ಟೋಕಿಯೊ (ಜಪಾನ) ಟೋಕಿಯೋದ ಒಂದು ಉಪಹಾರಗೃಹದಲ್ಲಿ ಆಹಾರ ಸೇವಿಸುವಾಗ ಮೊಬೈಲ್ ವೀಕ್ಷಿಸುವುದರ ಮೇಲೆ ನಿರ್ಬಂಧ !

ಟೋಕಿಯೋ(ಜಪಾನ) – ಇಲ್ಲಿಯ `ಡೆಬೂ ಚೈನ’ ಹೆಸರಿನ ಒಂದು ಉಪಹಾರಗೃಹದಲ್ಲಿ ಆಹಾರ ಸೇವಿಸುವಾಗ ಗ್ರಾಹಕರಿಗೆ ಮೊಬೈಲ್ ವೀಕ್ಷಿಸುವುದನ್ನು ನಿರ್ಬಂಧಿಸಲಾಗಿದೆ. ಈ ನಿಯಮಕ್ಕಾಗಿ ಉಪಹಾರಗೃಹದ ಮಾಲೀಕನ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಉಪಹಾರಗೃಹದಲ್ಲಿ ಗ್ರಾಹಕರಿಗೆ ಕುಳಿತುಕೊಳ್ಳಲು ಕೇವಲ 30 ಸ್ಥಳಗಳಿವೆ ಮತ್ತು ಅವರು ಉಪಹಾರಗೃಹದಲ್ಲಿ ಎಲ್ಲಿಯೂ ಈ ನಿಯಮವನ್ನು ಬರೆದಿಲ್ಲ. ಆದರೆ ಅಲ್ಲಿಯ ನೌಕರರು ಸ್ವತಃ ಗ್ರಾಹಕರ ಮೇಜಿನ ಬಳಿಗೆ ಹೋಗಿ ಈ ನಿಯಮದ ಕುರಿತು ಹೇಳುತ್ತಾರೆ.

ಇಲ್ಲಿ `ರಾಮೆನ್ ನೂಡಲ್ಸ’ ಹೆಸರಿನ ಪದಾರ್ಥ ಹೆಸರುವಾಸಿಯಾಗಿದೆ. ಈ ಪದಾರ್ಥವನ್ನು ಸೇವಿಸಲು ಇಲ್ಲಿ ಬಹಳಷ್ಟು ಗ್ರಾಹಕರು ಬರುತ್ತಾರೆ ಮತ್ತು ಬಹಳ ಸಮಯದ ವರೆಗೆ ಕಾಯುತ್ತಾರೆ. ಕೆಲವು ಜನರಂತೂ ರಾಮೆನ್ ತಣ್ಣಗಾಗುವವರೆಗೆ ಬಹಳಷ್ಟು ಸಮಯ ಮೊಬೈಲ್ ನಲ್ಲಿ ಮಾತನಾಡುತ್ತಿರುತ್ತಾರೆ ಅಥವಾ ವಿಡಿಯೋ ನೋಡುತ್ತಿರುತ್ತಾರೆ. ಇದರಿಂದ ಅವರಿಗೆ ಬಹಳ ಸಮಯ ತಗಲುತ್ತದೆ ಮತ್ತು ಇತರೆ ಗ್ರಾಹಕರಿಗೆ ಹೊರಗಡೆ ಕಾಯುತ್ತ ನಿಲ್ಲಬೇಕಾಗುತ್ತದೆ. ಇದರಿಂದ ಇಲ್ಲಿ ಮೊಬೈಲ್ ಅನ್ನು ನಿರ್ಬಂಧಿಸಲಾಗಿದೆ.