ಸರಾಯಿಯ ಲೋಟವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಭಗವಾನ್ ಶಿವನ `ಸ್ಟಿಕರ್’ ಪ್ರಸಾರ ಮಾಡಿದ ಇನ್‍ಸ್ಟಾಗ್ರಾಮ್‍ನ ವಿರುದ್ಧ ದೂರು ದಾಖಲು

ನವದೆಹಲಿ – ಸಾಮಾಜಿಕ ಮಾಧ್ಯಮ ಇನ್‍ಸ್ಟಾಗ್ರಾಮ್ ಇದು ಭಗವಾನ್ ನ ಶಿವನ ಆಕ್ಷೇಪಾರ್ಹ ಸ್ಟಿಕರ್’ ಅನ್ನು ಪ್ರಸಾರ ಮಾಡಿದೆ. ಇದರಿಂದಾಗಿ ಇನ್‍ಸ್ಟಾಗ್ರಾಮ್‍ನ ವಿರುದ್ಧ ದೆಹಲಿಯಲ್ಲಿನ ಧರ್ಮಾಭಿಮಾನಿ ಮನೀಷ ಸಿಂಹ ಇವರು ಧಾರ್ಮಿಕ ಭಾವನೆಗಳಿಗೆ ನೋಯಿಸಲಾಗಿದೆ ಎಂದು ಇನ್‍ಸ್ಟಾಗ್ರಾಮ್ ವಿರುದ್ಧ ಪೊಲೀಸರಲ್ಲಿ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರು ಇನ್‍ಸ್ಟಾಗ್ರಾಮ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಚಿತ್ರದಲ್ಲಿ ಶಿವನ ಒಂದು ಕೈಯಲ್ಲಿ ಸರಾಯಿಯ ಲೋಟ ಮತ್ತು ಇನ್ನೊಂದು ಕೈಯಲ್ಲಿ ಸಂಚಾರವಾಣಿಯನ್ನು ಹಿಡಿದಿರುವಂತೆ ತೋರಿಸಲಾಗಿದೆ. ಈ ಚಿತ್ರವು ಸ್ಟಿಕರ್ ರೂಪದಲ್ಲಿದೆ. ಇದನ್ನು ‘ಗ್ರಾಫಿಕ್ಸ್ ಇಂಟರಚೆಂಜ್ ಫಾಮ್ರ್ಯಾಟ್’ (ಜಿ.ಐ.ಎಫ್.) ಎಂದು ಕರೆಯಲಾಗುತ್ತದೆ.

ಮನೀಷ ಇವರು ತಮ್ಮ ದೂರಿನಲ್ಲಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಇನ್‍ಸ್ಟಾಗ್ರಾಮ್ ಉದ್ದೇಶಪೂರ್ವಕವಾಗಿ ಇಂತಹ ಚಿತ್ರಗಳನ್ನು ಪ್ರಸಾರ ಮಾಡಿದೆ. ಇಂತಹ ಚಿತ್ರಗಳಿಂದಾಗಿ ಹಿಂದೂಗಳಲ್ಲಿ ಅಶಾಂತಿಯನ್ನು ಉಂಟುಮಾಡಿ ಉದ್ರೇಕಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.