ಠಾಣೆ ಜಿಲ್ಲೆಯ ಶಹಾಪುರನ ಘಟನೆ !
ಶಹಾಪುರ (ಠಾಣೆ ಜಿಲ್ಲೆ) – ಮುಂಬಯಿ ಪೊಲೀಸ್ ಇಲಾಖೆಯಿಂದ ಅಮಾನತ್ತುಗೊಂಡಿರುವ ಪೊಲೀಸ ಸಿಬ್ಬಂದಿ ಚಂದ್ರಕಾಂತ ಗವಾರೆ ಇವನು ತನ್ನ ಸಹಚರರ ಜೊತೆಗೆ ಮುಂಬಯಿ-ನಾಶಿಕ ಹೆದ್ದಾರಿಯಲ್ಲಿ ಹೋಗುವ ಒಂದು ಟೆಂಪೋದಿಂದ ೫ ಕೋಟಿ ೪೦ ಲಕ್ಷ ರೂಪಾಯ ಲೂಟಿ ಮಾಡಿದ್ದಾರೆ. ಪೊಲೀಸ ಇರುವುದಾಗಿ ಸುಳ್ಳು ಹೇಳಿ ಈ ರೀತಿ ಮಾಡಿದ್ದಾನೆ. ಈ ಪ್ರಕರಣದಲ್ಲಿ ಠಾಣೆ ಗ್ರಾಮೀಣ ಪೊಲೀಸರು ಚಂದ್ರಕಾಂತ ಗವಾರೆ ಇವರ ಜೊತೆಗೆ ೧೨ ಜನರನ್ನು ಬಂಧಿಸಿದ್ದಾರೆ. ಪೊಲೀಸರು ಅವರಿಂದ ಲೂಟಿ ಮಾಡಿರುವ ಶೇಕಡ ೫೦ ರಷ್ಟು ಹಣ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಅವನ ಇತರ ಸಹಚರರನ್ನು ಹುಡುಕುತ್ತಿದ್ದಾರೆ. ಲೂಟಿಯ ಪ್ರಕಾರಣದಲ್ಲಿ ಶಹಾಪುರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಹಣ ಜಳಗಾವದಲ್ಲಿನ ಬಂಗಾರ ಬೆಳ್ಳಿಯ ವ್ಯಾಪಾರಿಯವರದ್ದಾಗಿದೆ. ಚಂದ್ರಕಾಂತ ಗವಾರೆ ಇವನನ್ನು ೨೦೧೭ ರಂದು ಅಮಾನತ್ತುಗೊಳಿಸಲಾಗಿತ್ತು. ಆ ಸಮಯದಲ್ಲಿ ಅವನು ಓರ್ವ ವಜ್ರದ ವ್ಯಾಪಾರಿಗೆ ಹೆದರಿಸಿ ಲೂಟಿ ಮಾಡಿದ್ದನು.
A group of dismissed Policemen loot an amount to the tune of 5 Crore 40 Lakhs !
📍#Shahapur Thane District
One of the accused was dismissed for intimidating and robbing a diamond merchant earlier !
This incident underscores the need to imprison such criminally inclined… pic.twitter.com/gXtlMyO04u
— Sanatan Prabhat (@SanatanPrabhat) March 23, 2024
ಸಂಪಾದಕೀಯ ನಿಲುವುಇಂತಹ ಅಪರಾಧಿ ಮಾನಸಿಕತೆಯ ಪೊಲೀಸರಿಗೆ ಕೇವಲ ಅಮಾನತು ಮಾತ್ರವಲ್ಲ ಅವರನ್ನು ಜೈಲಿಗೆ ಅಟ್ಟುವುದು ಅವಶ್ಯಕವಾಗಿದೆ, ಇದೇ ಈ ಘಟನೆಯಿಂದ ಕಂಡು ಬಂದಿದೆ ! |