ಹಿಂದೂ ವಿರೋಧಿ ಪ್ರಸಿದ್ಧಿ ಮಾಧ್ಯಮಗಳ ಪಿತೂರಿಯ ವಿರುದ್ಧ ಧರ್ಮಾಭಿಮಾನಿಗಳಿಂದ #Hinduphobic_Media ಟ್ವಿಟರ್ ಟ್ರೆಂಡ್ !

ಪ್ರಸಿದ್ಧಿ ಮಾಧ್ಯಮಗಳು ಮತ್ತು ಫೇಸ್‍ಬುಕ್ ಇವೆರಡೂ ಜಂಟಿಯಾಗಿ ಒಂದು ಪಿತೂರಿಯ ಮೂಲಕ ಹಿಂದೂಗಳನ್ನು ಮಟ್ಟಹಾಕಿ ಅವರ ಧ್ವನಿಯನ್ನು ಅದಮಲು ಪ್ರಯತ್ನಿಸುತ್ತಿವೆ. ಈ ಪಿತೂರಿಯ ವಿರುದ್ಧ ಹಿಂದೂ ಧರ್ಮಾಭಿಮಾನಿಗಳಿಂದ ಜೂನ್ ೨೭ ರಂದು #Hinduphobic_Media ಈ ಹೆಸರಿನ ಹ್ಯಾಷ್‍ಟ್ಯಾಗ್ ಟ್ರೆಂಡ್ ಮಾಡಲಾಗಿತ್ತು. ಅದು ರಾಷ್ಟ್ರೀಯ ಟ್ರೆಂಡ್‍ನಲ್ಲಿ ೫ ನೇ ಸ್ಥಾನದಲ್ಲಿತ್ತು. ಇದರಲ್ಲಿ ೩೬ ಸಾವಿರಕ್ಕಿಂತಲೂ ಹೆಚ್ಚು ಟ್ವೀಟ್ಸ್‍ಗಳನ್ನು ಮಾಡಲಾಯಿತು.

ಟ್ವಿಟರ್‌ಗೂ ವಾಕ್ ಸ್ವಾತಂತ್ರ್ಯಕ್ಕೂ ಯಾವುದೇ ಸಂಬಂಧವಿಲ್ಲ ! – ರವಿಶಂಕರ್ ಪ್ರಸಾದ್

ಮನಬಂದಂತೆ ವ್ಯವಹಾರದ ಮಾಡುವ ಟ್ವಿಟರ್‌ನ ಬಗ್ಗೆ ನಾನು ಟೀಕೆ ಮಾಡಿದ್ದರಿಂದ ಈ ಘಟನೆ ನಡೆದಿರುವುದು ಸ್ಪಷ್ಟವಾಗಿದೆ. ಟ್ವಿಟರ್ ಕೈಗೊಂಡ ಕ್ರಮ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಗೆ ವಿರುದ್ಧವಾಗಿದೆ. ನನ್ನ ಖಾತೆಯನ್ನು ಬಂದ್ ಮಾಡುವ ಮೊದಲು ನನಗೆ ಸೂಚನೆ ನೀಡಿರಲಿಲ್ಲ.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಖಾತೆಯನ್ನು ಒಂದು ಗಂಟೆಗಾಗಿ ಬಂದ್ ಮಾಡಿದ ಟ್ವಿಟರ್‌ !

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟ್ಟರ್ ಖಾತೆಯನ್ನು ಒಂದು ಗಂಟೆಗಳ ಕಾಲ ಬಂದ್ ಮಾಡಿತ್ತು. ನಂತರ, ಟ್ವಿಟರ್ ರವಿಶಂಕರ್ ಪ್ರಸಾದ್ ಅವರಿಗೆ ಎಚ್ಚರಿಕೆ ನೀಡಿ ಅದನ್ನು ಪುನರಾರಂಭಿಸಿತು.

ಪ್ರಸಿದ್ದಿ ಮಾಧ್ಯಮಗಳು ಕೊರೋನಾದ ಬಗ್ಗೆ ತಪ್ಪಾದ ಮಾಹಿತಿಯನ್ನು ಹಬ್ಬಿಸುತ್ತಿರುವುದರಿಂದ ಜನರಲ್ಲಿ ಆತಂಕದ ವಾತಾವರಣವಿದೆ !

