆ ಶೇಕಡಾ ೬೫ ರಷ್ಟಿದೆ. ಆದುದರಿಂದ ಯುವ ಪೀಳಿಗೆಯ ಕ್ಷಮತೆ ಮತ್ತು ಸಾಮರ್ಥ್ಯದ ಬಲದ ಮೇಲೆ ಭಾರತವು ಜಾಗತಿಕ ಮಹಾಸತ್ತೆಯಾಗುವ ಕನಸನ್ನು ಕಾಣುತ್ತಿದೆ. ಯುವ ಪೀಳಿಗೆಯ ಕೆಲವು ನಿರ್ದಿಷ್ಟ ಜನರಲ್ಲಿ ಮಾತ್ರ ನಾವೀನ್ಯತೆಯ ಮತ್ತು ಛಲದ ಸ್ವಭಾವವಿದೆ. ಇಂದು ದೇಶದ ಗಡಿಗೆ ಹೋಗಿ ನಮ್ಮ ದೇಶದ ರಕ್ಷಣೆ ಮಾಡುವವನೂ ದೇಶದಾದ್ಯಂತದ ಯುವಕನೇ ಆಗಿದ್ದಾನೆ. ಅದಕ್ಕಾಗಿ ನಮಗೆ ಸಾರ್ಥಕ ಹೆಮ್ಮೆಯಿದೆ. ಹೀಗಿದ್ದರೂ, ಯುವಕರಿಗೆ ಆಗುತ್ತಿರುವ ಹಾನಿಯನ್ನು ನಿರ್ಲಕ್ಷಿಸಲಾಗುವುದಿಲ್ಲ. ಈ ಸೂತ್ರದ ದೃಷ್ಟಿಯಿಂದಲೂ ವಿಚಾರ ಮಾಡಬೇಕಾಗಿದೆ.

೧. ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು !
ಮಹಾವಿದ್ಯಾಲಯ ಮಟ್ಟದಲ್ಲಿ ಯುವಕರ ವಿದ್ಯಾರ್ಥಿ ಸಂಘಟನೆಗಳಿರುತ್ತವೆ. ಅವುಗಳು ಯಾವುದಾದರೊಂದು ಪಕ್ಷದ ಅಧಿಪತ್ಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಆದುದರಿಂದಲೇ ಪಕ್ಷಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಅವುಗಳಲ್ಲೂ ಕಂಡು ಬರುತ್ತವೆ. ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಬಗೆಹರಿಸುವುದು, ಪ್ರವೇಶ ಪ್ರಕ್ರಿಯೆ, ಶುಲ್ಕ ಪ್ರಕ್ರಿಯೆ ಈ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಕೆಲಸವನ್ನು ಈ ಸಂಘಟನೆಗಳು ಮಾಡುತ್ತವೆ; ಆದರೆ ಭಿನ್ನಾಭಿಪ್ರಾಯ ಮತ್ತು ವಾದ-ವಿವಾದಗಳಲ್ಲೇ ಅವರ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ.
೨. ಯುವಕರನ್ನು ತಮ್ಮ ಹಿತಾಸಕ್ತಿಗಾಗಿ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು !
ರಾಜಕೀಯ ಪಕ್ಷಗಳ ಯುವ ಸಂಘಟನೆಗಳಲ್ಲಿ ಕೆಲವು ಜನರನ್ನು ಮಾತ್ರ ಹುದ್ದೆಗಳಿಗೆ ನೇಮಿಸಿ ಅವಕಾಶ ನೀಡಲಾಗುತ್ತದೆ. ಉಳಿದ ಯುವಕರು ಕೇವಲ ಆಧಾರಸ್ತಂಭಗಳಾಗಿರುತ್ತಾರೆ. ಅವರನ್ನು ಬಳಸಿಕೊಳ್ಳಲಾಗುತ್ತದೆ. ಈ ಆಧಾರಸ್ತಂಭಗಳು ತ್ರಿಶಂಕು ಸ್ಥಿತಿಯಲ್ಲಿಯೇ ಇರುತ್ತವೆ. ಅವರ ಭವಿಷ್ಯದ ಬಗ್ಗೆ ಯಾವುದೇ ವಿಚಾರ ಅವರ ಬಳಿ ಇರುವುದಿಲ್ಲ.
೨ ಅ. ಯುವಕರೇ, ಮುಖಂಡರ ಹಿಂದೆ ಓಡಿ ದಿಕ್ಕು ತಪ್ಪಬೇಡಿ !
ರಾಜಕೀಯ ಪಕ್ಷಗಳು ಯುವಕರನ್ನು ಚುನಾವಣಾ ಕಾಲದಲ್ಲಿ ಬಳಸಿಕೊಳ್ಳುತ್ತವೆ, ಅದರ ಬದಲಾಗಿ ಅವರಿಗೆ ಸಿಗುವುದಾದರೂ ಏನು ? ಡಾಭಾಗಳಲ್ಲಿ ಊಟ, ಅಂದರೆ ತಿನ್ನುವುದು ಮತ್ತು ಕುಡಿಯುವುದು. ಇದೆಲ್ಲವೂ ಉಚಿತವಾಗಿ ಸಿಗುವುದರಿಂದ ಯುವ ವರ್ಗವು ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗಿಯಾಗುತ್ತಿದೆ. ಅನೇಕ ಯುವಕರು ವ್ಯಸನಿಗಳಾಗಿ ಮುಖಂಡರ ಹಿಂದೆ ಓಡುವುದರಲ್ಲೇ ತಮ್ಮ ಜೀವನದ ವರ್ಷಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅನೇಕರ ಜೀವನವು ದಿಕ್ಕು ತಪ್ಪಿದೆ. ಸಾಮಾಜಿಕ ಜಾಗೃತಿ ಕಣ್ಮರೆಯಾಗುತ್ತಿವೆ. ಸಮಾಜದಲ್ಲಿನ ದೌರ್ಜನ್ಯ ಅಥವಾ ಭ್ರಷ್ಟಾಚಾರದ ಬಗ್ಗೆ ಅವರಿಗೆ ಕಾಳಜಿ ಇರುವುದಿಲ್ಲ. ಅವರು ಸಿಡಿದೇಳುವುದಿಲ್ಲ. ಅವರ ಜಾಗೃತಿಗಳು ಮಂದವಾಗಿವೆ.
೩. ಯುವ ಪೀಳಿಗೆ ಎಂದರೆ ರಾಷ್ಟ್ರದ ಸಾಮರ್ಥ್ಯ !

