ದೈನಿಕ ‘ಸನಾತನ ಪ್ರಭಾತ’ದ ಸೇವೆಯು ಸಾಧನೆ ಎಂದು ಆಗಲು ನಮ್ಮ ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರು ನಮಗೆ ಕಳೆದ ೨೩ ವರ್ಷಗಳಿಂದ ನಿರಂತರವಾಗಿ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ. ಸದ್ಯ ಅವರಿಗೆ ಅತ್ಯಂತ ಶಾರೀರಿಕ ತೊಂದರೆಗಳಾಗುತ್ತಿರುವಾಗಲೂ ಅವರು ದಿನದಲ್ಲಿನ ೩-೪ ಗಂಟೆಗಳನ್ನು ಕೊಟ್ಟು ವಿವರವಾಗಿ ದೈನಿಕ ಸನಾತನ ಪ್ರಭಾತವನ್ನು ಓದುತ್ತಾರೆ. ದೈನಿಕ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರಿಗೆ ಒಂದೇ ವಾರ್ತೆಯನ್ನು ಅನೇಕ ಬಾರಿ ಅಥವಾ ಸಂಪೂರ್ಣ ಲೇಖನವನ್ನು ಓದಿದರೂ ಯಾವ ತಪ್ಪುಗಳು ಗಮನಕ್ಕೆ ಬರುವುದಿಲ್ಲವೋ, ಅಂತಹ ತಪ್ಪುಗಳು ಕೇವಲ ಒಂದು ಸಲ ಓದಿ ಪರಾತ್ಪರ ಗುರು ಡಾಕ್ಟರರ ಗಮನಕ್ಕೆ ಬರುತ್ತವೆ. ಅವರು ಆ ಎಲ್ಲ ತಪ್ಪುಗಳನ್ನು ‘ಸನಾತನ ಪ್ರಭಾತ’ದ ಕಾರ್ಯಾಲಯಕ್ಕೆ ಕಳುಹಿಸುತ್ತಾರೆ. ತಪ್ಪುಗಳನ್ನು ತೋರಿಸಿ ಕೊಡುವ ಅವರ ಉದ್ದೇಶವು ಅತ್ಯಂತ ಕೃಪಾಳುವಾಗಿದೆ. ಸಾಧಕರ ನಿಷ್ಕಾಳಜಿ ಮತ್ತು ಗಾಂಭೀರ್ಯರಹಿತ ಸೇವೆಯಿಂದ ಈ ತಪ್ಪುಗಳಾಗುತ್ತವೆ. ಈ ತಪ್ಪುಗಳಿಂದ ಸಮಷ್ಟಿಯ ಮೇಲೆ ವಿಶೇಷ ಏನೂ ಪರಿಣಾಮವಾಗುವುದಿಲ್ಲ. ಇವುಗಳಲ್ಲಿನ ಹೆಚ್ಚಿನ ತಪ್ಪುಗಳು ಸಾಮಾನ್ಯ ವಾಚಕರ ಗಮನಕ್ಕೂ ಬರುವುದಿಲ್ಲ. ಹೀಗಿದ್ದರೂ ಈ ತಪ್ಪುಗಳಿಂದಾಗಿ ‘ಸನಾತನ ಪ್ರಭಾತ’ದ ಸೇವೆ ಮಾಡುವ ಸಾಧಕರ ಸಾಧನೆಯ ಹಾನಿಯಾಗುತ್ತಿದೆ. ತಪ್ಪುಗಳಿಂದಾಗಿ ಸಾಧನೆಯು ಖರ್ಚಾಗುವುದರಿಂದ ಅನೇಕ ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದರೂ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗುತ್ತಿಲ್ಲ. ಸಾಧಕರು ಸಾಧನೆಯ ಮುಂದಿನ ಹಂತಕ್ಕೆ ಹೋಗಲು ಪರಾತ್ಪರ ಗುರು ಡಾಕ್ಟರರು ಸ್ವತಃ ನಿರಂತರವಾಗಿ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅವರ ತಳಮಳದಿಂದಾಗಿಯೇ ‘ಸನಾತನ ಪ್ರಭಾತ’ದ ಸೇವೆ ಮಾಡುವ ಸಾಧಕರಿಗೆ ಈಗ ಸ್ವಲ್ಪ ಪ್ರಮಾಣದಲ್ಲಿ ತಪ್ಪುಗಳ ಅರಿವಾಗತೊಡಗಿದೆ. ‘ತಪ್ಪುಗಳ ಪ್ರಮಾಣವು ಕಡಿಮೆಯಾಗಲು ಪರಾತ್ಪರ ಗುರು ಡಾಕ್ಟರರು ನಮ್ಮಿಂದ ಯಾವ ರೀತಿ ಪ್ರಯತ್ನಗಳನ್ನು ಮಾಡಿಸಿಕೊಂಡರು ?’, ಎಂಬುದನ್ನು ಈ ಲೇಖನದಲ್ಲಿ ನೀಡುವ ಪ್ರಯತ್ನವನ್ನು ಮಾಡಿದ್ದೇವೆ.
‘ಸಾಧನೆಯ ಒಂದು ಹಂತದಲ್ಲಿ ಸಿಲುಕಿದ ನಮ್ಮಂತಹ ಜೀವಗಳಿಗೆ ವೇಗವನ್ನು ನೀಡಲು ಪರಾತ್ಪರ ಗುರುದೇವರು ಸೂಕ್ಷ್ಮದಿಂದ ಎಷ್ಟು ಮತ್ತು ಏನೆಲ್ಲ ಪ್ರಯತ್ನವನ್ನು ಮಾಡಿದ್ದಾರೆ ?’, ಎಂಬುದು ನಮ್ಮಂತಹ ಅತಿಸಾಮಾನ್ಯ ಜೀವಗಳಿಗೆ ತಿಳಿಯಲು ಸಾಧ್ಯವೇ ಇಲ್ಲ. ‘ಅವರು ನಮ್ಮ ಸಾಧನೆಗೆ ವೇಗವನ್ನು ನೀಡಲು ಈ ಕಾಲಾವಧಿಯಲ್ಲಿ ಎಷ್ಟು ಕಷ್ಟವನ್ನು ತೆಗೆದುಕೊಂಡಿದ್ದಾರೆ ?’, ಎಂಬುದು ಸಮಷ್ಟಿಗೆ (ಎಲ್ಲರಿಗೂ) ಕಲಿಯಲು ಸಿಗಬೇಕೆಂದು ಆ ಅನುಭವಕಥನವನ್ನು ಇಲ್ಲಿ ನೀಡುತ್ತಿದ್ದೇವೆ. ‘ಈ ಲೇಖನವನ್ನು ಓದಿ ಎಲ್ಲ ಸಾಧಕರಿಗೆ ತಪ್ಪುರಹಿತ ಮತ್ತು ಪರಿಪೂರ್ಣ ಸೇವೆಯನ್ನು ಮಾಡಲು ಪ್ರೇರಣೆ ಸಿಗಲಿ’, ಎಂದು ಪರಾತ್ಪರ ಗುರುದೇವರ ಕೋಮಲ ಚರಣಗಳಲ್ಲಿ ಪ್ರಾರ್ಥನೆ !
೨೩/೦೪ ನೇ ಸಂಚಿಕೆಯ ಲೇಖನದಲ್ಲಿ ನಾವು ಪರಾತ್ಪರ ಗುರು ಡಾ. ಆಠವಲೆಯವರು ೨೦.೫.೨೦೨೧ ರಿಂದ ಪ್ರತಿದಿನ ದೈನಿಕ ‘ಸನಾತನ ಪ್ರಭಾತದಲ್ಲಿನ ತಪ್ಪುಗಳನ್ನು ಗಮನಕ್ಕೆ ತಂದುಕೊಡುವುದು ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸತ್ಸಂಗವನ್ನು ತೆಗೆದುಕೊಂಡು ದಿಶೆ ನೀಡಿದ ನಂತರ ತಪ್ಪುಗಳಾಗುವುದರ ಹಿಂದಿನ ಸ್ವಭಾವದೋಷ ಮತ್ತು ಅಹಂ ಇವುಗಳ ಅನೇಕ ಅಡತಡೆಗಳು ಸಾಧಕರ ಗಮನಕ್ಕೆ ಬರುವುದು ಈ ಬಗೆಗಿನ ಭಾಗವನ್ನು ನೋಡಿದೆವು. ಈಗ ಮುಂದಿನ ಭಾಗವನ್ನು ನೋಡೋಣ.
