‘ಸಾಧಕರೇ, ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಪರಿಪೂರ್ಣ ಸೇವೆ ಮಾಡಿ !’ಪರಾತ್ಪರ ಗುರು ಡಾ. ಆಠವಲೆಯವರು ದೈನಿಕ ‘ಸನಾತನ ಪ್ರಭಾತದ ಸೇವೆಯನ್ನು ಮಾಡುವ ಸಾಧಕರಿಂದ ತಪ್ಪುರಹಿತ ಮತ್ತು ಪರಿಪೂರ್ಣ ಸೇವೆ ಮಾಡಲು ಹೇಗೆ ಪ್ರಯತ್ನ ಮಾಡಿಸಿಕೊಂಡರು, ಎಂಬುದನ್ನು ಹೇಳುವ ಈ ಲೇಖನಮಾಲೆಯನ್ನು ಪ್ರಕಟಿಸುತ್ತಿದ್ದೇವೆ. ಇಂದಿನ ಲೇಖನದಲ್ಲಿ ಅವರು ನೀಡಿದ ದೃಷ್ಟಿಕೋನವನ್ನು ನೊಡೋಣ. |
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/51574.html |
ಮೇಲುಮೇಲಿನಂತೆ ಸೇವೆ ಮಾಡುವುದರಿಂದ ಸಾಧನೆಯಲ್ಲಾಗುವ ಹಾನಿಯನ್ನು ಗಮನದಲ್ಲಿಟ್ಟು ಪ್ರತಿಯೊಂದು ಸೇವೆಯನ್ನು ಪರಿಪೂರ್ಣ ಮಾಡಲು ಪ್ರಯತ್ನಿಸಿ !
‘ಮೇಲ್ನೋಟಕ್ಕೆ ಚಿಕ್ಕ ಪುಟ್ಟದು ಎಂದು ಅನಿಸುವ ತಪ್ಪುಗಳಿಂದಲೂ ಸಾಧನೆಯಲ್ಲಿ ಹೇಗೆ ಹಾನಿಯಾಗುತ್ತದೆ’ ಎಂದು ತೋರಿಸಿ ‘ಪರಿಪೂರ್ಣ ಸೇವೆಯ ಮಹತ್ವವನ್ನು ಸಾಧಕರ ಮನಸ್ಸಿನ ಮೇಲೆ ಬಿಂಬಿಸುವುದು, ಈ ಮಾಲಿಕೆಯ ಮುಖ್ಯ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಸಾಧಕರು ಮುಂದಿನ ದೃಷ್ಟಿಕೋನ ಗಮನದಲ್ಲಿಟ್ಟುಕೊಳ್ಳಬೇಕು.
೧. ಪತ್ರಿಕೆಯು ಸಾತ್ತ್ವಿಕವಿದ್ದರೆ, ಅದು ಓದುಗರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಪತ್ರಿಕೆಯು ಸಾತ್ತ್ವಿಕವಾಗಿರಲು ಅದರಲ್ಲಿ ತಪ್ಪುಗಳಿರಬಾರದು.
೨. ತಪ್ಪುಗಳಾಗದಂತೆ ಪ್ರಯತ್ನಿಸುವುದು, ಕೃತಿಯ ಸ್ತರದ ಸಾಧನೆಯಾಗಿದೆ. ತಪ್ಪುಗಳಾಗದಂತೆ ಮತ್ತು ಪರಿಪೂರ್ಣ ಸೇವೆ ಮಾಡಲು ಪ್ರಯತ್ನಿಸಿದರೆ ಆ ಮೂಲಕ ಪತ್ರಿಕಾವಿಭಾಗದಲ್ಲಿರುವ ಸಾಧಕರ ವ್ಯಷ್ಟಿ ಸಾಧನೆಯಾಗುತ್ತದೆ. ಅದರಿಂದ ಇತರ ಸಾಧಕರಿಗೆ ಮತ್ತು ಓದುಗರಿಗೂ ಕಲಿಯಲು ಸಿಗುತ್ತದೆ. ಆದುದರಿಂದ ಈ ತಪ್ಪುಗಳನ್ನು ಮಾಲಿಕೆಯ ಸ್ವರೂಪದಲ್ಲಿ ಪ್ರಕಟಿಸುತ್ತಿದ್ದೇವೆ.
೩. ಈ ಮಾಲಿಕೆಯಲ್ಲಿ ಶುದ್ಧಲೇಖನಗಳಲ್ಲಿನ ಕೆಲವೊಮ್ಮೆ ‘ಚಿಕ್ಕ ತಪ್ಪು ಎಂದೆನಿಸುವ ತಪ್ಪುಗಳನ್ನೂ ಉಲ್ಲೇಖಿಸಲಾಗಿದೆ. ಇದರ ಕಾರಣ ಹೀಗಿದೆ –
ಅ. ಇದರಿಂದ ‘ಸಾಧಕರಿಗೆ ಮತ್ತು ಓದುಗರಿಗೆ ಶುದ್ಧ ಲೇಖನವನ್ನು ಹೇಗೆ ತಯಾರಿಸಬೇಕು ?, ಎಂದು ತಿಳಿಯುತ್ತದೆ ಮತ್ತು ಅವರ ಶುದ್ಧಲೇಖನವೂ ಸುಧಾರಣೆಯಾಗುವುದು.
ಆ. ಶುದ್ಧವೆಂದರೆ ಸಾತ್ತ್ವಿಕ. ಲೇಖನ ಶುದ್ಧವಾದರೆ, ಸಾತ್ತ್ವಿಕತೆಯೂ ಹೆಚ್ಚುವುದು. ಇದರಿಂದ ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಎರಡೂ ಸ್ತರದ ಸಾಧನೆಯಲ್ಲಿ ವೃದ್ಧಿಯಾಗುವುದು.
೪. ಈ ಮಾಲಿಕೆಯ ಅಂತರ್ಗತ ‘ಹೆಚ್ಚು ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತ ಮತ್ತು ‘ಕಡಿಮೆ ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತವನ್ನು ಕೈಯಲ್ಲಿ ಹಿಡಿದುಕೊಂಡು ಸಾಧಕರಿಗೆ ಸೂಕ್ಷ್ಮದಲ್ಲಿ ಏನು ಅರಿವಾಯಿತು’ ಎಂಬ ಲೇಖನವು ಮುಂದೆ ಪ್ರಕಾಶನವಾಗಲಿದೆ.
‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ‘ಹೆಚ್ಚು ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತ’ ಇವುಗಳ ಪರೀಕ್ಷಣೆ ಮಾಡಲಾಯಿತು. ಅವುಗಳ ಪರೀಕ್ಷಣೆ ಮತ್ತು ವಿಶ್ಲೇಷಣೆಯನ್ನು ಕೂಡ ಪ್ರಕಟಿಸಲಾಗುವುದು. ಇದರಿಂದ ವ್ಯಾಕರಣ ಶುದ್ಧಿಯಿಂದ ಲೇಖನದಲ್ಲಿರುವ ನಕಾರಾತ್ಮಕತೆ ಕಡಿಮೆಯಾಗಿ ಸಕಾರಾತ್ಮಕತೆ ಎಷ್ಟು ಹೆಚ್ಚಾಗುತ್ತದೆ ?’ ಎಂಬುದೂ ಗಮನಕ್ಕೆ ಬರುವುದು.
೬. ಈ ಮಾಲಿಕೆಯ ಮೂಲಕ ‘ಸನಾತನದಲ್ಲಿ ಸಾಧಕರನ್ನು ಯಾವ ರೀತಿ ಸಿದ್ಧಗೊಳಿಸಲಾಗುತ್ತದೆ ?’ ಎಂಬುದು ಎಲ್ಲರಿಗೂ ತಿಳಿಯುವುದು.
ಇತರ ದಿನಪತ್ರಿಕೆಗಳಲ್ಲಿಯೂ ಪ್ರತಿಯೊಂದು ಪುಟದಲ್ಲಿ ೫-೧೦ ತಪ್ಪುಗಳಿರುತ್ತವೆ. ಅವುಗಳನ್ನು ಸುಧಾರಿಸಿಕೊಳ್ಳಲು ಅವರಿಗೂ ಮಾರ್ಗದರ್ಶನ ಸಿಗುವುದು.
ಈ ಮಾಲಿಕೆಯಲ್ಲಿ ತಿಳಿಸಿದ ತಪ್ಪುಗಳನ್ನು ಓದಿ ಸಾಧಕರು ತಮ್ಮಿಂದ ಮೇಲುಮೇಲಿನಂತೆ ಕೃತಿ ಮಾಡುವ ವೃತ್ತಿಯಿಂದ ಸೇವೆ ಆಗುತ್ತಿಲ್ಲವಲ್ಲ’ ಎಂದು ಅಭ್ಯಾಸ ಮಾಡಬೇಕು. ತಪ್ಪುಗಳಿಂದಾಗುವ ಹಾನಿಯನ್ನು ಗಮನದಲ್ಲಿಟ್ಟು ಎಲ್ಲೆಡೆಯ ಸಾಧಕರು ಪ್ರತಿಯೊಂದು ಹಂತದಲ್ಲಿ ಪರಿಪೂರ್ಣ ಸೇವೆಯನ್ನು ಮಾಡಿದರೆ ಅವರ ಸೇವೆ ಮತ್ತು ಸಾಧನೆಯ ಫಲನಿಷ್ಪತ್ತಿ ಹೆಚ್ಚಾಗಿ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ !
ಲೇಖನದಲ್ಲಾಗುವ ತಪ್ಪುಗಳು ಶಾಶ್ವತವಾಗಿ ದೂರಗೊಳಿಸಲು ತಪ್ಪುಗಳಾಗುವ ಹಿಂದಿನ ದೋಷವನ್ನು ಹುಡುಕಿ ಆ ಸಂದರ್ಭದಲ್ಲಿ ಸ್ವಯಂಸೂಚನೆಯನ್ನು ನೀಡಬೇಕು !
ದೈನಿಕ ‘ಸನಾತನ ಪ್ರಭಾತದಲ್ಲಿರುವ ಚೈತನ್ಯ ಕಡಿಮೆಯಾಗಿ ನಕಾರಾತ್ಮಕತೆ ಹೆಚ್ಚಾಗಬಾರದೆಂದು’ ಪ್ರತಿದಿನ ಆಗುವ ತಪ್ಪುಗಳಿಗೆ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವ ಪದ್ಧತಿಯನ್ನು ಪ್ರಾರಂಭಿಸಲಾಯಿತು. ಇದರ ಪರಿಣಾಮವೆಂದು ಪ್ರಕ್ರಿಯೆಯನ್ನು ಪ್ರಾರಂಭಿಸಿ ೩ ತಿಂಗಳುಗಳಲ್ಲಿ ತಪ್ಪುಗಳು ಕಡಿಮೆಯಾಗಲು ಆರಂಭವಾಗಿದೆ. ‘ತಪ್ಪುಗಳನ್ನು ಹೇಗೆ ಕಡಿಮೆ ಮಾಡುವುದು’ ಎನ್ನುವುದು ಓದುಗರಿಗೆ ತಿಳಿಯಬೇಕು, ಎಂದು ಈ ಮಾಲಿಕೆಯನ್ನು ಆರಂಭಿಸಲಾಗಿದೆ. ಸಾಧಕರು ಲೇಖನದಲ್ಲಿರುವಂತಹ ತಪ್ಪುಗಳು ಶಾಶ್ವತವಾಗಿ ದೂರವಾಗಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಮೂಲಕ ಪ್ರಯತ್ನಿಸಬೇಕು. ತಮ್ಮ ಯಾವ ದೋಷ ಅಥವಾ ಅಹಂಗಳ ಕಾರಣದಿಂದ ತಪ್ಪುಗಳಾಗುತ್ತವೆ ಎಂದು ಚಿಂತನೆಯನ್ನು ಮಾಡಿ, ಅದನ್ನು ದೂರಗೊಳಿಸಲು ಸ್ವಯಂಸೂಚನೆ ನೀಡಬೇಕು.
ತನ್ನಿಂದ ತಪ್ಪುಗಳಾಗಿರುವುದು ತಿಳಿದ ತಕ್ಷಣ ದುಃಖವೆನಿಸಿದರೆ ಮಾತ್ರ ಆ ತಪ್ಪನ್ನು ಸುಧಾರಿಸುವ ಪ್ರಯತ್ನವಾಗುತ್ತದೆ !
‘ಸಾಧನೆಯಲ್ಲಿ ಆಗಿರುವ ತಪ್ಪುಗಳೆಡೆಗೆ ನೋಡುವ ದೃಷ್ಟಿಕೋನ ‘ಅದು ಕೇವಲ ಕಲಿಯಲಿಕ್ಕಾಗಿ ಮಾತ್ರ ಇದೆ’, ಎಂದು ಮೇಲು ಮೇಲಿನಿಂದ ಅನಿಸಿದರೆ, ಅದರಿಂದ ಅಪೇಕ್ಷಿತ ಬದಲಾವಣೆಯಾಗುವ ವೇಗ ಅತ್ಯಂತ ಕಡಿಮೆಯಿರುತ್ತದೆ. ತಪ್ಪಾಗಿದೆ ಎಂದು ತಿಳಿದ ತಕ್ಷಣ ಮೊದಲು ‘ನನ್ನಿಂದ ಈ ತಪ್ಪಾಗಿದೆ’ ಎಂದು ಪಶ್ವಾತ್ತಾಪವಾಗಬೇಕು ಮತ್ತು ಕೆಟ್ಟದೆನಿಸಬೇಕು. ಈ ಪ್ರಕ್ರಿಯೆಯಾದರೆ ಮಾತ್ರ ಆ ತಪ್ಪಿನಿಂದ ಕಲಿತುಕೊಂಡು ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗಲು ಸಾಧ್ಯವಾಗುತ್ತದೆ’.
– (ಪರಾತ್ಪರ ಗುರು ) ಡಾ. ಆಠವಲೆ.