ಯುವ ಪೀಳಿಗೆ ಎಂದರೆ ರಾಷ್ಟ್ರದ ಸಾಮರ್ಥ್ಯವಾಗಿದೆ. ಈ ಸಾಮರ್ಥ್ಯವನ್ನು ವ್ಯರ್ಥವಾಗಲು ಬಿಡಬಾರದು. ಯುವಕರೇದೇಶದ ನಿಜವಾದ ಬಂಡವಾಳವಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿನ ಯುವಕರಿಗೆ ಅಥವಾ ಯುವ ಸಂಘಟನೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡಬೇಕಾಗಿದೆ. ಅವರಿಗೆ ರಚನಾತ್ಮಕ ತಿರುವು ನೀಡ ಬೇಕಾಗಿದೆ. ಹಾಗಾದಲ್ಲಿ ಯುವಕರು ವಿದೇಶಿ ಶಿಕ್ಷಣಕ್ಕೆ ಆಕರ್ಷಿತರಾಗದೆ ಭಾರತದಲ್ಲೇ ಉಳಿಯುತ್ತಾರೆ ಮತ್ತು ಅವರ ಜ್ಞಾನದ ಲಾಭ ಸಿಗುತ್ತದೆ. ಅಲ್ಲಲ್ಲಿ ಯುವಕರ ಸಮಾವೇಶಗಳನ್ನು ಆಯೋಜಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ !
– ಶ್ರೀ. ದಿಲೀಪ ದೇಶಪಾಂಡೆ, ಜಾಮನೇರ, ಜಳಗಾಂವ್.
ಯುವಕರ ಮನ್ ಕಿ ಬಾತ್ ಗುರುತಿಸಿ !![]() ಸ್ವಾಮಿ ವಿವೇಕಾನಂದರಿಗೆ ಯುವ ಶಕ್ತಿಯ ಮೇಲೆ ಅಪಾರ ವಿಶ್ವಾಸವಿತ್ತು. ಯುವಾ ಎಂಬ ಪದವನ್ನು ಉಲ್ಟಾ ಓದಿದರೆ ವಾಯು ಎಂದಾಗುತ್ತದೆ. ವಾಯು ಎಂದರೆ ವೇಗ. ಸ್ವಾಮಿ ವಿವೇಕಾನಂದರಿಗೆ ಸಂಸ್ಕಾರವಂತ, ಸದೃಢ, ಹಾಗೆಯೇ ರಾಷ್ಟ್ರ ಮತ್ತು ಸಮಾಜದ ಬಗ್ಗೆ ಪ್ರೀತಿ ಇರುವ ಹಾಗೂ ವ್ಯಸನಮುಕ್ತ ಯುವಕರು ಅಪೇಕ್ಷಿತವಾಗಿದ್ದರು. ಯುವಕರ ಮನದ ಮಾತು ಗುರುತಿಸಬೇಕಾಗಿದೆ. ಅವರಿಗೆ ಉದ್ಯೋಗ ದೊರಕಿಸಿಕೊಟ್ಟು ಹೊಸ ಹೊಸ ಅವಕಾಶಗಳನ್ನು ನೀಡಬೇಕಾಗಿದೆ. |

ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !