ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !

ಒಂದು ವೇಳೆ ಒಬ್ಬ ೧೫ ವರ್ಷದ ಹುಡುಗನಿಗೆ, ‘ನೀನು ಹುಡುಗನಲ್ಲ, ಹುಡುಗಿ’ ಎಂದು ಹೇಳಿದರೆ ಮತ್ತು ನಂತರ ಅವನಿಗೆ, ‘ಶಸ್ತ್ರಚಿಕಿತ್ಸೆಯ ಮೂಲಕ ನಿನ್ನ ಜನನಾಂಗಗಳನ್ನು ತೆಗೆದು ಅಲ್ಲಿ ಒಂದು ರಂಧ್ರವನ್ನು ನಿರ್ಮಿಸಲಾಗುವುದು, ಅದು ಯೋನಿಯಂತೆ ಕಾರ್ಯ ನಿರ್ವಹಿಸುತ್ತದೆ. ಆ ಬಳಿಕ ನಿನ್ನ ಶರೀರ ಹುಡುಗಿಯಂತಾಗುತ್ತದೆ’ ಎಂದರೆ, ಅದನ್ನು ಕೇಳಿ ಅವನು ಮಾತ್ರವಲ್ಲ ಯಾರೂ ನಮ್ಮನ್ನು ಹುಚ್ಚರೆನ್ನಬಹುದು; ಆದರೆ ಇಂದು ನಮ್ಮ ದೇಶದಲ್ಲಿ ಇಂತಹ ಮೂರ್ಖವನ್ನು ನಂಬುವ ಒಂದು ಪೀಳಿಗೆ ಸಿದ್ಧವಾಗುತ್ತಿದೆ. ಒಬ್ಬ ಹುಡುಗನ ಜನನಾಂಗವನ್ನು ಬದಲಾಯಿಸಿ ಅವನನ್ನು ಹುಡುಗಿಯನ್ನಾಗಿ ಮಾಡಬಹುದು ಅಥವಾ ಒಬ್ಬ ಹುಡುಗಿಯ ಜನನಾಂಗವನ್ನು ಬದಲಾಯಿಸಿ ಅವಳನ್ನು ಹುಡುಗನನ್ನಾಗಿ ಮಾಡಬಹುದು ಎಂಬ ಮೂರ್ಖತನವನ್ನು ಒಪ್ಪಿಕೊಳ್ಳುವವರನ್ನು ‘ವೋಕ್’ ಎಂದು ಕರೆಯಲಾಗುತ್ತದೆ ಮತ್ತು ಅವರ ಈ ಚಳವಳಿಯನ್ನು ‘ವೋಕಿಸಂ’ ಎಂದು ಕರೆಯಲಾಗುತ್ತದೆ. ಈ ಚಳವಳಿಯು ಜಗತ್ತಿನಾದ್ಯಂತ ನಡೆಯುತ್ತಿದ್ದು, ಅಮೇರಿಕಾ, ಯುರೋಪ್‌ ಮತ್ತು ಕೆನಡಾ ದೇಶಗಳಿಂದ ಬಂದಿದೆ. ಅಮೇರಿಕಾದಲ್ಲಿ ಕಲಿಯುವ ಮಕ್ಕಳಲ್ಲಿ ಶೇ. ೪೫ ರಷ್ಟು ಮಕ್ಕಳಿಗೆ ಇದು ನಿಜವೆಂದು ಅನಿಸುತ್ತದೆ. ಪ್ರಸ್ತುತ ಈ ಚಳವಳಿಯು ನಮ್ಮ ದೇಶದಲ್ಲಿ ಕಡಿಮೆಯಿದ್ದರೂ, ಇದು ಪ್ರಚಾರವಾಗುತ್ತಿರುವ ವೇಗ ನೋಡಿದಗ್ ನಮ್ಮಲ್ಲೂ ಹೆಚ್ಚಾಗಬಹುದು. ಇದೊಂದು ಉದ್ಯಮವಾಗಿ ಮಾರ್ಪಟ್ಟಿದೆ. ೧೨ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಯಸಿದರೆ, ಅದನ್ನು ಮಾಡಿಸಿಕೊಳ್ಳಬಹುದು. ಇದಕ್ಕಾಗಿ ಭಾರತೀಯ ಆಡಳಿತ ಸೇವೆ ಅಧಿಕಾರಿಗಳಿಗೂ ಪ್ರೋತ್ಸಾಹಿಸಲು ಹೇಳಲಾಗುತ್ತದೆ. ಮುಸಲ್ಮಾನ ಸಮಾಜವು ಇದರಲ್ಲಿ ಸಿಲುಕುವುದಿಲ್ಲ. ಹಿಂದೂಗಳ ಜನಸಂಖ್ಯೆಯು ಶೇ. ೮೦ ಕ್ಕಿಂತ ಕೆಳಗೆ ಬಂದಿದೆ. ಹಿಂದೂಗಳ ಜನನದರವು ಕುಸಿಯುತ್ತಿದೆ. – ಶ್ರೀ. ನೀರಜ ಅತ್ರಿ, ಅಧ್ಯಕ್ಷರು, ವಿವೇಕಾನಂದ ಕಾರ್ಯ ಸಮಿತಿ, ಪಂಚಕುಲ, ಹರಿಯಾಣ.