ಮೇರಿಲ್ಯಾಂಡ (ಅಮೇರಿಕಾ) ಇಲ್ಲಿನ ಕೆಥೊಲಿಕ ಚರ್ಚನಲ್ಲಿ ಕಳೆದ 80 ವರ್ಷಗಳಲ್ಲಿ 150 ಪಾದ್ರಿಗಳಿಂದ 600 ಮಕ್ಕಳ ಲೈಂಗಿಕ ಶೋಷಣೆ

ಇಷ್ಟು ವರ್ಷಗಳ ವರೆಗೆ ಘಟನೆಯನ್ನು ಮುಚ್ಚಿಟ್ಟ ಚರ್ಚ

ಮೇರಿಲ್ಯಾಂಡ(ಅಮೇರಿಕಾ) – ಅಮೇರಿಕೆಯ ಮೇರಿಲ್ಯಾಂಡ ರಾಜ್ಯದಲ್ಲಿ 1940 ರಿಂದ ಕ್ಯಾಥೊಲಿಕ್ ಚರ್ಚ್ ನಲ್ಲಿ 600 ಕ್ಕಿಂತ ಅಧಿಕ ಮಕ್ಕಳ ಲೈಂಗಿಕ ಶೋಷಣೆ ನಡೆಸಲಾಗಿದೆ. ಶೋಷಣೆ ಮಾಡುವವರಲ್ಲಿ ಸುಮಾರು 150 ಪಾದ್ರಿಗಳಿದ್ದಾರೆ ಎನ್ನುವ ಮಾಹಿತಿಯನ್ನು ಈ ಸಂದರ್ಭದಲ್ಲಿ ತಯಾರಿಸಲಾಗಿರುವ 463 ಪುಟಗಳ ವರದಿಯಲ್ಲಿ ತಿಳಿಸಲಾಗಿದೆ. 4 ವರ್ಷದ ಸಂಶೋಧನೆಯ ಬಳಿಕ ಈ ವರದಿ ತಯಾರಿಸಲಾಗಿದೆ. ಸುಮಾರು 80 ವರ್ಷಗಳ ಬಳಿಕ ಈ ವಿಷಯ ಬಹಿರಂಗವಾಗಿದೆ. ಇಷ್ಟು ವರ್ಷಗಳ ವರೆಗೆ ಈ ಘಟನೆಯನ್ನು ಚರ್ಚ್ ಮುಚ್ಚಿಟ್ಟಿತ್ತು.

1. ಈ ವರದಿಯಲ್ಲಿ ಆರೋಪಿ ಪಾದ್ರಿಗಳ ಗುರುತನ್ನು ಬಹಿರಂಗ ಪಡಿಸಲಾಗಿದೆ. 2019 ರಲ್ಲಿ ಆಗಿನ ಅಟರ್ನಿ ಜನರಲ್ ಬ್ರಾಯನ್ ಫ್ರಾಶ್ ಇವರು ಈ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದ್ದರು. 100 ಪೀಡಿತರ ಸಾಕ್ಷಿಯ ಬಳಿಕ ಮತ್ತು 1 ಲಕ್ಷ ಪುಟಗಳ ಕಾಗದಪತ್ರಗಳನ್ನು ಅಧ್ಯಯನ ನಡೆಸಿದ ಬಳಿಕ ಈ ವರದಿಯನ್ನು ಅವರು ಸಿದ್ಧಪಡಿಸಿದ್ದಾರೆ. ನ್ಯಾಯಾಲಯದ ಅನುಮತಿ ದೊರೆತ ಬಳಿಕ ಈ ವರದಿಯನ್ನು ಸಾರ್ವಜನಿಕಗೊಳಿಸಲಾಯಿತು.

2. ಯಾವ ಮಕ್ಕಳ ಶೋಷಣೆ ಮಾಡಲಾಗಿದೆಯೋ, ಅವರು ಬಡಕುಟುಂಬದವರಾಗಿದ್ದರು. ಈ ವಿಷಯದಲ್ಲಿ ಎಲ್ಲಿಯೂ ಬಾಯಿಬಿಡಬಾರದೆಂದು ಅವರಿಗೆ ಬೆದರಿಕೆ ಹಾಕಲಾಗಿದೆ.

