ಆಂಗ್ಲ‌ ಸಹಿತ ಅನೇಕ ವಿದೇಶಿ ಭಾಷೆಗಳಲ್ಲಿ ಸಂಭಾಷಣೆ ನಡೆಸಲು ಇಟಲಿಯಿಂದ ನಿರ್ಬಂಧ ಹೇರುವ ಸಾಧ್ಯತೆ

೮೯ ಲಕ್ಷ ರೂಪಾಯಿಗಳ ದಂಡ ತೆತ್ತಬೇಕು !

ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ

ರೋಮ್ (ಇಟಲಿ) – ಇಟಲಿ ಸರಕಾರವು ಶೀಘ್ರದಲ್ಲೇ ದೇಶದಲ್ಲಿ ಆಂಗ್ಲ ಭಾಷೆಯ ಬಳಕೆಗೆ ನಿರ್ಬಂಧ ಹೇರಲಿದೆ. ಯಾರಾದರೂ ಆಂಗ್ಲ ಅಥವಾ ಇತರ ವಿದೇಶಿ ಭಾಷೆಗಳಲ್ಲಿ ಸಂಭಾಷಣೆ ಮಾಡಿದರೆ ಅಥವಾ ಅವುಗಳನ್ನು ಬಳಸಿದರೆ ಅವರು ದಂಡ ತೆತ್ತಬೇಕಾಗಬಹುದು. ಈ ಕುರಿತು ಸಿ.ಎನ್.ಎನ್. ವಾರ್ತಾವಾಹಿನಿಯು ವಾರ್ತೆಯನ್ನು ಪ್ರಸಾರ ಮಾಡಿದೆ.

೧. ಇಟಲಿಯ ಪ್ರಧಾನಿ ಜಿಯೊರ್ಜಿಯ ಮೆಲೊನಿಯವರ `ಬ್ರದರ್ಸ್ ಆಫ್ ಇಟಲಿ ಪಾರ್ಟಿ’ಯು ಸಂಸತ್ತಿನಲ್ಲಿ ಹೊಸ ಮಸೂದೆಯನ್ನು ಮಂಡಿಸಿದೆ. ಇದಕ್ಕನುಸಾರ ಆಂಗ್ಲ ಹಾಗೂ ಇತರ ವಿದೇಶಿ ಭಾಷೆಗಳಲ್ಲಿನ ಸಂಭಾಷಣೆಯ ಮೇಲೆ ನಿರ್ಬಂಧವಿರಲಿದೆ. ಯಾರಾದರೂ ಈ ಭಾಷೆಗಳಲ್ಲಿ ಸಂಭಾಷಣೆ ಮಾಡುವಾಗ ಸಿಕ್ಕಿಬಿದ್ದರೆ ಅವರಿಂದ ೧ ಲಕ್ಷ ’ಯುರೋ’ (ಯೂರೋಪ್ ನ ನಾಣ್ಯ ಚಲಾವಣೆ)ನಷ್ಟು ದಂಡ (ಸುಮಾರು ೮೯ ಲಕ್ಷ ರೂಪಾಯಿ) ವಸೂಲಿ ಮಾಡಲಾಗುವುದು.

೨. ಇಟಲಿಯ ಮುಖಂಡ ಫಾಬಿಯೊ ರಾಮಪೀಲಿಯವರು ಮಾತನಾಡುತ್ತಾ, ಈ ಮಸೂದೆಯಲ್ಲಿ ವಿದೇಶಿ ಭಾಷೆಗಳ ಬಳಕೆಯಿಂದ ಇಟಲಿಯ ಭಾಷೆಯನ್ನು ಕೀಳಾಗಿ ನೋಡಲಾಗುತ್ತಿದೆ. ಬ್ರಿಟನ್ ಯುರೋಪಿಯನ್ ಒಕ್ಕೂಟದ ಸದಸ್ಯತ್ವವನ್ನು ಬಿಟ್ಟಿರುವ ಸಮಯದಲ್ಲಿ ಈ ಮಸೂದೆಯನ್ನು ಮಂಡಿಸಲಾಗಿದೆ ಎಂದು ಹೇಳಿದರು.