ಪ್ರಯಾಗರಾಜ್ ನಲ್ಲಿ ಶಿವನ ದೇವಸ್ಥಾನದಿಂದ ಶಿವಲಿಂಗ ಕಳ್ಳತನ !

ಇಲ್ಲಿನ ಅತರಸುಯಿಯಾ ಪ್ರದೇಶದ ಪರ್ವತ ಮೊಹಲ್ಲಾದಲ್ಲಿರುವ ಶಿವನ ದೇವಸ್ಥಾನದಿಂದ ಶಿವಲಿಂಗವನ್ನೇ ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಭಕ್ತರು ಪೂಜೆ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಆಂಬಿವಲಿ (ಪಾಲಘರ)ಯ ಇರಾನಿ ವಸಾಹತುವಿನಲ್ಲಿ ಕಳ್ಳನನ್ನು ಹಿಡಿದ ಪೊಲೀಸರ ಮೇಲೆ ಕಲ್ಲು ತೂರಾಟ !

ಫಿರೋಜನು ಒಬ್ಬ ವ್ಯಕ್ತಿಗೆ 1 ಲಕ್ಷ ರೂಪಾಯಿ ವಂಚಿಸಿದ್ದನು. ಈ ಪ್ರಕರಣದಲ್ಲಿ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆಯಲ್ಲಿ ಫಿರೋಜ್ ಹಲವು ಅಪರಾಧಗಳನ್ನು ಮಾಡಿ ಪರಾರಿಯಾಗಿರುವುದು ಪತ್ತೆಯಾಗಿದೆ.

ಶ್ರೀ ತುಳಜಾಭವಾನಿ ದೇವಿಯ ಆಭರಣಗಳು ನಾಪತ್ತೆಯಾದ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ನಿಲುವನ್ನು ಸ್ಪಷ್ಟಗೊಳಿಸಬೇಕು ! – ಕಿಶೋರ ಗಂಗಣೆ, ಮಾಜಿ ಅಧ್ಯಕ್ಷ, ಪೂಜಾರಿ ಮಂಡಳಿ

ಶ್ರೀ ತುಳಜಾಭವಾನಿ ದೇವಿಯ ಆಭರಣಗಳು ಕಳ್ಳತನವಾಗಿರುವ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ನಿಲುವನ್ನು ಅಧ್ಯಕ್ಷರು ಎನ್ನುವ ಸಂಬಂಧದಿಂದ ಸ್ಪಷ್ಟ ಪಡಿಸಬೇಕು.

ಘಾಟಶಿರಸ್ (ಅಹಿಲ್ಯಾನಗರ) ಶ್ರೀಕ್ಷೇತ್ರ ವೃದ್ಧೇಶ್ವರ ದೇವಸ್ಥಾನದಲ್ಲಿ ಕಳ್ಳತನ

ಪಾತರ್ಡಿ ತಾಲೂಕಿನ ಘಾಟಶಿರಸ್ ನ ಗರ್ಭಗಿರಿಯ ತಪ್ಪಲಿನಲ್ಲಿದ್ದ ಮತ್ತು ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀಕ್ಷೇತ್ರ ವೃದ್ಧೇಶ್ವರ ದೇವಸ್ಥಾನದ ಹೊರಭಾಗದ 4 ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ.

ರಾಮನಗರದಲ್ಲಿ ಹಸುಗಳ ಕಳ್ಳತನ : 4 ಹಸುಗಳ ಹತ್ಯೆ ಮಾಡಿ ಮಾಂಸ ಕದ್ದೊಯ್ದಿದರು !

ಅಜ್ಞಾತ ಗೋಕಳ್ಳಸಾಗಾಣಿಕೆದಾರರು ಜುಲೈ 21 ರ ರಾತ್ರಿ ಜಿಲ್ಲೆಯ ಬಾಗೀನಗೆರೆ ಗ್ರಾಮದ ರೈತನೊಬ್ಬನ ಕೊಟ್ಟಿಗೆಯಿಂದ 4 ಹಸುಗಳನ್ನು ಕದ್ದೊಯ್ದಿದ್ದಾರೆ. ಆ ಹಸುಗಳನ್ನು ಪಕ್ಕದ ಹೊಲದಲ್ಲಿ ಹತ್ಯೆ ಮಾಡಿ ಅವುಗಳ ಮಾಂಸ ಮತ್ತು ಚರ್ಮವನ್ನು ಹೊತ್ತೊಯ್ದಿದ್ದಾರೆ ಹಾಗೂ ಹಸುವಿನ ದೇಹದ ಉಳಿದ ಭಾಗವನ್ನು ಅಲ್ಲಿಯೇ ಎಸೆದಿದ್ದಾರೆ.