ಒಂದು ವೇಳೆ ಪ್ರಸಿದ್ದಿ ಮಾಧ್ಯಮಗಳು ತಪ್ಪಾದ ಮಾಹಿತಿಯನ್ನು ಹಬ್ಬಿಸುತ್ತಿವೆ ಎಂದಾದರೆ, ತೆಲಂಗಾಣಾ ಸರಕಾರವು ಈ ಬಗ್ಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ : ಅಥವಾ ರಾವ್ ಅವರು ನಿರಾಧಾರ ಆರೋಪವನ್ನು ಮಾಡುತ್ತಿದ್ದಾರೆಯೇ ?

ಫೇಸಬುಕ್‌ನ ವೈಚಾರಿಕ ಭಯೋತ್ಪಾದನೆ !

ಫೇಸಬುಕ್‌ನ ಸಂಸ್ಥಾಪಕ ಮಾರ್ಕ ಝುಕೆರಬರ್ಗ ಸ್ವತಃ ಜ್ಯೂ ಧರ್ಮದವರಾಗಿದ್ದಾರೆ. ಜ್ಯೂ ಧರ್ಮದವರು ತಮ್ಮ ಅಸ್ತಿತ್ವಕ್ಕಾಗಿ ಬಹಳ ಸಂಘರ್ಷ ಮಾಡಿದ್ದಾರೆ. ಜಗತ್ತಿನಲ್ಲಿ ಹಿಂದೂ ಧರ್ಮದ ಬಳಿಕ ಅತ್ಯಧಿಕ ನರಮೇಧಕ್ಕೊಳಗಾದವರೆಂದರೆ ಜ್ಯೂ ವಂಶದವರಾಗಿದ್ದಾರೆ. ಈಗಲೂ ಜ್ಯೂಗಳ ದೇಶವಾಗಿರುವ ಇಸ್ರೈಲ್ ತನ್ನ ಅಸ್ತಿತ್ವಕ್ಕಾಗಿ ಅಕ್ಕಪಕ್ಕದ ದೊಡ್ಡ ದೊಡ್ಡ ಅರಬ-ಮುಸ್ಲಿಂ ದೇಶಗಳೊಂದಿಗೆ ಹೋರಾಡುತ್ತಿದೆ.

ಪೂಜ್ಯಪಾದ ಸಂತಶ್ರಿ ಅಸಾರಾಮಜಿ ಬಾಪು ಅವರಿಗೆ ಜಾಮೀನು ಏಕೆ ಇಲ್ಲ ?

ವಸಾಯಿ ಸೆಷನ್ಸ್ ನ್ಯಾಯಾಲಯವು ಪುರಿಗೆ ನೀಡಿದ ಜಾಮೀನು ನೀಡಿದಕ್ಕೆ ಪೂಜ್ಯಪಾದ ಸಂತಶ್ರೀ ಅಸಾರಾಮ ಬಾಪು ಅವರ ಭಕ್ತರು ಸಾಮಾಜಿಕ ಮಾಧ್ಯಮಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪರ್ಲ್ ಬಂಧನಕ್ಕೊಳಗಾದ ಕೇವಲ ೧೧ ದಿನಗಳಲ್ಲಿ ಅವರಿಗೆ ಹೇಗೆ ಜಾಮೀನು ಸಿಕ್ಕಿತು ? ಎಂದು ಅವರು ಪ್ರಶ್ನಿಸಿದರು.

#Facebook_Targets_HJS ಹ್ಯಾಶ್‌ಟ್ಯಾಗ್ ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನ !

ಕಳೆದ ಕೆಲವು ತಿಂಗಳುಗಳಲ್ಲಿ ಫೇಸ್‌ಬುಕ್ ಹಿಂದುತ್ವದ ಪ್ರಚಾರ ಮಾಡುವುದನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ. ಈವರೆಗೆ ಫೇಸ್‌ಬುಕ್ ಇದು ಸನಾತನ ಸಂಸ್ಥೆ, ಸುದರ್ಶನ್ ಟಿವಿ, ಸುರೇಶ ಚವ್ಹಾಣಕೆ, ಬಿಜೆಪಿ ಶಾಸಕ ಟಿ. ರಾಜಾಸಿಂಹ ಹೀಗೆ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ನಾಯಕರ ಪುಟಗಳನ್ನು ನಿರ್ಬಂಧಿಸಿದೆ.

ಫೇಸ್‌ಬುಕ್‌ನ ಹಿಂದೂದ್ವೇಷದ ಹಿಂದೆ ಅಮೇರಿಕಾದ ‘ಟೈಮ್’ ನಿಯತಕಾಲಿಕೆಯ ಕೈವಾಡ !

ಫೇಸ್‌ಬುಕ್ ಹಿಂದೂ ಜನಜಾಗೃತಿ ಸಮಿತಿ, ಸನಾತನ ಪ್ರಭಾತ ನಿಯತಕಾಲಿಕೆ ಮತ್ತು ಸನಾತನ ಶಾಪ್‌ಗಳ ಫೇಸ್‌ಬುಕ್ ಪುಟಗಳಲ್ಲಿನ ವಿಷಯವನ್ನು ವಸ್ತುನಿಷ್ಠವಾಗಿ ಪರಿಶೀಲಿಸದೆ ಅನ್ಯಾಯವಾಗಿ ಕ್ರಮವನ್ನು ತೆಗೆದುಕೊಂಡಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಸರಾಯಿಯ ಲೋಟವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಭಗವಾನ್ ಶಿವನ `ಸ್ಟಿಕರ್’ ಪ್ರಸಾರ ಮಾಡಿದ ಇನ್‍ಸ್ಟಾಗ್ರಾಮ್‍ನ ವಿರುದ್ಧ ದೂರು ದಾಖಲು

ಸಾಮಾಜಿಕ ಮಾಧ್ಯಮ ಇನ್‍ಸ್ಟಾಗ್ರಾಮ್ ಇದು ಭಗವಾನ್ ನ ಶಿವನ ಆಕ್ಷೇಪಾರ್ಹ ಸ್ಟಿಕ್ಕರ್’ ಅನ್ನು ಪ್ರಸಾರ ಮಾಡಿದೆ. ಇದರಿಂದಾಗಿ ಇನ್‍ಸ್ಟಾಗ್ರಾಮ್‍ನ ವಿರುದ್ಧ ದೆಹಲಿಯಲ್ಲಿನ ಧರ್ಮಾಭಿಮಾನಿ ಮನೀಷ ಸಿಂಹ ಇವರು ಧಾರ್ಮಿಕ ಭಾವನೆಗಳಿಗೆ ನೋಯಿಸಲಾಗಿದೆ ಎಂದು ಇನ್‍ಸ್ಟಾಗ್ರಾಮ್ ವಿರುದ್ಧ ಪೊಲೀಸರಲ್ಲಿ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ.

ಖಲಿಸ್ತಾನಿ ಭಯೋತ್ಪಾದಕ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಕರೆದಿದ್ದಕ್ಕಾಗಿ ಕ್ರಿಕೆಟಿಗ ಹರಭಜನ್ ಸಿಂಗ್‍ರಿಂದ ಕ್ಷಮೆಯಾಚನೆ

ಖಲಿಸ್ತಾನಿ ಭಯೋತ್ಪಾದಕ ಜರ್ನಲ್‍ಸಿಂಗ್ ಭಿಂದ್ರನವಾಲೆ ಅವರ ಮೃತ್ಯುದಿನದ ನಿಮಿತ್ತ ಶ್ರದ್ಧಾಂಜಲಿ ನೀಡುವ ಪೋಸ್ಟನ್ನು ಮಾಡಿದ್ದರಿಂದ ಭಾರತದ ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ಕ್ಷಮೆಯಾಚಿಸಿದ್ದಾರೆ. ಶ್ರದ್ಧಾಂಜಲಿ ಸಲ್ಲಿಸಿದ ನಂತರ ಹರಭಜನ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಟೀಕೆಗೆ ಗುರಿಯಾದರು. ಹರಭಜನ್ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಕರೆದಿದ್ದರು.