ಕಳ್ಳತನ ಮಾಡುವ ಉದ್ದೇಶದಿಂದ ಬಾಂಗ್ಲಾದೇಶದ ಸೇವಾಶ್ರಮ ದೇವಸ್ಥಾನದ ವೃದ್ಧೆ ಮಹಿಳಾ ಅರ್ಚಕಿಯ ಕೊಲೆ !

ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು !


ಗೋಪಾಲಗಂಜ (ಬಾಂಗ್ಲಾದೇಶ) – ಇಲ್ಲಿನ ಮಾಲಿಬಾಟ ವಿಶ್ವಬಂಧು ಸೇವಾಶ್ರಮ ಮಂದಿರದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಹಶಿಲತಾ ಬಿಸ್ವಾಸ್ (ವಯಸ್ಸು 70 ವರ್ಷ)ಇವರ ಹತ್ಯೆ ಮಾಡಲಾಗಿದೆ. ಅವರ ಬಾಯಿಯನ್ನು ಬಟ್ಟೆಯಿಂದ ಮುಚ್ಚಿ ಕೈಗಳನ್ನು ಹಗ್ಗಗಳಿಂದ ಕಟ್ಟಲಾಗಿತ್ತು. ಕೊಲೆಯಾದ ಬಳಿಕ ದೇವಸ್ಥಾನಕ್ಕೆ ತೆರಳಿದ ಜನರು ಕಾಣಿಕೆ ಡಬ್ಬಿ ಹಾಗೂ ತಿಜೋರಿ ತೆರೆದಿರುವುದು ಕಂಡು ಬಂದಿದೆ. ಅದರಲ್ಲಿದ್ದ ಬೆಲೆಬಾಳುವ ವಸ್ತುಗಳು ಹಾಗೂ ಹಣ ಕಳ್ಳತನವಾಗಿರುವುದು ಕಂಡು ಬಂದಿದೆ. ಇದರಿಂದಾಗಿ ಕಳ್ಳತನದ ಉದ್ದೇಶದಿಂದ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಪೊಲೀಸರು ಈ ಹತ್ಯೆಯ ತನಿಖೆ ನಡೆಸುತ್ತಿದ್ದಾರೆ.

1. ಹಶಿಲತಾ ಬಿಸ್ವಾಸ ಅವರು ಕಳೆದ ಒಂದು ವರ್ಷದಿಂದ ಮಾಲಿಬಾಟ ವಿಶ್ವಬಂಧು ಸೇವಾಶ್ರಮ ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಮೊದಲು ಅವರ ಪತಿ ದೀಪಿನ್ ಬಿಸ್ವಾಸ್ 10 ವರ್ಷಗಳ ವರೆಗೆ ಅಲ್ಲಿನ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ದೀಪಿನ್ ಬಿಸ್ವಾಸ್ ಒಂದು ವರ್ಷದ ಹಿಂದೆ ನಿಧನರಾದರು. ಪತಿಯ ಮರಣದ ನಂತರ ಹಾಶಿಲತಾ ಸೇವಾಶ್ರಮದ ಪೂಜೆಯ ಕಾರ್ಯವನ್ನು ನಡೆಸುತ್ತಿದ್ದರು.

2. ಮಾಲಿಬಟಾ ವಿಶ್ವಬಂಧು ಸೇವಾಶ್ರಮದ ಕಾರ್ಯದರ್ಶಿಗಳು ಈ ಹತ್ಯೆಯನ್ನು ನಿಷೇಧಿಸಿ, ಈ ಮೊದಲು ಆಶ್ರಮದಲ್ಲಿ ಕಳ್ಳತನದ ಅನೇಕ ಘಟನೆಗಳು ನಡೆದಿದೆಯೆಂದು ಹೇಳಿದ್ದಾರೆ.

3. ಗೋಪಾಲಗಂಜ ಜಿಲ್ಲೆಯ ‘ಹಿಂದೂ-ಬೌದ್ಧ-ಕ್ರಿಶ್ಚಿಯನ್ ಏಕತಾ ಪರಿಷತ್ತು’,ಇದರ ಅಧ್ಯಕ್ಷರಾಗಿರುವ ಪಲ್ಟು ಬಿಸ್ವಾಸ್ ಇವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿದ್ದಾರೆ.