ತೆಲಂಗಾಣಾ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರ ಆರೋಪ !
ಒಂದು ವೇಳೆ ಪ್ರಸಿದ್ದಿ ಮಾಧ್ಯಮಗಳು ತಪ್ಪಾದ ಮಾಹಿತಿಯನ್ನು ಹಬ್ಬಿಸುತ್ತಿವೆ ಎಂದಾದರೆ, ತೆಲಂಗಾಣಾ ಸರಕಾರವು ಈ ಬಗ್ಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ : ಅಥವಾ ರಾವ್ ಅವರು ನಿರಾಧಾರ ಆರೋಪವನ್ನು ಮಾಡುತ್ತಿದ್ದಾರೆಯೇ ?
ವಾರಂಗಳ (ತೆಲಂಗಾಣಾ) – ಪ್ರಸಿದ್ದಿ ಮಾಧ್ಯಮಗಳು ಕೊರೋನಾ ಬಗ್ಗೆ ತಪ್ಪಾದ ಮಾಹಿತಿಯನ್ನು ಹಬ್ಬಿಸುತ್ತಿವೆ ಹಾಗಾಗಿ ಜನರಲ್ಲಿ ಆತಂಕದ ವಾತಾವರಣವಿದೆ, ಎಂದು ತೆಲಂಗಾಣಾದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರು ಆರೋಪಿಸಿದ್ದಾರೆ.
ಕೆ. ಚಂದ್ರಶೇಖರ ರಾವ್ ಮಾತನ್ನು ಮುಂದುವರೆಸುತ್ತಾ,
೧. ಕೊರೋನಾ ಇಲ್ಲದಿರುವಾಗಲೂ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಜಾಗ ಸಿಗುತ್ತಿತ್ತೇ ? ವೈದ್ಯರು ಚಿಕಿತ್ಸೆಯನ್ನು ನೀಡಲು ಎಂದಿಗೂ ನಿರಾಕರಿಸುವುದಿಲ್ಲ. ಏಕೆಂದರೆ ಬಡವರು ಕೇವಲ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬಹುದು, ಎಂಬುದು ಅದರ ಹಿಂದಿರುವ ಕಾರಣವಾಗಿದೆ ಎಂದು ಅವರಿಗೆ ತಿಳಿದಿದೆ. ಆದ್ದರಿಂದ ಆ ರೋಗಿಗಳನ್ನು ಸ್ಥಳ ಇಲ್ಲದಿರುವಾಗ ನೆಲದ ಮೇಲೆ ಕುಳ್ಳಿರಿಸಿ ಚಿಕಿತ್ಸೆ ನೀಡುತ್ತಾರೆ; ಆದರೆ ಪ್ರಸಿದ್ದಿ ಮಾಧ್ಯಮಗಳು ಅದರ ಛಾಯಾಚಿತ್ರವನ್ನು ತೆಗೆಯುತ್ತವೆ ಮತ್ತು ‘ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ನೆಲದ ಮೇಲೆ ಮಲಗಬೇಕಾಗುತ್ತದೆ’, ಎಂದು ಹೇಳುತ್ತವೆ ಎಂದರು.
(ಸೌಜನ್ಯ: India Today )
೨. ನನಗೂ ಕೊರೊನಾ ಸೋಂಕು ತಗಲಿತ್ತು. ಆಗ ‘ಪ್ಯಾರಾಸಿಟಮೊಲ್’ ಮತ್ತು ರೋಗಪ್ರತಿರೋಧಕ ಶಕ್ತಿಯ ಔಷಧಗಳನ್ನು ತೆಗೆದುಕೊಂಡು ಗುಣಮುಖನಾದೆ, ಕಪ್ಪು ಶಿಲೀಂದ್ರ, ಹಳದಿ ಶಿಲೀಂದ್ರ ಇಂತಹ ಅನಾರೋಗ್ಯದ ಬಗ್ಗೆ ತಪ್ಪಾದ ಮಾಹಿತಿಗಳನ್ನು ಹಬ್ಬಿಸುತ್ತವೆ. ಯಾವ ಸುದ್ದಿವಾಹಿನಿ ಅಥವಾ ದೈನಿಕವೆಂದು ಈಗ ನನಗೆ ನೆನಪಿಲ್ಲ. ಈ ಶಿಲೀಂದ್ರ ಜೀವಂತವಾಗಿದೆಯೋ ಅಥವಾ ನಿರ್ಜಿವವೋ (ಇದೂ ಕೂಡಾ ಸರಿ ಗೊತ್ತಿಲ್ಲ); ಆದರೆ ಜನರು ಈ ಸುದ್ದಿಯ ಬಗ್ಗೆ ಕೇಳಿಯೇ ಸಾಯುತ್ತಿದ್ದಾರೆ. ಆದ್ದರಿಂದ ಸುದ್ದಿವಾಹಿನಿಗಳಿಗೆ ಶಾಪ ತಗಲುವುದು ಎಂದು ನಾನು ಹೇಳುತ್ತೇನೆ.