‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !

‘ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌’, ಮುಂಬಯಿಯ ‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ’ದ ಶಾಖೆ ಮತ್ತು ಈಗ ಪುಣೆಯ ‘ವಿಪ್ರೊ ಕಂಪನಿ’ ಇವುಗಳಲ್ಲಿ ನೌಕರಿ ಮಾಡುವ ಮಹಿಳೆಯರ ಮೇಲಿನ ಬಲಾತ್ಕಾರ ಮತ್ತು ಮತಾಂತರದ ಕುರಿತಾದ ಸುದ್ದಿಗಳು ಓದಲು ಸಿಕ್ಕಿತು. ಇಂತಹ ಇನ್ನು ಎಷ್ಟು ಸಂಸ್ಥೆಗಳಿವೆಯೋ ಹೇಳಲು ಸಾಧ್ಯವಿಲ್ಲ.

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ | |

– ಮನುಸ್ಮ್ರತಿ, ಅಧ್ಯಾಯ ೩, ಶ್ಲೋಕ ೫೫ ಮತ್ತು ೫೬

ಆಶಯ : ‘ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ. ಎಲ್ಲಿ ಸ್ತ್ರೀಯರನ್ನು ಗೌರವಿಸುವುದಿಲ್ಲವೋ, ಅಲ್ಲಿ ಸತ್ಕಾರ್ಯಗಳೂ ನಿಷ್ಫಲವಾಗುತ್ತವೆ, ಅಂದರೆ ಸತ್ಕಾರ್ಯಗಳ ಪ್ರಭಾವ ಉಳಿಯುವುದಿಲ್ಲ.’ ಇದು ಭಾರತೀಯ ಸಂಸ್ಕ್ರತಿಯ ಸಿದ್ಧಾಂತವಾಗಿದೆ. ಮುಸಲ್ಮಾನ ಧರ್ಮದ ಅನುಯಾಯಿಗಳು ಹಿಂದೂ ಸಂಸ್ಕ್ರತಿಯ ಸಿದ್ಧಾಂತಗಳು, ಸಭ್ಯತೆ ಮತ್ತು ಶಾಲೀನತೆಯ ಮೇಲೆ ದಾಳಿ ಮಾಡುತ್ತಿದ್ದಾರೆ ಹಾಗೂ ಇದೆಲ್ಲವೂ ಈಗ ಸಹನಶೀಲತೆಯನ್ನು ಮೀರಿದೆ. ಯಾವುದೋ ಒಂದು ಸಂಸ್ಥೆಯಲ್ಲಿ ಘಟನೆ ನಡೆದರೆ ನಾವು ಅರ್ಥ ಮಾಡಿಕೊಳ್ಳಬಹುದು, ಆದರೆ ಇಂತಹ ದುಷ್ಕ್ರತ್ಯಗಳು ಅನೇಕ ಸಂಸ್ಥೆಗಳಲ್ಲಿ ಕಂಡುಬರುತ್ತಿದ್ದರೆ, ಅದು ಖಂಡಿತವಾಗಿಯೂ ದೊಡ್ಡ ಪಿತೂರಿಯಾಗಿದೆ !

ಮಾತಾ-ಭಗಿನಿಯರ ಶೀಲದ ರಕ್ಷಣೆ ಆಗದಿದ್ದರೆ, ನಾಗರಿಕರು ಮಾಡಬೇಕಾದ ಉಪಾಯಗಳು

ಅ. ಯಾವ ಸಂಸ್ಥೆಗಳಲ್ಲಿ ಮಾತಾ-ಭಗಿನಿಯರ ಶೀಲದ ರಕ್ಷಣೆ ಆಗುವುದಿಲ್ಲವೋ, ಆ ಸಂಸ್ಥೆಯನ್ನು ಕಾನೂನುಮಾರ್ಗಗಳ ಮೂಲಕ ಶಾಶ್ವತವಾಗಿ ಮುಚ್ಚಿಸಬೇಕು. ಆ ಸಂಸ್ಥೆಯು ಉತ್ಪಾದಿಸಿದ ವಸ್ತುಗಳನ್ನು ನ್ಯಾಯಯುತ ಮಾರ್ಗದಲ್ಲಿ ಬಹಿಷ್ಕರಿಸಬೇಕು. ಇಂತಹ ಸಂಸ್ಥೆಗಳ ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಬೀಗ ಹಾಕಬೇಕು. ಸರಕಾರವು ಸಹ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು

ಆ. ದೇಶದಲ್ಲಿ ಇಂತಹ ವಾತಾವರಣ ಮೂಡಲು ಸರಕಾರಿ ಅಧಿಕಾರಿಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಜ್ಜನರು ಕಠಿಣ ನಿಲುವನ್ನು ತೆಗೆದುಕೊಳ್ಳಬೇಕು. ಇಂತಹ ದುಷ್ಟ ಪ್ರವೃತ್ತಿಗಳನ್ನು ಸಂಘಟಿತರಾಗಿ ತೀವ್ರವಾಗಿ ವಿರೋಧಿಸಬೇಕು. ‘ನಾವು ಹಿಂದೂಗಳು ಸಹಿಷ್ಣುಗಳಾಗಿರುವಂತೆ, ಜಯಿಷ್ಣುಗಳೂ (ವಿಜಯಶಾಲಿಗಳು) ಆಗಿದ್ದೇವೆ’ ಎಂದು ಹೇಳುವ ಸಮಯ ಈಗ ಬಂದಿದೆ. ಆದ್ದರಿಂದ ಹಿಂದೆ ಸರಿಯಲು ಸಾಧ್ಯವಿಲ್ಲ.

೧. ಸರಕಾರದ ನಾರಿಶಕ್ತಿ ನೀತಿಗೆ ನೀಡಿದ ಸವಾಲು !

ಶ್ರೀ. ದುರ್ಗೇಶ ಪರುಳಕರ

ಸರಕಾರಿ ಯೋಜನೆಗಳನ್ನು ಮತ್ತು ಸರಕಾರದ ಧ್ಯೇಯೋದ್ದೇಶಗಳನ್ನು ಧೂಳೀಪಟ ಮಾಡಲು ದೊಡ್ಡ ಪ್ರಮಾಣದಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದು ಸಹ ಅದರದ್ದೇ ಒಂದು ಭಾಗ ಎಂದು ಹೇಳಿದರೆ ತಪ್ಪಾಗಲಾರದು. ‘ಬೇಟಿ ಬಚಾವೋ, ಬೇಟಿ ಪಢಾವೋ’ ಎಂಬುದು ಸರಕಾರದ ನಾರಿಶಕ್ತಿಯ ನೀತಿಯಾಗಿದೆ. ‘ಕಾರ್ಪೊರೇಟ್’ ಕ್ಷೇತ್ರವು ಸರಕಾರದ ಈ ನೀತಿಗೆ ಕೊಳ್ಳಿ ಇಡುತ್ತಿದೆ. ‘ಬೇಟಿ ಬಚಾವೋ’ ಎಂದರೆ ಕೇವಲ ಹೆಣ್ಣು ಮಗು ಹುಟ್ಟಿದೆ ಎಂದು ಅದನ್ನು ಕೊಲ್ಲದಂತೆ ತಡೆಯುವುದು ಮತ್ತು ಅವಳನ್ನು ರಕ್ಷಿಸುವುದು’ ಇಷ್ಟಕ್ಕೆ ಸೀಮಿತವಾಗಿಲ್ಲ. ಅವಳ ಪ್ರಾಣರಕ್ಷಣೆಯ ಜೊತೆಗೆ ಅವಳ ಶೀಲದ ರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ. ಹೆಣ್ಣುಮಗಳು ಬದುಕಿದಳು ಆದರೆ, ಅವಳ ಶೀಲವೇ ಭ್ರಷ್ಟವಾಗಿ ಹೋದರೆ, ಅವಳ ಆ ಜೀವನಕ್ಕೆ ಯಾವುದೇ ಅರ್ಥವಿರುವುದಿಲ್ಲ. ಅವಳ ಪ್ರಾಣದೊಂದಿಗೆ ಅವಳ ಶೀಲದ ರಕ್ಷಣೆಯ ಭಾಗವೂ ಇದರಲ್ಲಿ ಒಳಗೊಂಡಿದೆ. ಇದು ಹಿಂದೂ ಸಂಸ್ಕ್ರತಿಯ ಸಭ್ಯತೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದ್ದು, ಸರಕಾರದ ‘ಬೇಟಿ ಬಚಾವೋ ಮತ್ತು ಬೇಟಿ ಪಢಾವೋ’ ಧ್ಯೇಯವನ್ನು ಹಾಳುಗೆಡಹುವ ಪ್ರಯತ್ನವಾಗಿದೆ. ಕಾರ್ಪೊರೇಟ್‌ ಕ್ಷೇತ್ರದಲ್ಲಿ ಸ್ತ್ರೀಯರ ಮೇಲಾಗುತ್ತಿರುವ ಅನ್ಯಾಯ ಮತ್ತು ಅವರ ಮಾನಹಾನಿಯು ಸರಕಾರದ ನಾರಿಶಕ್ತಿ ನೀತಿಗೆ ನೀಡಿದ ಸವಾಲಾಗಿದೆ. ಆದ್ದರಿಂದಲೇ ಸರಕಾರವು ಇದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ದೇಶದ ನಾಗರಿಕರು ಅಪೇಕ್ಷಿಸುತ್ತಿದ್ದಾರೆ.