(ಭಾಗ ೨ )
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/51043.html |
ಹೊಸ ಲೇಖನಮಾಲೆ‘ಸಾಧಕರೇ, ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಪರಿಪೂರ್ಣ ಸೇವೆಯನ್ನು ಮಾಡಿ !’ ಪರಾತ್ಪರ ಗುರು ಡಾ. ಆಠವಲೆಯವರು ದೈನಿಕ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರಿಂದ ತಪ್ಪುರಹಿತ ಮತ್ತು ಪರಿಪೂರ್ಣ ಸೇವೆ ಮಾಡಲು ಹೇಗೆ ಪ್ರಯತ್ನ ಮಾಡಿಸಿಕೊಂಡರು, ಎಂಬುದನ್ನು ಹೇಳುವ ಈ ಲೇಖನಮಾಲೆಯನ್ನು ಪ್ರಕಟಿಸುತ್ತಿದ್ದೇವೆ. ಈ ಲೇಖನಮಾಲೆಯಲ್ಲಿ ಅಂತರ್ಗತ ಪ್ರತ್ಯಕ್ಷ ತಪ್ಪುಗಳ ಉದಾಹರಣೆಗಳು ಮತ್ತು ಅವುಗಳಿಗೆ ಸಾಧಕರು ತೆಗೆದುಕೊಂಡ ಪ್ರಾಯಶ್ಚಿತ್ತಗಳನ್ನು ಮುಂದಿನ ಭಾಗದಲ್ಲಿ ಪ್ರಕಟಿಸಲಾಗುವುದು. |
೫. ಸಾಧಕರ ತಪ್ಪುಗಳ ಪ್ರಮಾಣವು ಕಡಿಮೆಯಾಗದಿರುವುದರಿಂದ ಪರಾತ್ಪರ ಗುರುದೇವರು ಮುಂದುಮುಂದಿನ ಹಂತದ ಮಾರ್ಗದರ್ಶನ ಮಾಡಿ ತಪ್ಪುಗಳನ್ನು ಸರಿಪಡಿಸಲು ಹೆಚ್ಚು ತೀವ್ರತೆಯಿಂದ ಪ್ರಕ್ರಿಯೆಯನ್ನು ಮಾಡಿಸಿಕೊಳ್ಳುವುದು
೫ ಈ. ‘ಸಾಧಕರ ನಡುವಳಿಕೆಯಲ್ಲಿ ತಪ್ಪುಗಳ ಬಗ್ಗೆ ಪಶ್ಚಾತ್ತಾಪವೆನಿಸುತ್ತದೆಯೇ ?’ಎಂದು ಕೇಳಿ ಅಂತರ್ಮುಖಗೊಳಿಸುವುದು : ನಾವು ತಪ್ಪು ಮತ್ತು ಪ್ರಾಯಶ್ಚಿತ್ತಗಳನ್ನು ಬರೆದ ಕಾಗದವನ್ನು ಪರಾತ್ಪರ ಗುರು ಡಾಕ್ಟರರ ಸೇವೆಯಲ್ಲಿನ ಸಾಧಕರ ಬಳಿ ಕೊಡುತ್ತಿದ್ದೆವು. ಆ ಸಾಧಕನು ಆ ಕಾಗದವನ್ನು ಪರಾತ್ಪರ ಗುರು ಡಾಕ್ಟರರಿಗೆ ಕೊಡುತ್ತಿದ್ದನು. ಅವರು ಆ ಸಾಧಕನಿಗೆ, “ತಪ್ಪುಗಳನ್ನು ಹೇಳುವಾಗ ದೈನಿಕಕ್ಕೆ ಸಂಬಂಧಪಟ್ಟ ಸೇವೆ ಮಾಡುವ ಸಾಧಕರು ನಗುತ್ತಿಲ್ಲವಲ್ಲ ? ಅವರ ಮುಖದಲ್ಲಿ ಪಶ್ಚಾತ್ತಾಪ ಕಾಣಿಸುತ್ತದೆಯೇ ? ಎಂದು ಕೇಳಿದರು. ಈ ರೀತಿಯಲ್ಲಿ ಅವರು ‘ನಮಗೆ ನಮ್ಮ ತಪ್ಪುಗಳು ಒಳಗಿನಿಂದ ಎಷ್ಟು ಅರಿವಾಗಬೇಕು ? ಎಂಬುದನ್ನು ಅವರು ಗಮನಕ್ಕೆ ತಂದುಕೊಡುತ್ತಿದ್ದರು.
೫ ಉ. ಒಮ್ಮೆ ಅವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ, “ನಾನು ದೈನಿಕವನ್ನು ಓದಿ ಅದರಲ್ಲಿನ ತಪ್ಪುಗಳನ್ನು ಗಮನಕ್ಕೆ ತಂದುಕೊಡಲು ೩-೪ ಗಂಟೆ ಸಮಯ ಕೊಡುತ್ತೇನೆ. ಆದರೂ ದೈನಿಕದಲ್ಲಿ ಇನ್ನೂ ತಪ್ಪುಗಳ ಪ್ರಮಾಣ ಏಕೆ ಕಡಿಮೆಯಾಗುತ್ತಿಲ್ಲ ?” ಎಂದು ಕೇಳಿದರು.
೫ ಊ. ತಪ್ಪುಗಳ ಪ್ರಮಾಣವು ಕಡಿಮೆಯಾಗದಿರುವುದರಿಂದ ಪರಾತ್ಪರ ಗುರು ಡಾಕ್ಟರರು ಸಾಧಕರ ಸ್ವಭಾವದೋಷ-ನಿರ್ಮೂಲನೆಯ ತಖ್ತೆಗಳನ್ನು ನೋಡಲು ತರಿಸಿಕೊಳ್ಳುವುದು : ದೈನಿಕಕ್ಕೆ ಸಂಬಂಧಪಟ್ಟ ಸೇವೆಯನ್ನು ಮಾಡುವ ಸಾಧಕರ ತಪ್ಪುಗಳು ಕಡಿಮೆಯಾಗುತ್ತಿಲ್ಲವೆಂದು ಒಮ್ಮೆ ಅವರು ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಬರೆದಿರುವ ತಖ್ತೆಯನ್ನು ನೋಡುವುದಕ್ಕಾಗಿ ಅದನ್ನು ಕೇಳಿದ್ದರು. ನಮ್ಮ ತಪ್ಪು ಕ್ರಿಯಮಾಣದಿಂದಾಗಿ ನಾವು ಆ ಅವಧಿಯಲ್ಲಿ ಸೇವೆ ಬಹಳ ಇರುವ ಕಾರಣಗಳನ್ನು ಹೇಳಿ ತಖ್ತೆ ಬರೆಯುವುದರಲ್ಲಿ ರಿಯಾಯತಿ ಪಡೆದಿದ್ದೆವು. ಆ ಅವಧಿಯಲ್ಲಿ ಸಾಧಕರು ಸುಮಾರು ೧೫ ದಿನ ತಖ್ತೆಯನ್ನು ಬರೆಯದ ಕಾರಣ ನಮಗೆ ತಖ್ತೆಯನ್ನು ತೋರಿಸಲು ಆಗಲಿಲ್ಲ. ಆದರೂ ಆ ಸಂದೇಶದ ಪರಿಣಾಮದಿಂದ ನಮಗೆ ನಮ್ಮಿಂದ ಸತತವಾಗಿ ೧೫ ದಿನಗಳಲ್ಲಿ ಆಗುತ್ತಿರುವ ಅಯೋಗ್ಯ ಕೃತಿಗಳ ಅರಿವಾಗತೊಡಗಿತು. ತುರ್ತು ಸೇವೆಯು ನಡೆಯುತ್ತಿದ್ದರೂ ಸಂದೇಶ ಸಿಕ್ಕಿದ ದಿನದಿಂದ ನಾವು ತಖ್ತೆಯನ್ನು ಬರೆಯಲು ಪ್ರಾರಂಭಿಸಿದೆವು !
೫ ಏ. ತಪ್ಪುಗಳಾಗದಿರುವ ಸಾಧಕರ ಹೆಸರುಗಳನ್ನು ಕೇಳುವುದು : ಒಮ್ಮೆ ಪರಾತ್ಪರ ಗುರು ಡಾಕ್ಟರರು, “ಸೇವೆಯಲ್ಲಿ ತಪ್ಪುಗಳು ಆಗದಿರುವ ಸಾಧಕರ ಹೆಸರುಗಳನ್ನು ತಿಳಿಸಿ,” ಎಂದು ಕೇಳಿದರು. ಈ ಪ್ರಶ್ನೆಯ ಉತ್ತರವು ನಮ್ಮನ್ನು ಅತ್ಯಂತ ನಾಚಿಸುವಂತಿತ್ತು. ಏಕೆಂದರೆ, ಪರಿಪೂರ್ಣ ಸೇವೆ ಮಾಡುವ ಒಬ್ಬ ಸಾಧಕನೂ ಇಲ್ಲ. ಎಲ್ಲರ ಸೇವೆಯಲ್ಲಿ ಬೇರೆಬೇರೆ ಹಂತಗಳಲ್ಲಿ ತಪ್ಪುಗಳಾಗುತ್ತಿವೆ.
೫ ಐ. ಸಾಧಕರ ತಪ್ಪುಗಳಿಗಾಗಿ ಜವಾಬ್ದಾರ ಸಾಧಕನಿಗೆ ಪ್ರಾಯಶ್ಚಿತ್ತ ತೆಗೆದುಕೊಳ್ಳಲು ಹೇಳುವುದು : ಒಮ್ಮೆ ಅವರು, ‘ಪ್ರಕ್ರಿಯೆಯು ದೀರ್ಘಕಾಲ ನಡೆಯುತ್ತಿದ್ದರೂ ಸಾಧಕರ ಸೇವೆಯಲ್ಲಿನ ತಪ್ಪುಗಳ ಪ್ರಮಾಣವು ಕಡಿಮೆಯಾಗುವುದಿಲ್ಲ; ಎಂದು ವಿಭಾಗದ ಜವಾಬ್ದಾರ ಸಾಧಕನಿಗೆ ಎಲ್ಲ ತಪ್ಪುಗಳಿಗೆ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಲು ಹೇಳಿದರು’, ಎಂದು ತಿಳಿಸಿದರು.
೬. ಪರಾತ್ಪರ ಗುರು ಡಾಕ್ಟರರು ಆರಂಭಿಸಿದ ಈ ಶುದ್ಧೀಕರಣ ಪ್ರಕ್ರಿಯೆಯಿಂದ ಸಾಧಕರಿಂದ ಕೆಲವು ಪ್ರಮಾಣದಲ್ಲಾದ ಸಾಧನೆಯ ಪ್ರಯತ್ನ
ಪರಾತ್ಪರ ಗುರು ಡಾಕ್ಟರರು ಸ್ವತಃ ಆರಂಭಿಸಿದ ಈ ಶುದ್ಧೀಕರಣ ಪ್ರಕ್ರಿಯೆಯ ಲಾಭವಾಯಿತೇನೆಂದರೆ, ಸಾಧಕರಿಗೆ ಸಾಧನೆಯ ಬಗೆಗಿನ ಗಾಂಭೀರ್ಯ ಹೆಚ್ಚಾಯಿತು. ಸದ್ಯ ಸಾಧಕರಿಂದ ಆಗುತ್ತಿರುವ ಪ್ರಯತ್ನಗಳನ್ನು ಮುಂದೆ ಸ್ವಲ್ಪ ಮಟ್ಟಿಗೆ ಕೊಟ್ಟಿದ್ದೇವೆ.
ಅ. ದೈನಿಕಕ್ಕೆ ಸಂಬಂಧಿಸಿದ ಸೇವೆಯನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸಬೇಕಾಗಿದ್ದರಿಂದ ಈ ಮೊದಲು ನಮಗೆ ಸಮಯವನ್ನು ಗಮನದಲ್ಲಿಟ್ಟು ಅವಸರದಲ್ಲಿ ಸೇವೆ ಮಾಡಿ ಮುಗಿಸುವ ರೂಢಿಯಾಗಿತ್ತು. ಅನೇಕಬಾರಿ ‘ನಮ್ಮಲ್ಲಿ ಸಾಧಕರ ಸಂಖ್ಯೆ ಕಡಿಮೆ ಇದೆ’, ಇದೂ ಒಂದು ಕಾರಣವಿತ್ತು. ಈಗ ‘ಇರುವ ಸಾಧಕರಲ್ಲಿ ಮತ್ತು ದೊರಕುವಷ್ಟು ಸಮಯದಲ್ಲಿ ತಪ್ಪುರಹಿತ ಸೇವೆಯನ್ನು ಹೇಗೆ ಮಾಡಬಹುದು ?’, ಎಂಬುದಕ್ಕಾಗಿ ಎಲ್ಲ ಸಾಧಕರು ಪ್ರಯತ್ನಿಸುತ್ತಿದ್ದಾರೆ.
ಆ. ‘ಸ್ವಂತ ಮನಸ್ಸಿನಿಂದ ನಿರ್ಧಾರ ತೆಗೆದುಕೊಂಡಿರುವುದರಿಂದ, ಹಾಗೆಯೇ ಸೇವೆಯನ್ನು ಕೇಳಿ ಮಾಡದಿರುವುದರಿಂದ ತಪ್ಪುಗಳಾಗುತ್ತಿವೆ’, ಎಂಬುದು ಗಮನಕ್ಕೆ ಬಂದ ನಂತರ ಸಾಧಕರಿಂದ ಕೇಳಿ ಮಾಡುವ ಪ್ರಯತ್ನಗಳು ಆಗುತ್ತಿವೆ.
ಇ. ಯಾವ ಸಾಧಕರಿಗೆ ಪೂರ್ವಗ್ರಹ ದೋಷದಿಂದ ಇತರ ಸಾಧಕರೊಂದಿಗೆ ಮಾತನಾಡಲು ಸಹ ಕಠಿಣವೆನಿಸುತ್ತಿತ್ತೋ ಅವರೂ ಈಗ ಸಮಷ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ; ಏಕೆಂದರೆ ‘ಮಾತನಾಡದಿದ್ದರೆ, ಸೇವೆಯಲ್ಲಿ ತಪ್ಪುಗಳಾಗುತ್ತವೆ’, ಎಂಬುದನ್ನು ಅವರು ಅನುಭವಿಸಿದರು.
ಈ. ‘ಸೇವೆಯ ಸಮಯದಲ್ಲಿ ಬಹಿರ್ಮುಖತೆಯಿಂದ ಮಾತನಾಡುವುದು, ಚೇಷ್ಟೆ-ತಮಾಷೆ ಮಾಡಿ ತನ್ನೊಂದಿಗೆ ಇತರರ ಏಕಾಗ್ರತೆಯನ್ನು ಹಾಳು ಮಾಡುವುದು’, ಇವುಗಳ ಮೇಲೆಯೂ ಸಾಧಕರು ಕಟ್ಟುನಿಟ್ಟಾಗಿ ಹಿಡಿತ ಸಾಧಿಸಿದ್ದಾರೆ.
ಉ. ತಪ್ಪುಗಳನ್ನು ತಡೆಯಲು ಎಲ್ಲ ಸಾಧಕರ ಪ್ರಯತ್ನವು ಕಂಡು ಬಂದಿರುವುದರಿಂದ ‘ಪರಸ್ಪರರಿಗೆ ಸಹಾಯ ಮಾಡುವುದು, ಅರ್ಥ ಮಾಡಿಕೊಳ್ಳುವುದು, ಕೆಲವು ಸಮಯದಲ್ಲಿ ನೇರವಾಗಿ ತಪ್ಪುಗಳನ್ನು ಹೇಳುವುದು’, ಇವುಗಳ ಪ್ರಮಾಣ ಹೆಚ್ಚಾಗಿದೆ. ಸಾಧಕರಲ್ಲಿ ಸಂಘಟಿತತನ ಹೆಚ್ಚುತ್ತಿದೆ. ಆದುದರಿಂದ ಸೇವೆಯ ಸ್ಥಳದಲ್ಲಿ ವಾತಾವರಣವು ಗಂಭೀರವಾಗಿರದೇ ಉತ್ಸಾಹವೆನಿಸುತ್ತಿದೆ.
ಒಟ್ಟಿನಲ್ಲಿ, ಮೇಲ್ನೋಟದಲ್ಲಿ ನೋಡಿದಾಗ ಶುದ್ಧಲೇಖನ ಮತ್ತು ವ್ಯಾಕರಣಗಳಂತಹ ತಪ್ಪುಗಳಿದ್ದರೂ, ಸಾಧಕರ ಅಂತರ್ ಬಾಹ್ಯ ಆಳವಾಗಿ ಮಂಥನ ನಡೆಯುತ್ತಿದೆ. ‘ದೈನಿಕದಲ್ಲಿ ಗಂಭೀರ ತಪ್ಪುಗಳಾಗುತ್ತಿಲ್ಲ’, ಇದರ ಅರ್ಥ ನಮ್ಮಿಂದ ಎಲ್ಲವೂ ಉತ್ತಮವಾಗಿ ನಡೆದಿದೆ’, ಎಂಬ ಭ್ರಮೆಯಿಂದ ನಾವು ಅನೇಕ ವರ್ಷಗಳನ್ನು ಕಳೆದುಕೊಂಡೆವು. ಸಾಕ್ಷಾತ್ ಗುರುದೇವರೇ ನಮ್ಮನ್ನು ಇದರಿಂದ ಹೊರಗೆ ತೆಗೆದರು. ‘ನಾವು ಸಾಧನೆಯಲ್ಲಿ ಕಡಿಮೆ ಬೀಳುತ್ತಿದ್ದೇವೆ’, ಎಂಬ ಅರಿವೂ ಈಗ ಬೇರೂರುತ್ತಿದೆ. ಈ ಹಂತದಿಂದ ಮುಂದೆ ಹೋಗಿ ಶ್ರೀ ಗುರುಗಳಿಗೆ ಅಪೇಕ್ಷಿತ ವೇಗದಿಂದ ನಮಗೆ ಸಾಧನೆಯನ್ನು ಮಾಡಬೇಕಾಗಿದೆ.
೭. ಒಂದೇ ಸಮಯದಲ್ಲಿ ಅನೇಕ ಸೇವೆಗಳು ನಡೆಯುತ್ತಿದ್ದರೂ ಪರಾತ್ಪರ ಗುರು ಡಾಕ್ಟರರ ಕೃಪೆಯಿಂದಾಗಿ ಎಲ್ಲ ಸೇವೆಗಳೂ ಸುಲಲಿತವಾಗಿ ನಡೆದಿರುವುದರಿಂದ ಬುದ್ಧಿಯ ಮಿತಿಯು ಸಾಧಕರ ಗಮನಕ್ಕೆ ಬರುವುದು
ಸೀಮಿತ ಸಾಧಕರ ಸಂಖ್ಯೆಯಲ್ಲಿ ದೈನಿಕದ ಸೇವೆಯ ಜೊತೆಗೆ ಇತರ ತುರ್ತು ಸೇವೆಗಳಿರುವಾಗ ‘ಅನೇಕ ಸೂಕ್ಷ್ಮ ಆಯಾಮಗಳೊಂದಿಗೆ ನಿಯಮಿತ ಸೇವೆ ಮಾಡುವುದು, ಆ ಕುರಿತು ಸಮನ್ವಯ ಮಾಡುವುದು, ಸತತವಾಗಿ ಆಗುವ ತಪ್ಪುಗಳಿಗೆ ಮುಂದಿನ ಪ್ರಕ್ರಿಯೆ ಮಾಡುವುದು, ನಮ್ಮ ಶಿಥಿಲ ಪ್ರವೃತ್ತಿಯಿಂದ ಮಧ್ಯದ ಕಾಲದಲ್ಲಿ ಅಸ್ತವ್ಯಸ್ತಗೊಂಡಿದ್ದ ಅನೇಕ ಸೇವೆಗಳನ್ನು ಸರಿಪಡಿಸುವ ಸಂದರ್ಭದಲ್ಲಿ ಪ್ರಕ್ರಿಯೆ ನಡೆಸುವುದು’, ಇವು ಸದ್ಯದ ಸ್ಥಿತಿಯಲ್ಲಿ ಅಸಾಧ್ಯವೇ ಆಗಿದೆ, ಆದರೂ ಗುರುದೇವರು ನಡೆಸುತ್ತಿರುವ ಪ್ರಕ್ರಿಯೆಯ ವೇಗವು ಕಡಿಮೆಯಾಗಲಿಲ್ಲ. ಎಲ್ಲ ಹಂತಗಳ ಸೇವೆಯು ಉತ್ತಮವಾಗಿ ನಡೆದಿವೆ. ಇದನ್ನು ನೋಡಿ ಗಮನಕ್ಕೆ ಬರುವುದೇನೆಂದರೆ, ಬುದ್ಧಿಯಿಂದ ವಿಚಾರ ಮಾಡಿ ಯಾವುದು ಅಸಾಧ್ಯವೆನಿಸುತ್ತದೆಯೋ, ಅದನ್ನು ಶ್ರೀ ಗುರುಗಳು ಕೇವಲ ಸಂಕಲ್ಪದಿಂದ ಸಹಜವಾಗಿ ಸಾಧ್ಯ ಮಾಡಿಕೊಡುತ್ತಾರೆ. ‘ನಾವು ದೇವರಿಗೆ ಶರಣಾಗಿ ಪರಿಸ್ಥಿತಿಯನ್ನು ಸ್ವೀಕರಿಸಿದರೆ, ದೇವರೇ ಇವೆಲ್ಲದರಿಂದ ನಿಧಾನವಾಗಿ ಮುಂದೆ ಕರೆದುಕೊಂಡು ಹೋಗುತ್ತಾರೆ’, ಎಂಬುದು ನಮಗೆ ಅನುಭವಿಸಲು ಸಿಕ್ಕಿತು. ನಿಜ ಹೇಳಬೇಕೆಂದರೆ ನಮ್ಮಲ್ಲಿ ಶರಣಾಗತಿಯೂ ಕಡಿಮೆ ಇದೆ, ಆದರೂ ಪರಾತ್ಪರ ಗುರು ಡಾಕ್ಟರರು ನಮ್ಮ ಮೇಲೆ ಕೃಪೆಯ ಮಳೆಯನ್ನೇ ಸುರಿಸುತ್ತಿದ್ದಾರೆ.
೮. ಶೀಘ್ರಗತಿಯಿಂದ ಸಮಷ್ಟಿಯವರೆಗೆ ಮಾರ್ಗದರ್ಶನ ತಲುಪಲು ಗ್ರಂಥ ಮತ್ತು ಲೇಖನಮಾಲೆಯನ್ನು ಪ್ರಾರಂಭಿಸಲು ಹೇಳಿ ಆ ಕುರಿತು ಬೆಂಬೆತ್ತುವುದು
‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರ ಮಾಧ್ಯಮದಿಂದ ