ಎಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಕ್ರಾಂತಿಕಾರಿಗಳು ನಡೆಸಿದ ಸ್ಪೂರ್ತಿದಾಯಕ ಮೆರವಣಿಗೆಗಳು, ಎಲ್ಲಿ ಇಂದಿನ ಯುವ ಪೀಳಿಗೆಯು ಸ್ವಾತಂತ್ರ್ಯದಿನದಂದು ದ್ವಿಚಕ್ರ ವಾಹನಗಳ ಮೇಲೆ ನಡೆಸುವ ಮೆರವಣಿಗೆಗಳು !

‘ನಾವು ದೇಶಪ್ರೇಮಿಗಳು’, ಎಂದು ತೋರಿಸಿಕೊಳ್ಳಲು, ಸಾಮಾನ್ಯವಾಗಿ ವರ್ಷವಿಡೀ ದೇಶಪ್ರೇಮದ ಲವಲೇಶವೂ ಕಂಡುಬರದ ಕೆಲವು ಯುವಕರು ಆಗಸ್ಟ್ ೧೫ ರಂದು ದ್ವಿಚಕ್ರ ವಾಹನಗಳಲ್ಲಿ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಮೆರವಣಿಗೆ ಮಾಡುವುದು ಕಂಡುಬರುತ್ತದೆ. ಈ ಮೆರವಣಿಗೆಗಳಲ್ಲಿನ ಘೋಷಣೆಗಳ ಪದ್ಧತಿಯಂತೂ ಎಷ್ಟು ವಿಚಿತ್ರವಾಗಿರುತ್ತದೆ ಎಂದರೆ, ಅವರು ಘೋಷಣೆಗಳನ್ನು ಕೂಗುತ್ತಿದ್ದಾರೋ ಅಥವಾ ಕಿರುಚಾಡುತ್ತಿದ್ದಾರೋ ಎಂದೇ ಅರ್ಥವಾಗುವುದಿಲ್ಲ. ಇಂದಿನ ಯುವ ಪೀಳಿಗೆಯಲ್ಲಿ ದೇಶಪ್ರೇಮದ ಎಷ್ಟು ಕೊರತೆಯಿದೆ ಎಂದು ಇದರಿಂದ ಅರಿವಿಗೆ ಬರುತ್ತದೆ.

ನಮ್ಮ ದೇಶವನ್ನು ಸ್ವತಂತ್ರಗೊಳಿಸಲು ಕ್ರಾಂತಿಕಾರಿಗಳು ಮತ್ತು ದೇಶಭಕ್ತರು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಗ್ರಾಮಗ್ರಾಮಗಳಲ್ಲಿ ಕಾಲ್ನಡಿಗೆಯಲ್ಲಿ ಸ್ವಯಂಪ್ರೇರಿತರಾಗಿ ಮೆರವಣಿಗೆಗಳನ್ನು ನಡೆಸಿದ್ದರು. ಆ ಮೆರವಣಿಗೆಗಳಲ್ಲಿ ಎಷ್ಟೊಂದು ಸಾಮರ್ಥ್ಯವಿತ್ತೆಂದರೆ, ಬ್ರಿಟಿಶ ಸಾಮ್ರಾಜ್ಯವೂ ನಡುಗುತ್ತಿತ್ತು. ಈ ಕ್ರಾಂತಿಕಾರಿಗಳು ಇದೇ ತ್ರಿವರ್ಣ ಧ್ವಜದ ರಕ್ಷಣೆಗಾಗಿ ತಮ್ಮ ಬಲಿ ದಾನ ನೀಡಿದರು; ಆದರೆ ಇಂದಿನ ಯುವಪೀಳಿಗೆಯ ಸ್ಥಿತಿಯು ತದ್ವಿರುದ್ಧವಾಗಿದೆ ಕೆಲವೆಡೆ ದ್ವಿಚಕ್ರ ವಾಹನಗಳ ಮೆರವಣಿಗೆಗಳಲ್ಲಿ, ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಅದನ್ನು ಹೇಗೆಂದರೆ ಹಾಗೆ ಹಾರಿಸುತ್ತಿದ್ದರು. ‘ಈ ತ್ರಿವರ್ಣ ಧ್ವಜವು ನಮ್ಮ ದೇಶದ ಹೆಮ್ಮೆಯಾಗಿದೆ, ಎಂಬ ಅರಿವು ಇಂದಿನ ಯುವಕರಿಗೆ ಉಳಿದಿಲ್ಲ’ ಎಂದೇ ಅನಿಸುತ್ತಿತ್ತು. ಇದರಿಂದ ಒಂದು ವಿಷಯವು ಸ್ಪಷ್ಟವಾಗುತ್ತದೆ ಅದೆಂದರೆ, ಸ್ವಾತಂತ್ರ್ಯದ ನಂತರದ ಕಾಲದಲ್ಲಿ ಯಾವುದೇ ಆಡಳಿತಗಾರನು ಜನರಿಗೆ ದೇಶಪ್ರೇಮವನ್ನು ಕಲಿಸಲಿಲ್ಲ. ಇದರ ಪರಿಣಾಮವಾಗಿ ಇಂದಿನ ಯುವ ಪೀಳಿಗೆಯಲ್ಲಿ ದೇಶಪ್ರೇಮ ಇಲ್ಲ. ಇಂದಿನ ಆಡಳಿತಗಾರರು ಮತ್ತು ಜನರು ಕ್ರಾಂತಿಕಾರಿಗಳನ್ನು ಮರೆತಿರುವುದೇ ಇದಕ್ಕೆ ಕಾರಣವಾಗಿದೆ. ಇದು ಕೃತಘ್ನತೆಯಲ್ಲವೇ ? – ಒಬ್ಬ ರಾಷ್ಟ್ರಪ್ರೇಮಿ
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು