ದುಬೈನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿ ಭಾರತದಲ್ಲಿ ಮಾರುತ್ತಿದ್ದ 5 ಜನರ ಬಂಧನ ! 

  • ಕಂದಾಯ ಗುಪ್ತಚರ ನಿರ್ದೇಶನಾಲಯದಿಂದ ಕಾರ್ಯಾಚರಣೆ ! 

  • ಮುಂಬಯಿ ವರ್ಸೋವಾ ಮತ್ತು ಝವೇರಿ ಬಜಾರ್ ಮೇಲೆ ದಾಳಿ

  • 24 ಕೆಜಿ ಚಿನ್ನದೊಂದಿಗೆ 2 ಕೋಟಿ ನಗದು ವಶ 

ಮುಂಬಯಿ – ಕಂದಾಯ ಗುಪ್ತಚರ ನಿರ್ದೇಶನಾಲಯ (‘ಡಿಐಎನ್’ನ) ಮುಂಬಯಿಯ ವರ್ಸೋವಾ ಮತ್ತು ಝವೇರಿ ಬಜಾರ ಮೇಲೆ ದಾಳಿ ನಡೆಸಿ, ಕಳ್ಳಸಾಗಣೆ ಮಾಡಲು ದುಬೈಯಿಂದ ಭಾರತಕ್ಕೆ ತಂದಿದ್ದ 14 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, 5 ಜನರನ್ನು ಬಂಧಿಸಿದ್ದಾರೆ. ಮಹಮ್ಮದ ರಫೀಕ ರಝವಿ (ವಯಸ್ಸು 58), ಮಹೇಂದ್ರ ಜೈನ(ವಯಸ್ಸು 52) ಮತ್ತು ಸಮೀರ ಮರ್ಚೆಂಟ ಉರ್ಫ ಅಫಝಲ ಹಾರೂನ ಬಟಾಟಾವಾಲಾ(ವಯಸ್ಸು 56), ಉಮೇದ ಸಿಂಹ(ವಯಸ್ಸು 24) ಮತ್ತು ಮಹಿಪಾಲ ವ್ಯಾಸ(ವಯಸ್ಸು 42) ಆರೋಪಿಗಳ ಹೆಸರುಗಳಾಗಿವೆ. 14 ಕೆ.ಜಿ 497 ಗ್ರಾಮ ಚಿನ್ನ, 2 ಕೋಟಿ ರೂಪಾಯಿ ನಗದು ಮತ್ತು 4 ಸಾವಿರ 600 ಪೌಂಡ (4 ಲಕ್ಷ 85 ಸಾವಿರಕ್ಕಿಂತ ಅಧಿಕ ರೂಪಾಯಿ) ವಶಪಡಿಸಿಕೊಂಡಿದ್ದಾರೆ. ಬಂಧಿಸಿರುವ ಆರೋಪಿಗಳಲ್ಲಿ ಸಮೀರ ಮರ್ಚಂಟನಿಗೆ ಈ ಮೊದಲೂ ವಿದೇಶಿ ಚಲನ ಭಾರತಕ್ಕೆ ತಂದಿರುವ ಪ್ರಕರಣದಲ್ಲಿ ಒಮ್ಮೆ ಬಂಧಿಸಿದ್ದರು.

1. ಆರೋಪಿ ಸಮೀರ ಮರ್ಚಂಟನ ಮೊದಲಿನ ಹೆಸರು ಅಫಝಲ ಬಟಾಟಾವಾಲಾ ಆಗಿದೆ. ಅವನ ಪತ್ನಿಯೂ ಅವನ ಈ ಕೃತ್ಯದಲ್ಲಿ ಪಾಲುದಾರಳಾಗಿದ್ದಳು.

2. ಸಮೀರ ಮರ್ಚೆಂಟನು ಚಿನ್ನದ ಕಳ್ಳಸಾಗಣೆಯಲ್ಲಿ ಸಕ್ರಿಯನಾಗಿದ್ದನು. ಈ ಕಳ್ಳಸಾಗಾಣಿಕೆ ಬಟಾಟಾವಾಲಾನ ಮಾಧ್ಯಮದಿಂದ ನಡೆಯುತ್ತಿತ್ತು. ಅದರ ನಂತರ, ಭಾರತೀಯ ಮಾರುಕಟ್ಟೆಯಲ್ಲಿ ವಿತರಿಸಲು ಅವರು ಚಿನ್ನವನ್ನು ರಝ್ವವಿಗೆ ಕೊಡುತ್ತಿದ್ದರು. ಇದು ಮಾಝಗಾವನ ದಲಾಲ ಮಹೇಂದ್ರ ಜೈನ ಇವರ ಮೂಲಕ ಮಾರಾಟ ಮಾಡಲಾಗುತ್ತಿತ್ತು.

3. ವಶಪಡಿಸಿಕೊಂಡ ಚಿನ್ನವನ್ನು ದುಬೈನಿಂದ ಅಮ್ಜದ ಹೆಸರಿನ ವ್ಯಕ್ತಿ ಭಾರತಕ್ಕೆ ಕಳುಹಿಸುತ್ತಿದ್ದನು. ತದ ನಂತರ, ಸಮೀರ ಮರ್ಚೆಂಟ ಮತ್ತು ಅವನ ಪತ್ನಿ ಜ್ಯೋತಿ ಕಿಟ್ಟಿ ಈ ಚಿನ್ನವನ್ನು ಮಾರಾಟಕ್ಕೆ ಈ ಗುಂಪಿನ ಇತರ ಸದಸ್ಯರಿಗೆ ಕೊಡುತ್ತಿದ್ದರು.

4. ಮರ್ಚಂಟನನ್ನು ಈ ಮೊದಲು 1997 ರಲ್ಲಿ ನಿರ್ದೇಶನಾಲಯವು ಹಾಂಗ್ ಕಾಂಗ್ ನಿಂದ ವಿದೇಶಿ ಚಲನವನ್ನು ತಂದಿರುವ ಪ್ರಕರಣದಲ್ಲಿ ಬಂಧಿಸಿತ್ತು. ತದನಂತರ 2004 ರಲ್ಲಿ ಅವನನ್ನು ಅಹಮದಾಬಾದ ಮಾದಕ ಪದಾರ್ಥ ನಿಗ್ರಹ ದಳ ಬಂಧಿಸಿತ್ತು. ತದನಂತರ ಅವನು 2013 ರಲ್ಲಿ ಜೈಲಿನಿಂದ ಹೊರಗೆ ಬಂದನು. ಆಗ ಅವನು ತನ್ನ ಹೆಸರನ್ನು ಅಫ್ಜಲ ಬಟಾಟಾವಾಲಾನಿಂದ ಸಮೀರ ಮರ್ಚಂಟ ಎಂದು ಇಟ್ಟುಕೊಂಡಿದ್ದನು.

 

ಸಂಪಾದಕೀಯ ನಿಲುವು

ಚಿನ್ನದ ಕಳ್ಳಸಾಗಣೆ ಮಾಡುವವರಿಗೆ ಅತಿ ಕಠೋರ ಶಿಕ್ಷೆಯನ್ನು ನೀಡದೇ, ಇಂತಹವುಗಳನ್ನು ಹದ್ದುಬಸ್ತಿನಲ್ಲಿಡಲು ಆಗುವುದಿಲ್ಲ.