3.ವರದಿ ಪ್ರಕಟವಾದ ಬಳಿಕ ಬಾಲ್ಟಿಮೋರ್ ಆರ್ಚಬಿಶಪ್ (ಕ್ರಿಶ್ಚಿಯನ್ ಧರ್ಮಗುರುಗಳ ಒಂದು ಪದವಿ) ವಿಲಿಯಮ್ ಲೋರಿಯವರು ಪೀಡಿತ ಮಕ್ಕಳ ಕ್ಷಮೆಯನ್ನು ಕೋರಿದ್ದಾರೆ. `ಕೆಥೋಲಿಕ್ ಚರ್ಚನ ಇತಿಹಾಸದಲ್ಲಿ ಇಲ್ಲಿಯ ವರೆಗಿನ ಎಲ್ಲಕ್ಕಿಂತ ಅತ್ಯಧಿಕ ದುಃಖದ ಘಟನೆಯಾಗಿದೆ. ಅದನ್ನು ನಿರ್ಲಕ್ಷಿಸಿ ಮತ್ತು ಮರೆತು ನಡೆಯುವುದಿಲ್ಲ. ಚರ್ಚಿನ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಂದ ಇಂತಹ ಕೃತ್ಯ ನಡೆಸುವವರಿಗೆ ಶಿಕ್ಷಿಸಲಾಗುವುದು’, ಎಂದು ಲೋರಿಯವರು ಹೇಳಿದರು (ಕೇವಲ ಕ್ಷಮೆ ಕೋರಿ ಏನು ಉಪಯೋಗ? ಜವಾಬ್ದಾರ ವಾಸನಾಂಧ ಪಾದ್ರಿಗಳಿಗೆ ಶಿಕ್ಷೆಯಾಗುವುದು ಆವಶ್ಯಕವಿದೆ ! – ಸಂಪಾದಕರು)

4. ಈ ಹಿಂದೆ ಅಮೇರಿಕೆಯ ಇಲಿನೋಯಿಸ್ ಪ್ರದೇಶದಲ್ಲಿ ಸುಮಾರು 700 ಪಾದ್ರಿಗಳ ಮೇಲೆ ಚಿಕ್ಕ ಮಕ್ಕಳ ಲೈಂಗಿಕ ಶೋಷಣೆಯ ಆರೋಪವಿತ್ತು. ಇಲಿನೋಯಿಸ್ ಆಟರ್ನಿ ಜನರಲ್ ಇವರು ತಮ್ಮ ವರದಿಯಲ್ಲಿ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಘಟನೆಗಳಲ್ಲಿ ಒಬ್ಬನೇ ಒಬ್ಬ ವಾಸನಾಂಧ ಪಾದ್ರಿಗೆ ಶಿಕ್ಷೆಯಾಗಿಲ್ಲ ಎನ್ನುವುದನ್ನು ಗಮನಿಸಬೇಕು. ಚರ್ಚಗಳ ಈ ಕಾಯಿದೆಯಿಂದ ವಾಸನಾಂಧ ಪಾದ್ರಿಗಳಿಗೆ ಶಿಕ್ಷೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿರುವುದರಿಂದಲೇ ಈ ಕಾನೂನಿನಿಂದ ಅವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದುದರಿಂದ ಈ ಕಾನೂನನ್ನು ಬದಲಾಯಿಸುವ ಆವಶ್ಯಕತೆಯಿದೆ.

ಭಾರತದಲ್ಲಿ ಇಂತಹ ಘಟನೆಯ ವಿಷಯದಲ್ಲಿ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರರು, ಮಹಿಳಾ ಸಂಘಟನೆಗಳು, ಮಾನವಾಧಿಕಾರವಾದಿಗಳು ಚರ್ಚಿಸುವುದಿಲ್ಲ ಎನ್ನುವುದನ್ನು ಗಮನಿಸಬೇಕು