ವಿವೇಕವುಳ್ಳವರು
ಧರ್ಮಾಚರಣಿಗಳು
ರಾಷ್ಟ್ರನಿಷ್ಠರು
ನೈತಿಕತೆಯುಳ್ಳವರು

ಇತ್ತೀಚೆಗೆ ನಮ್ಮ ನೆರೆಯ ರಾಷ್ಟ್ರಗಳಲ್ಲಿ ‘ಜೆನ್ ಝಿ’ (ವರ್ಷ ೧೯೯೭ ರಿಂದ ೨೦೧೦ ರ ನಡುವೆ ಜನಿಸಿದ ಪೀಳಿಗೆ) ಪ್ರತಿಭಟನೆಗಳನ್ನು ನಡೆಸಿತು. ಇದರಲ್ಲಿ ನೇಪಾಳ ಮತ್ತು ಬಾಂಗ್ಲಾದೇಶಗಳಿದ್ದವು, ಹಾಗೆಯೇ ಬಲ್ಗೇರಿಯಾ, ಪೆರು ಮತ್ತು ಮೊರಾಕೊ ದೇಶಗಳಲ್ಲೂ ಪ್ರತಿಭಟನೆಗಳು ನಡೆದವು. ಮುಖ್ಯವಾಗಿ ನೇಪಾಳ ಮತ್ತು ಬಾಂಗ್ಲಾದೇಶದ ಪ್ರತಿಭಟನೆಗಳು ಅತ್ಯಂತ ದೊಡ್ಡದಾಗಿದ್ದವು ಮತ್ತು ಸರಕಾರಿ ಆಸ್ತಿಗೆ ಭಾರಿ ಹಾನಿ ಉಂಟುಮಾಡಿದವು. ಅಲ್ಲಿನ ಬಹುತೇಕ ಯುವಕರಿಗೆ ‘ನಾವು ಇದನ್ನು ಏಕೆ ಮಾಡುತ್ತಿದ್ದೇವೆ ?’ ಎನ್ನುವುದೇ ತಿಳಿದಿರಲಿಲ್ಲ. ಕೇವಲ ವಿದೇಶಿ ಶಕ್ತಿಗಳ ಆಮಿಷಕ್ಕೆ ಒಳಗಾಗಿ ಅವರು ಇದನ್ನು ಮಾಡಿದ್ದರು; ಆದರೆ ನಂತರ ಅವರಿಗೆ ತಮ್ಮ ತಪ್ಪು ಅರಿವಾಯಿತು. ಅವರಲ್ಲಿ ಕೆಲವರು ಸುದ್ದಿವಾಹಿನಿಗಳಲ್ಲಿ, ‘ನಾವು ನಡೆಸಿದ ಈ ತೀವ್ರ ಪ್ರತಿಭಟನೆಗಳಿಂದಾಗಿ ನಮ್ಮ ದೇಶವು ಹಲವು ವರ್ಷಗಳಷ್ಟು ಹಿಂದೆ ಹೋಗಿದೆ’ ಎಂದು ಒಪ್ಪಿಕೊಂಡರು.
ಈ ಪ್ರತಿಭಟನೆಯ ಪರಿಣಾಮವು ಭಾರತದ ಮೇಲೆಯೂ ಸ್ವಲ್ಪ ಮಟ್ಟಿಗೆ ಆಗಲು ಪ್ರಾರಂಭವಾಗಿತ್ತು. ಅಧಿಕಾರದ ದುರಾಸೆ ಯಿಂದ ಕೆಲವು ನಾಯಕರು ಯುವಕರನ್ನು ಎತ್ತಿಕಟ್ಟುತ್ತಿದ್ದರು ಮತ್ತು ಅವರನ್ನು ‘ನೀವು ಇಂತಹ ಪ್ರತಿಭಟನೆಗಳನ್ನು ನಡೆಸಿ ಅಧಿಕಾರವನ್ನು ಯಾವಾಗ ಉರುಳಿಸುತ್ತೀರಿ ?’ ಎಂದು ಕೇಳುತ್ತಿದ್ದರು. ಅದರ ಪರಿಣಾಮವಾಗಿ ಲಡಾಖ್‌ನ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿದ್ದವು; ಆದರೆ ಭಾರತದ ಆಂತರಿಕ ಭದ್ರತೆಯು ಬಲಿಷ್ಠವಾಗಿದೆ ಮತ್ತು ದೇಶದ ಹೆಚ್ಚಿನ ‘ಜೆನ್ ಝಿ’ ಪೀಳಿಗೆಯು ‘ವಿವೇಕಿ’ಯಾಗಿದೆ. ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ. ಭಾರತವನ್ನು ಅಸ್ಥಿರಗೊಳಿಸುವ ವಿದೇಶಿ ಶಕ್ತಿಗಳ ಸಂಚನ್ನು ವಿಫಲಗೊಳಿಸುವಲ್ಲಿ ಸರಕಾರ ಯಶಸ್ವಿಯಾಯಿತು. ‘ಜೆನ್ ಝಿ’ ಎಷ್ಟು ಜಾಗರೂಕರಾಗಿರಬೇಕು ಎಂಬುದು ಇದರಿಂದ ಕಲಿಯಲು ಸಿಕ್ಕಿತು. ಇತರರ ಮಾತನ್ನು ಕೇಳುವ ಬದಲು, ಸ್ವತಃ ಯೋಚಿಸಿ ನೈಜ ಪರಿಸ್ಥಿತಿ ಏನು ಎನ್ನುವುದನ್ನು ಅಧ್ಯಯನ ಮಾಡಬೇಕು. ಭಾರತದಲ್ಲಿ ಅಶಾಂತಿಯನ್ನು ಸೃಷ್ಟಿಸಲು ನಿರುದ್ಯೋಗಿಗಳಿಗೆ ಅನೇಕ ಆರ್ಥಿಕ ಆಮಿಷಗಳನ್ನು ತೋರಿಸಬಹುದು; ಆದರೆ ಅದಕ್ಕೆ ಬಲಿಯಾಗಬಾರದು. ಸಾಮಾಜಿಕ ಜಾಲ ತಾಣಗಳಲ್ಲಿನ ಮಾಹಿತಿಯನ್ನು ಕಣ್ಣು ಮುಚ್ಚಿ ನಂಬದೆ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಯುವ ಪೀಳಿಗೆಯು ‘ನಾವು ಸರಕಾರದಿಂದ ನಿರೀಕ್ಷೆ ಮಾಡುವ ಬದಲು, ನಾನು ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನು ಮಾಡಿದ್ದೇನೆ ?’ ಎಂಬ ಬಗ್ಗೆಯೂ ಯೋಚಿಸಬೇಕು. ‘ಸರಕಾರಿ ವ್ಯವಸ್ಥೆಗೆ ಸರಿಯಾದ ಮಾರ್ಗವನ್ನು ತೋರಿಸಲು ನಾನು ಸ್ವತಃ ಆ ಸೇವೆಯಲ್ಲಿ ಹೇಗೆ ಪಾಲ್ಗೊಳ್ಳಬಹುದು ?’
ಎಂಬ ಬಗ್ಗೆ ಯೋಚಿಸಬೇಕು.
ಇತ್ತೀಚೆಗೆ ಕಾಶಿಯಲ್ಲಿ ದೇವವ್ರತ ರೇಖೆ ಎಂಬ ೧೯ ವರ್ಷದ ವೇದಮೂರ್ತಿಗಳು ಸತತ ೫೦ ದಿನಗಳ ಕಾಲ ‘ದಂಡಕ್ರಮ’ ಪಾರಾಯಣ ಮಾಡಿದರು. ಕಳೆದ ೨೦೦ ವರ್ಷಗಳಲ್ಲಿ ಯಾರೂ ಇದನ್ನು ಮಾಡಲು ಸಾಧ್ಯವಾಗಿರಲಿಲ್ಲ. ಮೈಥಿಲಿ ಠಾಕೂರ್ ಅವರು ಬಿಹಾರದಿಂದ ಅತ್ಯಂತ ಕಿರಿಯ ವಯಸ್ಸಿನ ಶಾಸಕಿಯಾಗಿ ಆಯ್ಕೆಯಾದರು. ಅವರು ಭಕ್ತಿ ಮತ್ತು ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಅವರು ಚಲನಚಿತ್ರಗಳಲ್ಲಿ ಹಾಡುವ ಅನೇಕ ಅವಕಾಶಗಳನ್ನು ನಿರಾಕರಿಸಿದರು. ಭಸ್ಮವನ್ನು ಧರಿಸುವ ಡಿ. ಗುಕೇಶ ಅವರು ಚದುರಂಗ ಆಟದಲ್ಲಿ (ಚೆಸ್‌ಪಂದ್ಯದಲ್ಲಿ) ವಿಶ್ವ ದಾಖಲೆ ಸ್ಥಾಪಿಸಿದರು. ಈ ರೀತಿಯ ಅನೇಕ ಹೊಸ ಪೀಳಿಗೆಯವರು ತಮ್ಮ ಕೃತಿಗಳ ಮೂಲಕ ‘ಬದಲಾವಣೆ’ ಹೇಗೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಕೇವಲ ವ್ಯವಸ್ಥೆಯನ್ನು ಟೀಕಿಸುತ್ತಾ ಕುಳಿತುಕೊಳ್ಳಲಿಲ್ಲ, ಬದಲಾಗಿ ತಮ್ಮಿಂದಲೇ ಬದಲಾವಣೆಯನ್ನು ಆರಂಭಿಸಿ ತೋರಿಸಿದರು. ರಾಷ್ಟ್ರಭಕ್ತಿಯಿಂದ ತುಂಬಿದ ಭಾರತೀಯ ಯುವ ಪೀಳಿಗೆಯ ನಿರ್ಮಾಣಕ್ಕಾಗಿ ಶಿಸ್ತು, ದೃಢ ನಿಶ್ಚಯ, ಸಮರ್ಪಣೆ ಮತ್ತು ಧರ್ಮಾಚರಣೆಯ ಅವಶ್ಯಕತೆಯಿದೆ !
– ಶ್ರೀ. ಜಯೇಶ ಬೊರಸೆ, ಪುಣೆ
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !