‘ನನಗೆ ಹಿಂದೂ ಆಗಿದಕ್ಕೆ ನಾಚಿಕೆಯಾಗುತ್ತದೆ !’(ಅಂತೆ) – ನಟಿ ಸ್ವರಾ ಭಾಸ್ಕರ್

ಹರಿಯಾಣದ ಗುರುಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಮರಿಂದ ಶುಕ್ರವಾರ ಕಾನೂನುಬಾಹಿರವಾಗಿ ನಮಾಜ್ ಪಠಣ ಮಾಡುತ್ತಿರುವಾಗ, ಗುಂಪೊಂದರಿಂದ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲಾಯಿತು.

ಹಿಂದೂ ವಿರೋಧಿ ನಟರ ಗುಂಪೊಂದು ಯಾವಾಗಲೂ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುತ್ತದೆ ! – ಭಾಜಪದ ಸಂಸದ ಅನಂತ ಕುಮಾರ್ ಹೆಗ್ಡೆ

ಹಿಂದೂ ವಿರೋಧಿ ಜಾಹೀರಾತಿನಿಂದಾಗಿ ಹೆಗ್ಡೆ ಅವರಿಂದ ಸಿಯಟ್ ಟಯರ್ ಸಂಸ್ಥೆಗೆ ಪತ್ರ

ಹಿಂದೂಗಳ ಧಾರ್ಮಿಕ ಸಂಸ್ಥೆಯಲ್ಲಿ ಕೇವಲ ಹಿಂದೂಗಳಿಗಷ್ಟೇ ಕೆಲಸ ನೀಡುವ ನಿಯಮವಿರುವಾಗ ನೌಕರಿಗಾಗಿ ಮುಸಲ್ಮಾನ ಯುವಕನಿಂದ ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಎಷ್ಟು ಹಿಂದೂಗಳು ಮುಸಲ್ಮಾನರ ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ ಹಾಗೂ ಅವರಿಗೆ ಕೆಲಸ ನೀಡಲಾಗುತ್ತದೆ? ಕೆಲಸ ನೀಡದೆ ಇದ್ದರೆ ಎಷ್ಟು ಹಿಂದೂಗಳು ಈ ರೀತಿ ನ್ಯಾಯಾಲಯದ ಮೊರೆ ಹೋಗುತ್ತಾರೆ ?

ಚೀನಾದಲ್ಲಿ ಕೊರೋನಾದ ಕೇವಲ 13 ರೋಗಿಗಳು ಪತ್ತೆಯಾಗಿದ್ದಕ್ಕೆ ಶಾಲೆಗಳನ್ನು ಮುಚ್ಚಲಾಗಿದೆ, ಹಾಗೂ ವಿಮಾನ ಹಾರಾಟ ಸ್ಥಗಿತ !

ಕೊರೋನಾದ ಕಡಿಮೆ ರೋಗಿಗಳು ಪತ್ತೆಯಾದರೂ ಕೂಡಲೇ ಕಠಿಣ ಕ್ರಮ ಕೈಗೊಳ್ಳುವ ಚೀನಾದಿಂದ ಭಾರತವು ಯಾವಾಗ ಕಲಿಯುವುದು ?

ಮುಸಲ್ಮಾನರ ನಿಕಾಹ ಹಿಂದೂಗಳ ವಿವಾಹದಂತೆ ಸಂಸ್ಕಾರವಲ್ಲ ಕೇವಲ ಒಂದು ಒಪ್ಪಂದ ! – ಕರ್ನಾಟಕ ಉಚ್ಚ ನ್ಯಾಯಾಲಯ

ಹಿಂದೂ ಧರ್ಮಶಾಸ್ತ್ರವು ಎಷ್ಟು ಮುಂದುವರೆದಿದೆ ?, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಭಾರತದಲ್ಲಿ 100 ಕೋಟಿ ನಾಗರಿಕರಿಗೆ ಲಸಿಕೀಕರಣ !

ಈ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ ಇತಿಹಾಸವನ್ನು ರಚಿಸಿದೆ ಮತ್ತು ಇದು ಭಾರತೀಯ ವಿಜ್ಞಾನ, ಉದ್ಯೋಗ ಮತ್ತು ಭಾರತೀಯರ ಸಾಮೂಹಿಕ ಭಾವನೆಯ ವಿಜಯವಾಗಿದೆ’, ಎಂದು ಹೇಳಿದ್ದಾರೆ.

50,000 ಮೆಟ್ರಿಕ್ ಟನ್ ಗೋಧಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವ ಪ್ರಯತ್ನದಲ್ಲಿರುವ ಭಾರತ !

ಮುಂದುವರಿದ ಭಾರತದ ಗಾಂಧಿಗಿರಿ ! ಮಾನವೀಯ ದೃಷ್ಟಿಯಿಂದ ಕಳುಹಿಸಲಾಗುವ ನೆರವು ಬಡ ಅಸಹಾಯಕ ಅಫ್ಘಾನಿ ಜನರ ತನಕ ತಲುಪುತ್ತದೆಯೇ ಅಥವಾ ತಾಲಿಬಾನಿಗಳೇ ತಿಂದು ತೇಗುವರೊ ಈ ಬಗ್ಗೆ ಯಾರು ಭರವಸೆ ನೀಡುವರು ?

ರಾಮಲೀಲಾದಲ್ಲಿ ಪುತ್ರವಿಯೋಗದ ಪ್ರಸಂಗದಲ್ಲಿ, ನಟಿಸುತ್ತಿದ್ದ ರಾಜ ದಶರಥನ ಪಾತ್ರಧಾರಿಯಿಂದ ಪ್ರತ್ಯಕ್ಷದಲ್ಲಿ ತನ್ನ ಪ್ರಾಣ ತ್ಯಾಗ !

ಪ್ರಸಂಗ ಮುಗಿದ ನಂತರ, ಅವರ ಸಹೋದ್ಯೋಗಿಗಳು ರಾಜೇಂದ್ರ ಸಿಂಗ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ಗಮನಕ್ಕೆ ಬಂದಿತು.

ದೇಶದಲ್ಲಿ ಮಾದಕ ದ್ರವ್ಯಗಳ ವ್ಯಸನದಿಂದ ಕಳೆದ 3 ವರ್ಷಗಳಲ್ಲಿ, ಸರಾಸರಿ 112 ಜನರ ಸಾವು

ಇದು ಸಮಾಜಕ್ಕೆ ಸಾಧನೆಯನ್ನು ಕಲಿಸದೇ ಇದ್ದುದರ ಹಾಗೂ ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆಯ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇದ್ದುದರ ಪರಿಣಾಮವಾಗಿದೆ. ಇದಕ್ಕೆಲ್ಲ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಹೊಣೆಗಾರರಾಗಿದ್ದಾರೆ ! ಹಿಂದೂ ರಾಷ್ಟ್ರದಲ್ಲಿ ಈ ರೀತಿಯ ಸ್ಥಿತಿಯಿರುವುದಿಲ್ಲ !

ನವರಾತ್ರೋತ್ಸವದ ನಿಮಿತ್ತ ತೆಲಂಗಣಾ ಹಾಗೂ ಆಂಧ್ರಪ್ರದೇಶದಲ್ಲಿನ ಕನ್ಯಕಾ ಪರಮೇಶ್ವರೀ ದೇವಿಯ ದೇವಸ್ಥಾನದಲ್ಲಿ ಕೋಟಿಗಟ್ಟಲೆ ರೂಪಾಯಿ ನೋಟುಗಳಿಂದ ಅಲಂಕಾರ !

ನವರಾತ್ರೋತ್ಸವದ ನಿಮಿತ್ತ ಕನ್ಯಕಾ ಪರಮೇಶ್ವರಿ ದೇವಿಯ ದೇವಾಲಯದಲ್ಲಿ ಕೋಟಿಗಟ್ಟಲೆ ರೂಪಾಯಿ ನೋಟುಗಳ ಅಲಂಕಾರ ಮಾಡಲಾಯಿತು. ಅದಕ್ಕಾಗಿ ಒಟ್ಟು ೪ ಕೋಟಿ ೪೪ ಲಕ್ಷ ೪೪ ಸಾವಿರ ೪೪೪ ರೂಪಾಯಿ ನಗದಿನ ಅಸಲೀ ನೋಟುಗಳನ್ನು ಬಳಸಲಾಗಿದೆ.