ಸನಾತನದ ೪೭ ನೇ ಸಂತರಾದ ಪೂ. ರಘುನಾಥ ರಾಣೆ (೮೨ ವರ್ಷ) ಇವರ ಠಾಣೆ(ಮುಂಬಯಿ)ಯಲ್ಲಿ ದೇಹತ್ಯಾಗ !

ಪೂ. ರಾಣೆ ಅಜ್ಜನವರು ೧೯೯೯ ರಲ್ಲಿ ಅಂದರೆ ೬೦ ನೇ ವಯಸ್ಸಿನಲ್ಲಿ ಸನಾತನದ ಮಾರ್ಗದರ್ಶನದಲ್ಲಿ ಸಾಧನೆಗೆ ಪ್ರಾರಂಭ ಮಾಡಿದರು. ಕೇವಲ ೧೬ ವರ್ಷಗಳಲ್ಲಿ ತಳಮಳದಿಂದ ಸಾಧನೆ ಮಾಡಿ ಅವರು ಸಂತ ಪದವಿಯನ್ನು ತಲುಪಿದರು.

ಪರಾತ್ಪರ ಗುರು ಡಾಕ್ಟರರು ಸಾಧಕರ ಪ್ರತಿ ಕ್ಷಣ ಹಾಗೂ ಮೃತ್ಯುವಿನ ನಂತರವೂ ಕಾಳಜಿಯನ್ನು ಖಂಡಿತ ವಹಿಸಲಿರುವುದರಿಂದ ಸಾಧಕರೇ, ಭಕ್ತಿಭಾವವನ್ನು ಹೆಚ್ಚಿಸಿ !

ಪರಾತ್ಪರ ಗುರು ಡಾಕ್ಟರರು ಒಂದು ಗೂಡಿನಲ್ಲಿರುವ ಗುಬ್ಬಚ್ಚಿಯ ಹಾಗೂ ಮರಿಗಳ ಬಗ್ಗೆ ಅಷ್ಟು ಕಾಳಜಿಯನ್ನು ತೆಗೆದುಕೊಳ್ಳುತ್ತಿರುವಾಗ ತನು-ಮನ-ಧನಗಳ ತ್ಯಾಗ ಮಾಡಿ ಸಾಧನೆಯನ್ನು ಮಾಡುವ ಸಾಧಕರ ಕಾಳಜಿಯನ್ನು ಗುರುದೇವರು ತೆಗೆದುಕೊಳ್ಳದಿರುವರೇ ? ಅದುದರಿಂದ ಸಾಧಕರೆಲ್ಲರೂ ನಿಶ್ಚಿಂತರಾಗಿ ಸಾಧನೆಯನ್ನು ಮಾಡಿರಿ.

ಪೂ. (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಮನುಷ್ಯ ಮತ್ತು ಮನುಷ್ಯಜನ್ಮ ಇವುಗಳ ಕುರಿತು ಮಾಡಿದ ಅಮೂಲ್ಯ ಮಾರ್ಗದರ್ಶನ !

. ‘ಕೆಟ್ಟ ಮತ್ತು ಸ್ವಭಾವದೋಷಗಳ ಆವರಣವಿರುವ ಮನುಷ್ಯರು ನನಗೆ ಬೇಡ; ಏಕೆಂದರೆ ಅವರು ಒಳ್ಳೆಯ ಜನರನ್ನು ಹಾಳು ಮಾಡುತ್ತಾರೆ. ಒಂದು ಕೊಳೆತ ಈರುಳ್ಳಿಯಿಂದ ಈರುಳ್ಳಿಯ ಚೀಲವೇ ಹಾಳಾಗುತ್ತದೆ. ಎಲ್ಲವೂ ಕೊಳೆಯುತ್ತವೆ. ಆದುದರಿಂದ ನೀವು ದೂರ ಇರಬೇಕು.

ಸಾಧಕರನ್ನು ಸಾಧನೆಯ ಪ್ರವಾಸದಲ್ಲಿ ಎಲ್ಲಿಯೂ ಅನುಭೂತಿಗಳಲ್ಲಿ ಅಥವಾ ಸಿದ್ಧಿಗಳಲ್ಲಿ ಸಿಲುಕಿಸದೇ ಸಹಜ ರೀತಿಯಿಂದ ಸಗುಣದಿಂದ ನಿರ್ಗುಣದ ಕಡೆಗೆ ಕರೆದುಕೊಂಡು ಹೋಗುವ ಪರಾತ್ಪರ ಗುರು ಡಾ. ಆಠವಲೆ !

ಗುರುಗಳ ಬೋಧನೆಗನುಸಾರ ಸಾದಾ ಸರಳ ರೀತಿಯಿಂದ ಕೊನೆಯವರೆಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವುದು ಮತ್ತು ಅದಕ್ಕನುಸಾರ ಸಂಪೂರ್ಣ ಸಮರ್ಪಿಸಿಕೊಂಡು ಸಮಷ್ಟಿ ಸೇವೆಯನ್ನು ಮಾಡುವುದು, ಇಷ್ಟೇ ಸಾಧಕರಿಗೆ ಗೊತ್ತಿದೆ ಮತ್ತು ಇದರಲ್ಲಿಯೇ ಅವರಿಗೆ ಆನಂದವೂ ಇದೆ.

‘ಸನಾತನ ಪಂಚಾಂಗ’ವನ್ನು ‘ಸನಾತನ ಶಾಪ್’ನ ಮೂಲಕ ವಿದೇಶಕ್ಕೆ ಕಳುಹಿಸಲು ಸಾಧ್ಯವಾಗದಿರುವುದರಿಂದ ಇಂಗ್ಲೆಂಡಿನ ಓರ್ವ ಜಿಜ್ಞಾಸು ಅದನ್ನು ಅಲ್ಲಿ ಮುದ್ರಿಸಿಕೊಳ್ಳುವ ಸಿದ್ಧತೆಯನ್ನು ತೋರಿಸುವುದು

‘ನನ್ನ ತಂದೆಯವರು ೮೭ ವರ್ಷದವರಾಗಿದ್ದಾರೆ. ಅವರಿಗೆ ಸನಾತನ ಪಂಚಾಂಗವು ಯಾವುದೇ ಸ್ಥಿತಿಯಲ್ಲಿ ಬೇಕಾಗಿದೆ, ನೀವು ನನಗೆ ಪಂಚಾಂಗದ ಪಿ.ಡಿ.ಎಫ್. ಕಳುಹಿಸಬಹುದೇ ? ಅದರಿಂದ ನಾನು ಅದನ್ನು ಇಲ್ಲಿಯೇ ಮುದ್ರಿಸಿಕೊಳ್ಳುವೆನು’, ಎಂದು ಬರೆದಿದ್ದರು.

ಮನುಷ್ಯಜನ್ಮದ ಮಹತ್ವವನ್ನು ತಿಳಿದುಕೊಂಡು ಮನಃಶಾಂತಿ ಪಡೆಯಿರಿ !

ಅಮೇರಿಕಾ ಅಥವಾ ಪಾಶ್ಚಾತ್ಯ ದೇಶಗಳು ಅರ್ಥಿಕ ದೃಷ್ಟಿಯಿಂದ ಎಷ್ಟೇ ಸಮೃದ್ಧವಾಗಿದ್ದರೂ, ಆ ದೇಶದ ಜನರಲ್ಲಿ ಶಾಂತಿ ಇದೆಯೇ ? ಆ ದೇಶಗಳಲ್ಲಿ ಕಳ್ಳತನ, ಹೊಡೆದಾಟ, ಸುಲಿಗೆ, ಪರಸ್ಪರರನ್ನು ಮೋಸಗೊಳಿಸುವುದು ನಿಂತಿದೆಯೇ ? ಶ್ರೀಮಂತಿಕೆ ಎಂದರೆ ಶಾಂತಿ ಅಲ್ಲ.

‘ಸಾಧಕರ ಸಾಧನೆ ಮತ್ತು ಗುರುಕಾರ್ಯ ವೃದ್ಧಿಸಬೇಕು ಎಂಬ ತೀವ್ರ ತಳಮಳವಿರುವ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ !

ಪೂ. ರಮಾನಂದ ಅಣ್ಣನವರು ಎಲ್ಲ ಧರ್ಮಪ್ರೇಮಿಗಳು, ಸಾಧಕರು ಮತ್ತು ಸಾಧಕರ ಕುಟುಂಬದವರ ಸಾಧನೆಗೆ ಆಧಾರಸ್ತಂಭವಾಗಿದ್ದಾರೆ. ಅವರು ಯಾರೊಂದಿಗೆ ಮಾತನಾಡುತ್ತಾರೆಯೋ, ಅವರೆಲ್ಲರೂ ಸಾಧನೆ ಮಾಡಲು ಪ್ರಾರಂಭಿಸುತ್ತಾರೆ. ಪೂ. ಅಣ್ಣನವರ ಮಾತಿನಲ್ಲಿ ಯಾವುದೇ ಅಪೇಕ್ಷೆ ಇರುವುದಿಲ್ಲ.

ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ

ಗುರುಪೂರ್ಣಿಮೆಯಂದು ೧೦೦೦ ಪಟ್ಟು ಹೆಚ್ಚು ಕಾರ್ಯನಿರತ ಗುರುತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕೆಂದು ’ಆನ್‌ಲೈನ್’ ಮೂಲಕ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸುತ್ತಿದ್ದೇವೆ.  ತಮಗೆಲ್ಲರಿಗೂ ಹಾರ್ದಿಕ ಆಮಂತ್ರಣ.

ಗುರುಪೂರ್ಣಿಮೆ ಎಂದರೆ ‘ವ್ಯಾಸಪೂರ್ಣಿಮೆ !‘

ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ ಮತ್ತು ಭಕ್ತಿಯೋಗ ಇವುಗಳ ಸಂಗಮವಾಗಿರುವ ‘ಗುರುಕೃಪಾಯೋಗದ ಮೂಲಕ ಪ.ಪೂ. ಗುರುದೇವರು ಜೀವನದ ಪ್ರತಿಯೊಂದು ಅಂಗದ ಅಧ್ಯಾತ್ಮೀಕರಣ ಮಾಡುವುದನ್ನು ಕಲಿಸಿದರು ! ಆ ಅಮೂಲ್ಯ ಬೋಧನೆಯ ಪ್ರಸಾರ ಮಾಡುವುದೇ ಅವರ ಬಗೆಗಿನ ನಿಜವಾದ ಕೃತಜ್ಞತೆಯಾಗಿದೆ.

ಮಹರ್ಷಿಗಳು ಮಾಡಿದ ಪರಾತ್ಪರ ಗುರು ಡಾ. ಆಠವಲೆಯವರ ಅವತಾರತ್ವದ ಗೌರವ !

ಗುರುಕಾರ್ಯವನ್ನು ಪೂರ್ಣತ್ವಕ್ಕೆ ತೆಗೆದುಕೊಂಡು ಹೋಗಲು ಸಾಧಕರಿಗೆ ಪ್ರಕಾಶರೂಪಿ ಊರ್ಜೆಯು ದೊರೆಯಲೆಂದು ಭೃಗು ಮಹರ್ಷಿಗಳ ಆಜ್ಞೆಯಿಂದ ೧೯.೨.೨೦೧೯ ರಂದು ‘ಸಹಸ್ರದೀಪದರ್ಶನ ಸಮಾರಂಭ’ ನೆರವೇರಿತು. ಈ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕೈಯಲ್ಲಿನ ದೀಪದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕೈಗಳಲ್ಲಿನ ದೀಪಗಳನ್ನು ಪ್ರಜ್ವಲಿಸಲಾಯಿತು.