೧. ‘ಡಿಜಿಟಲ್ ಅರೆಸ್ಟ್’ ಮೂಲಕ ಆರ್ಥಿಕ ಸುಲಿಗೆ

‘ಕಳೆದ ೨ ವರ್ಷಗಳಿಂದ ‘ಡಿಜಿಟಲ್ ಅರೆಸ್ಟ್’ ಎಂಬ ಪದವು ನಮ್ಮ ಕಿವಿಗೆ ಪದೇ ಪದೇ ಬೀಳುತ್ತಿದೆ. ಇದು ವಂಚನೆಯ ಒಂದು ಹೊಸ ವಿಧಾನವಾಗಿದೆ. ಇದರಲ್ಲಿ ‘ವಿಡಿಯೋ ಕಾಲ್’ ಮೂಲಕ ತಾವು ಪೊಲೀಸ್, ಕೇಂದ್ರೀಯ ತನಿಖಾ ದಳ (ಸಿಬೈ), ಜಾರಿ ನಿರ್ದೇಶನಾಲಯ (ಇಡಿ) ಅಥವಾ ಸರಕಾರದ ಅಧಿಕಾರಿಗಳೆಂದು ನಂಬಿಸಿ ಜನರನ್ನು ಬೆದರಿಸಲಾಗುತ್ತದೆ ಮತ್ತು ಅವರಿಂದ ಹಣ ವನ್ನು ದೋಚಲಾಗುತ್ತದೆ. ಇದಕ್ಕಾಗಿ ಅವರು ಸಂತ್ರಸ್ತರಿಗೆ, ‘ನೀವು ಮಾದಕ ವಸ್ತುಗಳ ಸಾಗಾಟ ಅಥವಾ ಮನಿ ಲಾಂಡರಿಂಗ್ (ಹಣ ವರ್ಗಾವಣೆ) ಅಪರಾಧದಲ್ಲಿ ಸಿಲುಕಿಕೊಂಡಿದ್ದೀರಿ ಮತ್ತು ಅದರಲ್ಲಿ ನಿಮ್ಮ ಗುರುತಿನ ಚೀಟಿಗಳನ್ನು (ಆಧಾರ ಕಾರ್ಡ್ ಇತ್ಯಾದಿ) ಬಳಸಲಾಗಿದೆ’ ಎಂದು ಹೆದರಿಸುತ್ತಾರೆ. ಅಲ್ಲದೆ, ಸಂತ್ರಸ್ತ ವ್ಯಕ್ತಿಯನ್ನು ಮನೆಯಿಂದ ಹೊರಗೆ ಹೋಗದಂತೆ ಮತ್ತು ‘ಕಾಲ್’ ಕಡಿತಗೊಳಿಸದಂತೆ ಬೆದರಿಕೆ ಹಾಕಲಾಗುತ್ತದೆ. ಇಂತಹ ಮಾರ್ಗಗಳ ಮೂಲಕ ದೇಶಾದ್ಯಂತ ಅನೇಕ ಜನರಿಗೆ ಲಕ್ಷಾಂತರ-ಕೋಟಿಗಟ್ಟಲೆ ಹಣವನ್ನು ವಂಚಿಸಿದ ಘಟನೆಗಳು ನಡೆದಿವೆ. ಇದರಲ್ಲಿ ವೃದ್ಧರು, ಮಹಿಳೆಯರು, ಶ್ರೀಮಂತರು ಮತ್ತು ಸಜ್ಜನ ವ್ಯಕ್ತಿಗಳನ್ನೇ ಗುರಿಯಾಗಿಸಲಾಗುತ್ತಿದೆ.’

೨. ‘ಡಿಜಿಟಲ್ ಅರೆಸ್ಟ್’ ಕುರಿತು ಸರ್ವೋಚ್ಚ ನ್ಯಾಯಾಲಯದಿಂದ ಸ್ವಯಂಪ್ರೇರಿತ ದೂರು ದಾಖಲು
ಇಂತಹ ಅನೇಕ ಘಟನೆಗಳು ಮುನ್ನೆಲೆಗೆ ಬಂದ ನಂತರ, ಸರ್ವೋಚ್ಚ ನ್ಯಾಯಾಲಯವು ೨೦೨೫ ರ ಅಕ್ಟೋಬರನಲ್ಲಿ ಸ್ವಯಂಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡಿತು. ನಂತರ ‘ಸುಮೋಟೋ ಪಿಟಿಷನ್’ (ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಅರ್ಜಿ ಸಲ್ಲಿಸುವುದು) ಎಂದು ಪರಿಗಣಿಸಿ ಕೇಂದ್ರ ಸರಕಾರ ಮತ್ತು ವಿವಿಧ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ‘ಕಾರಣ ಕೇಳಿ ನೋಟಿಸ್’ ಕಳುಹಿಸಿತು. ಈ ಕುರಿತು ಕೇಂದ್ರ ಸರಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ನ್ಯಾಯಾಲಯವು ಸೂಚಿಸಿತು. ‘ಇದು ಸಮಾಜದ ಮೇಲೆ ಭಾರಿ ಪ್ರಭಾವ ಬೀರುವ ಸಂಘಟಿತ ಅಪರಾಧವಾಗಿದೆ’ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
೩. ವಂಚಕರಿಗೆ ಜಾಮೀನು ನೀಡಲು ದೆಹಲಿ ಉಚ್ಚ ನ್ಯಾಯಾಲಯದ ನಿರಾಕರಣೆ
‘ಡಿಜಿಟಲ್ ಅರೆಸ್ಟ್’ ಪ್ರಕರಣಕ್ಕೆ ಸಂಬಂಧಿಸಿದ ೪ ವ್ಯಕ್ತಿಗಳು ದೆಹಲಿ ಉಚ್ಚ ನ್ಯಾಯಾಲಯದ ಮೊರೆ ಹೋದರು. ಈ ಪ್ರಕರಣದಲ್ಲಿ ಓರ್ವ ವೃದ್ಧ ವ್ಯಕ್ತಿಯಿಂದ ೨೨ ಕೋಟಿ ೯೨ ಲಕ್ಷ ರೂಪಾಯಿಗಳನ್ನು ದೋಚಲಾಗಿತ್ತು. ಆ ಹಣದಲ್ಲಿ ೧ ಕೋಟಿ ೯೦ ಲಕ್ಷ ರೂಪಾಯಿಗಳನ್ನು ಆರೋಪಿಯೊಬ್ಬನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ ನಂತರ ಕೆಲವು ಜನರನ್ನು ಬಂಧಿಸಲಾಯಿತು. ಬಂಧಿತರ ಹೇಳಿಕೆಗಳಿಂದ ಅನೇಕ ವ್ಯಕ್ತಿಗಳ ಪಾಲ್ಗೊಳ್ಳುವಿಕೆ ಬೆಳಕಿಗೆ ಬಂದಿತು. ನ್ಯಾಯಾಲಯದಲ್ಲಿ ಈ ಆರೋಪಿಗಳು ಜಾಮೀನು ಕೇಳುವಾಗ, ‘ನಮ್ಮ ಮೇಲಿರುವ ಅಪರಾಧಕ್ಕೆ ಗರಿಷ್ಠ ೭ ವರ್ಷಗಳ ಶಿಕ್ಷೆಯಾಗಬಹುದು. ಈಗಾಗಲೇ ತನಿಖೆ ಪೂರ್ಣಗೊಂಡು ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ನಮ್ಮಿಂದ ವಶಪಡಿಸಿಕೊಳ್ಳಲು ಇನ್ನು ಏನೂ ಬಾಕಿ ಇಲ್ಲ. ಅಂದ ಮೇಲೆ ಪೊಲೀಸ್ ಕಸ್ಟಡಿಯ ಅಗತ್ಯವೇನಿದೆ ?’ ಎಂದು ವಾದಿಸಿದರು.
ತನಿಖಾ ಸಂಸ್ಥೆಯು ಸರ್ವೋಚ್ಚ ನ್ಯಾಯಾಲಯದ ಒಂದು ಹಳೆಯ ತೀರ್ಪನ್ನು ಉಲ್ಲೇಖಿಸಿತು. ಸರಕಾರಿ ನ್ಯಾಯವಾದಿಗಳು ವಾದ ಮಂಡಿಸುತ್ತಾ, ‘ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಅಥವಾ ನಿಯಮಿತ ಜಾಮೀನು ಸಿಕ್ಕಾಗ, ಅವರು ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವ ಉದ್ದೇಶ ಹೊಂದಿರುವುದಿಲ್ಲ. ಅವರಿಗೆ ನ್ಯಾಯಾಲಯ ನೀಡಿದ ಜಾಮೀನಿನ ಅಹಂಕಾರವಿರುತ್ತದೆ. ಆದ್ದರಿಂದ ಅವರಿಗೆ ಜಾಮೀನು ನೀಡಬಾರದು ಮತ್ತು ಕಸ್ಟಡಿಯಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡಬೇಕು’ ಎಂದರು. ಅದರಂತೆ, ದೆಹಲಿ ಉಚ್ಚ ನ್ಯಾಯಾಲಯವು ಎಲ್ಲಾ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಪ್ರಸ್ತುತ ‘ಡಿಜಿಟಲ್ ಅರೆಸ್ಟ್’ ವಿಷಯವು ಅತ್ಯಂತ ಗಂಭೀರವಾಗಿದ್ದು, ಈ ಬಗ್ಗೆ ನ್ಯಾಯಾಲಯವು ಜಾಗೃತವಾಗಿರುವುದು ಜನತೆಗೆ ಆಶಾದಾಯಕವಾಗಿದೆ.’
ಶ್ರೀಕೃಷ್ಣಾರ್ಪಣಮಸ್ತು
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೩.೫.೨೦೨೬)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು
ಆದರ್ಶ ರಾಷ್ಟ್ರ ನಿರ್ಮಾಣಕ್ಕಾಗಿ ಇಂದಿನ ಪೀಳಿಗೆಯನ್ನು ಸುಸಂಸ್ಕೃತಗೊಳಿಸುವುದು ಎಲ್ಲರ ನೈತಿಕ ಕರ್ತವ್ಯವೇ ಆಗಿದೆ !