೨. ಬಲಾತ್ಕಾರಿಗಳನ್ನು ರಕ್ಷಿಸುವುದು, ಸ್ವಾತಂತ್ರ್ಯದೇವಿಗೆ ಮಾಡುವ ಅಪಮಾನ !

ಇಂದು ಭಾರತವು ಸ್ವತಂತ್ರವಾಗಿದೆ. ಈ ಸ್ವಾತಂತ್ರ್ಯದ ಮಹತ್ವ ಮತ್ತು ಸ್ವಾತಂತ್ರ್ಯದ ನಿಖರವಾದ ಅರ್ಥವನ್ನು ಸ್ವಾತಂತ್ರ್ಯವೀರ ಸಾವರಕರ ಅವರು ‘ಜಯೋಸ್ತುತೇ’ ಎಂಬ ಸ್ವಾತಂತ್ರ್ಯದ ಸ್ತೋತ್ರದಲ್ಲಿ ವಿವರವಾಗಿ ತಿಳಿಸಿದ್ದಾರೆ. ಸ್ವಾತಂತ್ರ್ಯದ ಕುರಿತು ಈ ಗೀತೆಯಲ್ಲಿ ಸಾವರಕರ ಅವರು, ‘ಹೇ ಅಧಮ ರಕ್ತರಂಜಿತೇ, ಸುಜನ ಪೂಜಿತೇ’ ಎನ್ನುತ್ತಾರೆ. ಸ್ವಾತಂತ್ರ್ಯವೆಂದರೆ ಅದು ಅಧಮರ ರಕ್ತದಿಂದ ತೊಯ್ದು, ಸಜ್ಜನರನ್ನು ಪೂಜಿಸುವಂತಹುದಾಗಿದೆ. ‘ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಬಲಾತ್ಕಾರದ ಘಟನೆಗಳನ್ನು ಗಮನಿಸಿದರೆ, ದೇಶವು ನಿಜವಾದ ಅರ್ಥದಲ್ಲಿ ಸ್ವತಂತ್ರವಾಗಿದೆ’ ಎಂದು ಹೇಳುವ ಧೈರ್ಯವಾಗುವುದಿಲ್ಲ. ಬಲಾತ್ಕಾರಿ ನರಹಂತಕರನ್ನು ರಕ್ಷಿಸಲು ಪ್ರಯತ್ನಿಸುವವರು ನಿರ್ದೋಷಿಗಳಾಗಲು ಹೇಗೆ ಸಾಧ್ಯ ? ಅಧಮನಿಗೆ ಸಹಾಯ ಮಾಡುವವನೂ ಅಷ್ಟೇ ಅಧಮನಾಗಿರುತ್ತಾನೆ. ಆದ್ದರಿಂದ ಬಲಾತ್ಕಾರಿ ಮತ್ತು ಅಪರಾಧಿಗಳ ಪರ ವಹಿಸಿ ಅವರನ್ನು ರಕ್ಷಿಸಲು ಪ್ರಯತ್ನಿಸುವ ನ್ಯಾಯವಾದಿಗಳೂ ಅಷ್ಟೇ ದೋಷಿಗಳಾಗುತ್ತಾರೆ. ಆದ್ದರಿಂದ ಇವರೆಲ್ಲರಿಗೂ ಮರಣದಂಡನೆಯನ್ನು ಹೊರತುಪಡಿಸಿ ಬೇರೆ ಯಾವುದೇ ಶಿಕ್ಷೆ ನೀಡಲು ಸಾಧ್ಯವಿಲ್ಲ. ಇಂತಹ ಶಿಕ್ಷೆಯನ್ನು ಬಲಾತ್ಕಾರಿಗಳಿಗೆ ಮತ್ತು ಅವರಿಗೆ ಸಹಾಯ ಮಾಡುವವರಿಗೆ ನೀಡದಿದ್ದರೆ, ಸಾವರಕರ ಅವರ ‘ಸ್ವಾತಂತ್ರ್ಯ’ ಸ್ತೋತ್ರದಲ್ಲಿನ ಸ್ವಾತಂತ್ರ್ಯದ ಅರ್ಥವನ್ನು ತಿಳಿಸುವ ‘ಹೇ ಅಧಮ ರಕ್ತರಂಜಿತೇ ಸುಜನ ಪೂಜಿತೇ |’ ಎಂಬುದಕ್ಕೆ ನಮ್ಮ ದೇಶದಲ್ಲಿ ಮಹತ್ವವಿಲ್ಲದಂತಾಗಿ, ‘ಸ್ವಾತಂತ್ರ್ಯವೆಂದರೆ ಹೇ ಸುಜನ ರಕ್ತರಂಜಿತೇ ಅಧಮ ಪೂಜಿತೇ |’ ಎಂದು ಅದರಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಅಂತಹ ಬದಲಾವಣೆ ಮಾಡುವುದು ಎಂದರೆ, ನಾವೇ ನಮ್ಮ ಸ್ವಾತಂತ್ರ್ಯದೇವಿಗೆ ಮಾಡಿದ ಅಪಮಾನವಾಗಿದೆ, ನಮ್ಮ ನೀತಿಮೌಲ್ಯಗಳನ್ನು ಕಾಲಡಿಯ ಕಸದಂತೆ ಮಾಡುವುದಾಗಿದೆ, ನಮ್ಮ ಶ್ರೇಷ್ಠ ಸಿದ್ಧಾಂತಗಳ ಕತ್ತು ಹಿಸುಕುವುದಾಗಿದೆ. ಇಂದು ನಮ್ಮ ದೇಶದ ಸ್ತ್ರೀಯರು ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇದು ಹಿಂದೂ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಆದಾಗ್ಯೂ ಅವಳ ಶೀಲದ ರಕ್ಷಣೆ ಆಗದಿದ್ದರೆ ಮತ್ತು ಅವಳು ಪಾಶವಿ ಕೃತ್ಯಕ್ಕೆ ಸಿಲುಕುವುದಾದರೆ, ಅವಳ ಸ್ವಾತಂತ್ರ್ಯವು ಅಪಾಯದಲ್ಲಿದೆ ಎಂಬುದಕ್ಕೆ ಇದೇ ಮುನ್ನುಡಿಯಾಗಿದೆ. – ಶ್ರೀ. ದುರ್ಗೇಶ ಜಯವಂತ ಪರುಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು, ಡೊಂಬಿವಲಿ.