ಭಾರತದ ಮತ್ತು ಜಗತ್ತಿನಾದ್ಯಂತ ಇರುವ ಸಾಮ್ಯವಾದಿಗಳಿಗೆ ತಮ್ಮ ವಿಶ್ವಾಸಾರ್ಹತೆ ಪಾತಾಳಕ್ಕೆ ಕುಸಿದಿರುವುದರಿಂದ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಸಾಂವಿಧಾನಿಕ ಮಾರ್ಗದಿಂದ ಎಂದಿಗೂ ಅಧಿಕಾರ ಪಡೆಯಲು ಸಾಧ್ಯವಿಲ್ಲ ಎಂಬುದು ಹಿಂದೆಯೇ ಅರಿವಾಗಿದೆ; ಆದ್ದರಿಂದಲೇ ಪ್ರಜಾಪ್ರಭುತ್ವದಲ್ಲಿನ ಸ್ವಾತಂತ್ರ್ಯವನ್ನು ಬಳಸಿಕೊಂಡು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನೇ ನಾಶಪಡಿಸುತ್ತಾ ಅರಾಜಕತೆ ಮತ್ತು ಹಿಂಸೆಯ ಮಾರ್ಗದಿಂದ ಅಧಿಕಾರವನ್ನು ವಶಪಡಿಸಿಕೊಳ್ಳುವ ಒಂದು ಮಾರ್ಗವನ್ನು ಅವರು ಅಭಿವೃದ್ಧಿಪಡಿಸಿದ್ದಾರೆ, ಅದರ ಹೆಸರೇ, ‘ಆಲ್ಟರ್ನೇಟಿವ್ ಪಾಲಿಟಿಕ್ಸ್ ಅಥವಾ ‘ಪರ್ಯಾಯ ರಾಜಕಾರಣ.

ಯುವಕರೇ, ಅರಾಜಕತಾವಾದಿಮುಖವಾಡವನ್ನು ಗುರುತಿಸಿ!
ಭ್ರಷ್ಟಾಚಾರ, ನಿರುದ್ಯೋಗ ನಿಜವಾಗಿ ಪ್ರಮುಖ ಸಮಸ್ಯೆಗಳು ಎಂಬುದು ನಿಜ; ಆದರೆ ಅದಕ್ಕಾಗಿ ಕೃತಕ ಬುದ್ಧಿಮತ್ತೆ, ‘ಕ್ವಾಂಟಮ್ ಕಂಪ್ಯೂಟಿಂಗ್, ‘ಸೆಮಿ ಕಂಡಕ್ಟರ್ ನಂತಹ ಭವಿಷ್ಯದ ತಂತ್ರಜ್ಞಾನದ ತರಬೇತಿ, ಕೌಶಲ್ಯ ಅಭಿವೃದ್ಧಿಯಂತಹ ವಿಷಯಗಳಿಗೆ ಒತ್ತು ನೀಡುವ ರಚನಾತ್ಮಕ ಜನಾಂದೋಲನ ಆರಂಭವಾಗಬೇಕು, ಆಗ ಮಾತ್ರ ಯುವಕರು ನಿರೀಕ್ಷಿಸುವ ಸುಧಾರಣೆಗಳು ಕಂಡುಬರುತ್ತವೆ ಮತ್ತು ದೇಶದ ಪ್ರಗತಿಯಾಗುತ್ತದೆ; ಆದರೆ ಪರಿಸ್ಥಿತಿಯನ್ನು ಸುಧಾರಿಸುವುದು ಸಾಮ್ಯವಾದಿಗಳ ಉದ್ದೇಶವೇ ಅಲ್ಲ ಮತ್ತು ದೇಶದ ಪ್ರಗತಿಯಂತೂ ಖಂಡಿತ ಅಲ್ಲ. ಬದಲಿಗೆ ಅವರ ವಾದವೆಂದರೆ, ‘ಪರಿಸ್ಥಿತಿ ಎಷ್ಟು ಸುಧಾರಿಸುತ್ತದೆಯೋ ಕ್ರಾಂತಿ ಅಷ್ಟು ದೂರ ಹೋಗುತ್ತದೆ. ಪರಿಸ್ಥಿತಿ ಎಷ್ಟು ಹದ ಗೆಡುತ್ತದೆಯೋ ಮತ್ತು ಪಾತಾಳಕ್ಕೆ ಕುಸಿಯುತ್ತದೆಯೋ, ಅಷ್ಟು ಬೇಗ ಯುವಕರು ಕ್ರಾಂತಿಗೆ ಸಿದ್ಧರಾಗುತ್ತಾರೆ; ಆದರೆ ಇಂತಹ ಅರಾಜಕತಾವಾದಿ ಕ್ರಾಂತಿಯಿಂದ ಈವರೆಗೆ ಎಲ್ಲೂ ಒಳ್ಳೆಯದೂ ಆಗಿಲ್ಲ; ಆದ್ದರಿಂದಲೇ ಯುವಕರು ಸಂವಿಧಾನ, ಪ್ರಜಾಪ್ರಭುತ್ವ, ಶಾಂತಿಯುತ ಹೋರಾಟ – ಮುಂತಾದ ಮುಖವಾಡಗಳ ಹಿಂದಿರುವ ಅರಾಜಕತಾವಾದಿ ಮುಖವನ್ನು ಗುರುತಿಸಬೇಕು ಮತ್ತು ಅದರ ವಿನಾಶಕಾರಿ ಪರಿಣಾಮಗಳಿಂದ ದೂರವಿರಬೇಕು.

‘ರಾಜಕೀಯ ಪಕ್ಷಗಳು, ನ್ಯಾಯಾಂಗ, ಚುನಾವಣಾ ಆಯೋಗ, ಭದ್ರತಾ ಪಡೆಗಳಂತಹ ಸಾಂವಿಧಾನಿಕ ಸಂಸ್ಥೆಗಳನ್ನು ನಿರಂತರವಾಗಿ ಅಪಖ್ಯಾತಿಗೊಳಿಸಿ, ಅವುಗಳ ಬಗ್ಗೆ ಅನುಮಾನ ಹುಟ್ಟುಹಾಕಿ, ಜನರಿಗೆ ಸಾಂವಿಧಾನಿಕ ಮಾರ್ಗದ ಮೇಲೆ ಕಿಂಚಿತ್ತೂ ನಂಬಿಕೆ ಉಳಿಯದಂತಹ ಪರಿಸ್ಥಿತಿಯನ್ನು ಸೃಷ್ಟಿಸುವುದು; ಅನಂತರ ಜನರ ರಕ್ಷಕರು ಮತ್ತು ಆಶಾಕಿರಣವೆಂದು ತಮ್ಮದೇ ಗುಂಪಿನ ಕೆಲವು ‘ಎನ್.ಜಿ.ಒಗಳನ್ನು (ಸ್ವಯಂಸೇವಾ ಸಂಸ್ಥೆಗಳು) ಮತ್ತು ‘ಆಕ್ಟಿವಿಸ್ಟ್ಗಳನ್ನು (ಸಾಮಾಜಿಕ ಕಾರ್ಯಕರ್ತರು) ಎತ್ತಿ ಕಟ್ಟುವುದು; ‘ಮ್ಯಾಗ್ಸೆಸೆ ಮಾದರಿಯ ಪ್ರಶಸ್ತಿಗಳನ್ನು ನೀಡಿ ಅವರನ್ನು ಅತಿಯಾಗಿ ಹೊಗಳುವುದು; ಯಾವುದಾದರೂ ಭಾವನಾತ್ಮಕ ವಿಷಯವನ್ನು ತೆಗೆದುಕೊಂಡು ಹೋರಾಟ ಆರಂಭಿಸುವುದು ಅಥವಾ ಬೇರೆಯವರು ಆರಂಭಿಸಿದ ಹೋರಾಟವನ್ನು ‘ಹೈಜಾಕ್ ಮಾಡುವುದು (ವಶಪಡಿಸಿಕೊಳ್ಳುವುದು); ಜನರ ಸಹಾನುಭೂತಿ ಸುಲಭವಾಗಿ ಸಿಗುವಂತಹ ಮಹಿಳೆಯರು, ರೈತರು, ವಿದ್ಯಾರ್ಥಿಗಳಂತಹ ಯಾವುದಾದರೂ ಗುಂಪನ್ನು ಮುಂದಿಡುವುದು; ಈ ಹೋರಾಟದ ವಿರುದ್ಧ ಬಲಪ್ರಯೋಗ ಮಾಡಲು ಹೇಗಾದರೂ ಮಾಡಿ ಸರಕಾರವನ್ನು ಒತ್ತಾಯಿಸುವುದು ಮತ್ತು ಒಮ್ಮೆ ಈ ಕಾರ್ಯಾಚರಣೆಯಲ್ಲಿ ಕೆಲವರು ಮೃತಪಟ್ಟರೆ, ಸಹಾನುಭೂತಿಯ ಅಲೆಯ ಮೇಲೆ ಸವಾರಿ ಮಾಡುತ್ತಾ ಅರಾಜಕತೆ ಮತ್ತು ಹಿಂಸಾಚಾರದ ಬೆಂಕಿಯನ್ನು ಹೊತ್ತಿಸಿ ಅಧಿಕಾರ ಪಲ್ಲಟ ಮಾಡುವುದು ?, ಈ ‘ಟೆಂಪ್ಲೆಟನ್ನು ಸಾಮ್ಯವಾದಿಗಳು ಕಳೆದ ಕೆಲವು ದಶಕಗಳಿಂದ ಅಭಿವೃದ್ಧಿಪಡಿಸಿದ್ದಾರೆ.
ಯುವಕರೇ, ಅರಾಜಕತಾವಾದಿ ಮುಖವಾಡವನ್ನು ಗುರುತಿಸಿ !
ಭ್ರಷ್ಟಾಚಾರ, ನಿರುದ್ಯೋಗ ನಿಜವಾಗಿ ಪ್ರಮುಖ ಸಮಸ್ಯೆಗಳು ಎಂಬುದು ನಿಜ; ಆದರೆ ಅದಕ್ಕಾಗಿ ಕೃತಕ ಬುದ್ಧಿಮತ್ತೆ, ‘ಕ್ವಾಂಟಮ್ ಕಂಪ್ಯೂಟಿಂಗ್, ‘ಸೆಮಿ ಕಂಡಕ್ಟರ್ ನಂತಹ ಭವಿಷ್ಯದ ತಂತ್ರಜ್ಞಾನದ ತರಬೇತಿ, ಕೌಶಲ್ಯ ಅಭಿವೃದ್ಧಿಯಂತಹ ವಿಷಯಗಳಿಗೆ ಒತ್ತು ನೀಡುವ ರಚನಾತ್ಮಕ ಜನಾಂದೋಲನ ಆರಂಭವಾಗಬೇಕು, ಆಗ ಮಾತ್ರ ಯುವಕರು ನಿರೀಕ್ಷಿಸುವ ಸುಧಾರಣೆಗಳು ಕಂಡುಬರುತ್ತವೆ ಮತ್ತು ದೇಶದ ಪ್ರಗತಿಯಾಗುತ್ತದೆ; ಆದರೆ ಪರಿಸ್ಥಿತಿಯನ್ನು ಸುಧಾರಿಸುವುದು ಸಾಮ್ಯವಾದಿಗಳ ಉದ್ದೇಶವೇ ಅಲ್ಲ ಮತ್ತು ದೇಶದ ಪ್ರಗತಿಯಂತೂ ಖಂಡಿತ ಅಲ್ಲ. ಬದಲಿಗೆ ಅವರ ವಾದವೆಂದರೆ, ‘ಪರಿಸ್ಥಿತಿ ಎಷ್ಟು