ಮುಂಬಯಿ – ಮಾರ್ಚ್ 16 ರಂದು, ಭಾರತೀಯ ನೌಕಾಪಡೆಯು ಸೊಮಾಲಿಯಾದ ಕಡಲ್ಗಳ್ಳರಿಂದ ವಾಣಿಜ್ಯ ಹಡಗನ್ನು ರಕ್ಷಿಸಿತ್ತು. ಅಲ್ಲದೆ ಸೊಮಾಲಿಯಾದ 35 ಕಡಲ್ಗಳ್ಳರನ್ನು ವಶಕ್ಕೆ ಪಡೆದು, ಈಗ ಮುಂಬಯಿ ಪೊಲೀಸರಿಗೆ ಒಪ್ಪಿಸಿದೆ. ಕಡಲ್ಗಳ್ಳತನ ವಿರೋಧಿ ಅಭಿಯಾನದ ಭಾಗವಾಗಿ, ಭಾರತೀಯ ನೌಕಾಪಡೆಯು ಭಾರತೀಯ ಕರಾವಳಿಯಿಂದ 2,600 ಕಿಲೋಮೀಟರ್ ದೂರದಲ್ಲಿರುವ ಕಡಲ್ಗಳ್ಳರ ವಿರುದ್ಧ ಕ್ರಮ ಕೈಗೊಂಡಿತು ಮತ್ತು ಅವರು ಶರಣಾಗುವಂತೆ ಮಾಡಿತು. ಈ ಕಾರ್ಯಚರಣೆಯು 40 ಗಂಟೆಗಳ ಕಾಲ ನಡೆಯಿತು. ಅದರಲ್ಲಿ ನೌಕಾಪಡೆಯ ‘ಐ.ಎನ್.ಎಸ್. ಕೋಲ್ಕತಾ’ ಮತ್ತು ‘ಐ.ಎನ್.ಎಸ್. ಸುಭದ್ರಾ ಯುದ್ಧನೌಕೆ ಹಾಗೂ ಮರೈನ್ ಕಮಾಂಡೋಗಳು ಭಾಗವಹಿಸಿದ್ದವು. ಈ ವೇಳೆ ನೌಕೆಯಲ್ಲಿ ಇದ್ದ ಓರ್ವನನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
#WATCH महाराष्ट्र: सीमा शुल्क और अप्रवासन की औपचारिकताओं के बाद 35 सोमालियाई समुद्री लुटेरों को मुंबई पुलिस को सौंप दिया गया। 16 मार्च को एक एंटी पाइरेसी ऑपरेशन के बाद भारतीय नौसेना के INS कोलकाता ने समुद्री लुटेरों को पकड़ा था।
वीडियो मुंबई के नौसेना डॉकयार्ड से हैं। pic.twitter.com/lRZUy5VKZ0
— ANI_HindiNews (@AHindinews) March 23, 2024