ಹಾಸನದ ಹೋಲಗಳಿಂದ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನ !

ದೇಶದಲ್ಲಿ ಟೊಮೆಟೊ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕೆಜಿಗೆ ೧೦೦ ರಿಂದ ೧೫೦ ರೂಪಾಯಿಗಳಿಗೆ ಟೊಮೆಟೊ ಮಾರಾಟವಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಹಾಸನ ಜಿಲ್ಲೆಯ ಗೋಣಿ ಸೋಮನಹಳ್ಳಿ ಗ್ರಾಮದ ರೈತ ಮಹಿಳೆಯೊಬ್ಬಳು ತಮ್ಮ ಜಮೀನಿನಲ್ಲಿ ೨.೫ ಲಕ್ಷ ಮೌಲ್ಯದ ಟೊಮೆಟೊ ಕಳ್ಳತನವಾಗಿದೆ ಎಂದು ಆರೋಪಿಸಿದ್ದಾಳೆ.

ಟಾಕಳಿಭಾನ (ತಾ. ಶ್ರೀರಾಂಪುರ) ಇಲ್ಲಿಯ ಸಾಯಿಬಾಬಾ ಮಂದಿರದಲ್ಲಿನ ಹುಂಡಿಯಲ್ಲಿನ ಹಣ ಕಳವು !

ಅಪರಿಚಿತ ಕಳ್ಳರು ಟಾಕಳಿಭಾನ ಇಲ್ಲಿಯ ಶ್ರೀ ಸಾಯಿಬಾಬಾ ದೇವಸ್ಥಾನದ ಮುಖ್ಯದ್ವಾರದ ಬೀಗ ಒಡೆದು ಹುಂಡಿಯಲ್ಲಿನ ಹಣ ಕಳವು ಮಾಡಿದ್ದಾರೆ.

ಮಣಿಪುರದಲ್ಲಿ ಹಿಂಸಾಚಾರ ನಡೆಸುವವರಿಂದ ರಾಜಾರೋಷವಾಗಿ ನಿಷೇಧಿತ ಚೀನಾದ ಬೈಕಗಳ ಉಪಯೋಗ

ನಡೆಯುತ್ತಿರುವ ಹಿಂಸಾಚಾರದಲ್ಲಿ ನಿಷೇಧಿತ ಚೀನಾದ ‘ಕೆನಬೋ ಬೈಕ್’ಅನ್ನು ರಾಜಾರೋಷವಾಗಿ ಉಪಯೋಗಿಸಲಾಗುತ್ತಿದೆ. ಉಖರುಲ್ ಮತ್ತು ಕಮಜಾಂಗ್ ಈ ಹಿಂಸಾಚಾರ ಪೀಡಿತ ಗುಡ್ಡಗಾಡ ಜಿಲ್ಲೆಯಲ್ಲಿ ಈ ವಾಹನಗಳ ಉಪಯೋಗ ಆಗುತ್ತಿರುವುದು ಕಂಡು ಬಂದಿದೆ. ವಿಶೇಷ ಗಮನ ನೀಡುವ ಅವಶ್ಯಕತೆ ಇಲ್ಲದಿರುವ ಈ ಬೈಕ್ ಕೇವಲ ೨೫ ಸಾವಿರ ರೂಪಾಯಿಗೆ ದೊರೆಯುತ್ತದೆ.

ಮುರಾದಾಬಾದ (ಉತ್ತರಪ್ರದೇಶ) ಇಲ್ಲಿನ 2 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ನಯೀಮ್ ನ ಬಂಧನ

ದೇವಸ್ಥಾನದಲ್ಲಿ ಯಾರು ಕಳ್ಳತನ ಮಾಡುತ್ತಾರೆ ? ಎನ್ನುವುದನ್ನು ತಿಳಿಯಿರಿ ! ಸರಕಾರ ಇಂತಹ ಕಳ್ಳರಿಗೆ ಜೀವಾವಧಿ ಶಿಕ್ಷೆ ನೀಡಬೇಕು !