ಸುಧಾರಿಸುತ್ತದೆಯೋ ಕ್ರಾಂತಿ ಅಷ್ಟು ದೂರ ಹೋಗುತ್ತದೆ. ಪರಿಸ್ಥಿತಿ ಎಷ್ಟು ಹದ ಗೆಡುತ್ತದೆಯೋ ಮತ್ತು ಪಾತಾಳಕ್ಕೆ ಕುಸಿಯುತ್ತದೆಯೋ, ಅಷ್ಟು ಬೇಗ ಯುವಕರು ಕ್ರಾಂತಿಗೆ ಸಿದ್ಧರಾಗುತ್ತಾರೆ; ಆದರೆ ಇಂತಹ ಅರಾಜಕತಾವಾದಿ ಕ್ರಾಂತಿಯಿಂದ ಈವರೆಗೆ ಎಲ್ಲೂ ಒಳ್ಳೆಯದೂ ಆಗಿಲ್ಲ; ಆದ್ದರಿಂದಲೇ ಯುವಕರು ಸಂವಿಧಾನ, ಪ್ರಜಾಪ್ರಭುತ್ವ, ಶಾಂತಿಯುತ ಹೋರಾಟ – ಮುಂತಾದ ಮುಖವಾಡಗಳ ಹಿಂದಿರುವ ಅರಾಜಕತಾವಾದಿ ಮುಖವನ್ನು ಗುರುತಿಸಬೇಕು ಮತ್ತು ಅದರ ವಿನಾಶಕಾರಿ ಪರಿಣಾಮಗಳಿಂದ ದೂರವಿರಬೇಕ |
ಭಾರತದ ನೆರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಅಧಿಕಾರ ಪಲ್ಲಟಗಳಿಗೂ ಇದೇ ‘ಟೆಂಪ್ಲೆಟ್ ಬಳಸಲಾಯಿತು. ಅವರ ನಿಜವಾದ ಗುರಿ ಭಾರತವೇ ಆಗಿದೆ. ಇದಕ್ಕಾಗಿ ಒಮ್ಮೆ ಕೆಜ್ರಿವಾಲ್, ಮತ್ತೊಮ್ಮೆ ಸೋನಮ್ ವಾಂಗ್ಚುಕ್ ಅವರಂತಹ ಮುಖಗಳನ್ನು ಮುಂದಿಡಲಾಯಿತು. ಅವು ವಿಫಲವಾದ ನಂತರ ಈಗ ‘ಜಿರಳೆ ಪಾರ್ಟಿಯ ದಾಳ ಉರುಳಿಸಲಾಗಿದೆ. ದೇಶದ ವಿಪಕ್ಷಗಳು ಮತ್ತು ‘ಲೆಫ್ಟ್-ಲಿಬರಲ್ ಇಕೋಸಿಸ್ಟಮ್ (ಎಡಪಂಥೀಯ ಮತ್ತು ಉದಾರವಾದಿ ವ್ಯವಸ್ಥೆ) ಎಷ್ಟೊಂದು ದಿವಾಳಿಯಾಗಿವೆ ಎಂದರೆ, ‘ಇನ್ನು ಮೋದಿ ಸರಕಾರ ಹೋಯಿತು ಬಿಡಿ, ಎಂದು ತಿಳಿದುಕೊಂಡು ಈ ಗುಂಪುಗಳು ಸಂಭ್ರಮಿಸುತ್ತಿವೆ. – ಶ್ರೀ. ಅಭಿಜಿತ್ ಜೋಗ್, ಪ್ರಸಿದ್ಧ ಲೇಖಕರು, ಪುಣೆ. (೫.೬.೨೦೨೬)

ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು