ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳಿಗೆ ೨೦೩೦ ವರೆಗೆ ಲಸಿಕೆ ಲಭ್ಯವಾಗುವುದು !

ವಾಷಿಂಗ್ಟನ್ (ಅಮೇರಿಕ) – ಕ್ಯಾನ್ಸರ್ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ೨೦೩೦ ವರಿಗೆ ಲಸಿಕೆ ಲಭ್ಯವಾಗಲಿದೆ, ಎಂದು ಅಮೇರಿಕಾದ ವಿಜ್ಞಾನಿಗಳು ದಾವೆ ಮಾಡಿದ್ದಾರೆ.

‘ಮಾಡರ್ನ. ಈ ಔಷಧಿ ಉತ್ಪಾದನೆ ಮಾಡುವ ಕಂಪನಿಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಪಾಲ್ ಬರ್ಟನ್ ಇವರು, ನಮ್ಮ ಕಂಪನಿ ಬರುವ ೫ ವರ್ಷಗಳಲ್ಲಿ ಎಲ್ಲಾ ರೀತಿಯ ರೋಗಗಳಿಗೆ ಔಷಧ ನೀಡಲು ಸಾಧ್ಯವಾಗುವುದು. ನಮ್ಮ ಬಳಿ ಇರುವ ಲಸಿಕೆ ಅತ್ಯಂತ ಪ್ರಭಾವಿ ಮತ್ತು ಲಕ್ಷಾಂತರ ಜೀವಗಳು ಉಳಿಸುವುದಾಗಿದೆ. ಜಗತ್ತಿನಾದ್ಯಂತ ಇರುವ ಜನರಿಗೆ ಬೇರೆ ಬೇರೆ ರೀತಿಯ ಟ್ಯೂಮರ್ ಕ್ಯಾನ್ಸರ್ ಗೆ ಲಸಿಕೆ ನೀಡಲು ನಮಗೆ ಸಾಧ್ಯವಾಗುವುದು. ಒಂದೇ ಇಂಜೆಕ್ಷನ್ ನಿಂದ ಅನೇಕ ರೀತಿಯ ಸಂಕ್ರಮಣ ದೂರವಾಗಬಹುದು. ಇದರ ಜೊತೆಗೆ ಅಸುರಕ್ಷಿತ ಜನರು ಕೂಡ ಕೊರೋನ, ಫ್ಲೂ ಮತ್ತು ರೆಸ್ಪಿರೇಟರಿ ಸಿನ್ಸಿಶಿಯಲ್ ವೈರಸ್ ‘ ನಿಂದ ಕಾಪಾಡಬಹುದು ಎಂದು ಹೇಳಿದ್ದಾರೆ.