|
ನವ ದೆಹಲಿ – ಇತ್ತೀಚಿಗೆ ಕೇಂದ್ರ ಸರಕಾರದಿಂದ ಈಶಾನ್ಯ ಭಾರತದಲ್ಲಿನ ೪ ರಾಜ್ಯಗಳು ಮ್ಯಾನ್ಮಾರದ ಗಡಿಗೆ ಸಮಿಪ ಆಗಿರುವುದನ್ನು ಮುಚ್ಚುವ ನಿರ್ಣಯ ಕೈಗೊಂಡಿದೆ. ಆದ್ದರಿಂದ ಕಳೆದ ೬ ವರ್ಷಗಳಿಂದ ನಡೆಯುತ್ತಿರುವ ಫ್ರೀ ಮೂಮೆಂಟ್ ರೆಜಿಮ್ (ಎರಡು ದೇಶಗಳ ನಡುವಿನ ೧೬ ಕಿಮೀ ಅಂತರದ ಗಡಿಯ ವರೆಗೆ ವೀಸಾ ಇಲ್ಲದೆ ಪ್ರಯಾಣ ಮಾಡಬಹುದುದಾದ ಸೌಲಭ್ಯ) ರದ್ದುಪಡಿಸಿದ್ದಾರೆ. ಕಳೆದ ವರ್ಷ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಮ್ಯಾನ್ಮಾರ್ ಸೊಪ್ಪು ಹಾಕಲಾಗಿತ್ತು. ತೆರೆದ ಗಡಿಯಿಂದ ಶಸ್ತ್ರಾಸ್ತ್ರಗಳು ಮತ್ತು ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು. ಆದ್ದರಿಂದ ಸರಕಾರವು ಈ ನಿರ್ಣಯ ತೆಗೆದುಕೊಂಡುದೆ. ಈಗ ಇದಕ್ಕೆ ಈಶಾನ್ಯ ರಾಜ್ಯಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಸರಕಾರದ ನಿರ್ಣಯದಿಂದ ಪರ್ವತಗಳು ಮತ್ತು ಕಣಿವೆಗಳಲ್ಲಿ ಎರಡು ಭಾಗಗಳಾಗಿವೆ. ಕಣವೆಗಳಲ್ಲಿ ಜನರು ಸಂತೋಷವಾಗಿದ್ದಾರೆ ಹಾಗೂ ಗುಡ್ಡುಗಾಡ ಪ್ರದೇಶದಲ್ಲಿನ ಜನರು ಇದಕ್ಕೆ ವಿರೋಧಿಸುತ್ತಿದ್ದಾರೆ. ಮೀಝೋರಾಮ್ ಮತ್ತು ನಾಗಾಲ್ಯಾಂಡ್ ಈ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಇದನ್ನು ವಿರೋಧಿಸುತ್ತಿದ್ದಾರೆ. ಮಿಝೋರಾಂನ ಅನೇಕ ಸಂಘಟನೆಗಳು ಈ ನಿರ್ಣಯಕ್ಕೆ ವಿರೋಧಿಸಲು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಯ ಸಿದ್ಧತೆಯಲ್ಲಿ ಇದೆ. ಅನೇಕ ಸ್ಥಳಗಳಲ್ಲಿ ಗಡಿಯ ಎರಡು ಬದಿಯಲ್ಲಿ ಜನರ ಮನೆಗಳು ಇವೆ. ಮಣಿಪುರದ ಗಡಿಭಾಗದಲ್ಲಿ ವಾಸಿಸುವ ಜನರ ಪ್ರಕಾರ ಗಡಿ ಮುಚ್ಚುವುದು ಮಾನವಿಯತೆ ಸಂಕಷ್ಟ ನಿರ್ಮಾಣವಾಗುವುದು. ಶತಕಗಳಿಂದ ಅವರ ರಕ್ತ ಸಂಬಂಧವಿದೆ. ಪ್ರತಿಯೊಬ್ಬರ ಸುಖ ದುಃಖದಲ್ಲಿ ಸಹಭಾಗಿತ್ವ ಇದೆ. ಅನೇಕ ಸ್ಥಳಗಳ ಗಡಿಯಲ್ಲಿ ಎರಡು ಬದಿಯ ಜನರ ಮನೆಗಳು ಇವೆ. ಅಲ್ಲಿ ಯಾವುದೇ ನಿಖರ ವಿಭಜನೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ವ್ಯವಹಾರಿಕ ಅಡಚಣೆಗಳು ಕೂಡ ನಿರ್ಮಾಣವಾಗುವುದು ಎಂದು ಹೇಳಿದ್ದಾರೆ.
೧. ‘ಕೇಂದ್ರ ಸರಕಾರದ ನಿರ್ಣಯದಿಂದ ಸಮಾಜಘಾತಕ ಘಟಕಗಳ ಕಾರ್ಯ ಚಟುವಟಿಕೆ ನಿಲ್ಲುವುದು ಮತ್ತು ಗಡಿಗಳು ಸುರಕ್ಷಿತವಾಗುವುದು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಮೂಲ ಮ್ಯಾನ್ಮಾರ್ ಆಗಿತ್ತು. – ಹಿಂದೂ ಮೈತೆಯಿ ಸಂಘಟನೆ ‘ಕೋಕೋಮಿ’ಯ ವಕ್ತಾರರು ಖುರಾಯಿಝಾಮ ಅಥೋಬಾ ೨. ‘ಗಡಿಯ ಎರಡು ಬದಿಯಲ್ಲಿ ವಾಸಿಸುವ ಮಿಝೋ ಜೋ ಚಿನ್ ಜನಾಂಗದವರನ್ನು ಎರಡು ಪ್ರದೇಶಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ – ಮಿಝೋರಾಮದ ಮುಖ್ಯಮಂತ್ರಿ ಲಾಲ್ ದುಹೋಮ ೩. ‘ನಾಗಾ ಜನಾಂಗದ ಜನರು ಗಡಿಯ ಎರಡು ಬದಿಯಲ್ಲಿ ವಾಸಿಸುತ್ತಾರೆ. ಕೇಂದ್ರ ಸರಕಾರದ ನಿರ್ಣಯ ಜಾರಿಗೊಳಿಸುವ ಮೊದಲು ಸಾಮಾನ್ಯ ಕರಡು ತಯಾರಿಸಬೇಕು !’ – ನಾಗಾಲ್ಯಾಂಡ್ ಮುಖ್ಯಮಂತ್ರಿ ನೇಪಿಯು ರಿಯೋ |
ಈ ಪ್ರಕರಣದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ! – ನಾಗಾ ವಿದ್ಯಾರ್ಥಿ ಸಂಘಟನೆ
ಕೇಂದ್ರ ಸರಕಾರದ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸುವ ನಾಗ ವಿದ್ಯಾರ್ಥಿ ಸಂಘಟನೆ ‘ಎನ್.ಎಸ್.ಎಫ್.’, ಭಾರತ ಮತ್ತು ಮ್ಯಾನ್ಮಾರ್ ಗಡಿಯ ಎರಡೂ ಬದಿಯಲ್ಲಿ ವಾಸಿಸುವ ನಾಗಾ ಜನರಿಗೆ ಸ್ವತಂತ್ರ ನಾಗರಿಕರೆಂದು ಬಾಳುವ ಜನ್ಮಸಿದ್ಧ ಅಧಿಕಾರವಿದೆ. ಕೇಂದ್ರ ಸರಕಾರದ ಈ ನಿರ್ಣಯದಿಂದ ಗಂಭೀರ ಸಮಸ್ಯೆ ನಿರ್ಮಾಣವಾಗುವುದು, ವಿಶ್ವ ಸಂಸ್ಥೆ ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಹೇಳಿದೆ. (ಇಂತಹ ಅರ್ಥವಿಲ್ಲದಿರುವ ಬೇಡಿಕೆ ಸಲ್ಲಿಸುವ ವಿದ್ಯಾರ್ಥಿ ಸಂಘಟನೆ ಮೇಲೆ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)
ಸಂಪಾದಕೀಯ ನಿಲುವುರಾಷ್ಟ್ರ ಹಿತಕ್ಕೆ ಪ್ರಾಧಾನ್ಯತೆ ನೀಡುವುದರಿಂದ ರಾಷ್ಟ್ರ ಹಿತದ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸುವವರ ಕಪಟ ಉದ್ದೇಶ ಇದರಿಂದ ಸ್ಪಷ್ಟವಾಗುತ್ತದೆ. ಕೇಂದ್ರ ಸರಕಾರದಿಂದ ರಾಷ್ಟ್ರ ಹಿತಕ್ಕೆ ಮಹತ್ವ ನೀಡಿ ಈ ನಿರ್ಣಯ ಜಾರಿಗೊಳಿಸುವ ಅವಶ್ಯಕತೆ ಇದೆ. |