ಭಕ್ತರು ಇದೇ ಮೊದಲ ಬಾರಿಗೆ ವಾಹನದ ಮೂಲಕ ಆದಿಕೈಲಾಸ ಪರ್ವತ ತನಕ ಹೋಗಬಹುದು !

‘ಸೀಮಾ ಮಾರ್ಗ ಸಂಘಟನೆ’ಯು ೨೦ ಸಾವಿರ ಅಡಿ ಎತ್ತರದಲ್ಲಿ ೧೩೦ ಕಿಮೀ ಉದ್ದದ ರಸ್ತೆಯ ನಿರ್ಮಾಣ

ಡೆಹ್ರಾಡೂನ್ (ಉತ್ತರಾಖಂಡ) – ಉತ್ತಾರಾಖಂಡ ರಾಜ್ಯದ ಪಿಥೌರಾಗಡ ಜಿಲ್ಲೆಯಿಂದ ಮೇ 4 ರಂದು ಆದಿಕೈಲಾಸ ಮತ್ತು ಓಂ ಪರ್ವತ ಯಾತ್ರೆಯು ಪ್ರಾರಂಭವಾಗುತ್ತಿದೆ. ಮೊದಲ ಬಾರಿಗೆ ಭಕ್ತರು ತವಾಘಾಟ್‌ನಿಂದ ಆದಿಕೈಲಾಸ ಪರ್ವತ ಮತ್ತು ಓಂ ಪರ್ವತಕ್ಕೆ ವಾಹನದಲ್ಲಿ ಹೋಗಬಹುದು. ಇದಕ್ಕಾಗಿ ‘ಸೀಮಾ ಮಾರ್ಗ ಸಂಘಟನೆ’ಯು ಸುಮಾರು ೨೦,೦೦೦ ಅಡಿ ಎತ್ತರದಲ್ಲಿ ೧೩೦ ಕಿಮೀ ಉದ್ದದ ರಸ್ತೆಯನ್ನು ನಿರ್ಮಿಸಿದೆ. ಮೊದಲು ಭಕ್ತರು ತವಾಘಾಟ್‌ನಿಂದ ನಡೆದುಕೊಂಡು ಹೋಗಬೇಕಿತ್ತು.

ಆದಿಕೈಲಾಸ ಪರ್ವತವನ್ನು ಭಾರತದ ಕೈಲಾಸ ಮಾನಸ ಸರೋವರವೆಂದೂ ಪರಿಗಣಿಸಲಾಗಿದೆ. ಚೀನಾದ ಪುರಾಣಗಳಲ್ಲಿ ಟಿಬೆಟ್‌ನಲ್ಲಿರುವ ಕೈಲಾಸ್ ಪರ್ವತದ ಪ್ರತಿಬಿಂಬವು ಮಾನಸರೋವರದಲ್ಲಿ ಕಂಡುಬರುವಂತೆ, ಪಾರ್ವತಿ ಕುಂಡದಲ್ಲಿ ಆದಿಕೈಲಾಸ್ ಪರ್ವತದ ಪ್ರತಿಬಿಂಬ ಕಾಣಿಸುತ್ತದೆ.