ನವದೆಹಲಿ – ಎಪ್ರಿಲ್ 6 ರಂದು ಇರುವ ಹನುಮಾನ ಜಯಂತಿಯ ನಿಮಿತ್ತದಿಂದ ಕೇಂದ್ರ ಸರಕಾರದ ಗೃಹ ಸಚಿವಾಲಯವು ಎಲ್ಲ ರಾಜ್ಯಗಳಿಗೆ ಸೂಚನೆ ಕಳುಹಿಸಿದೆ. ರಾಜ್ಯ ಸರಕಾರಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು, ಹಬ್ಬವನ್ನು ಶಾಂತರೀತಿಯಿಂದ ಆಚರಿಸಲು ಸಾಧ್ಯವಾಗಬೇಕು ಮತ್ತು ಸಮಾಜದಲ್ಲಿ ಧಾರ್ಮಿಕ ಸದ್ಭಾವನೆಯನ್ನು ಕೆಡಿಸುವವರ ಮೇಲೆ ಗಮನವಿಡಬೇಕು ಎಂದು ಈ ನಿರ್ದೇಶನದಲ್ಲಿ ಹೇಳಲಾಗಿದೆ. ಶ್ರೀರಾಮ ನವಮಿಯ ಸಮಯದಲ್ಲಿ ಬಿಹಾರ, ಬಂಗಾಳ ಮತ್ತು ಇತರೆ 7 ರಾಜ್ಯಗಳಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ನಿರ್ದೇಶನವನ್ನು ನೀಡಲಾಗಿದೆ.
The home minister’s office asked states to “monitor any factor that could disturb peace and harmony in society” during Hanuman Jayanti.https://t.co/Mx9TIkt8t8#RamNavmi
— Scroll.in (@scroll_in) April 5, 2023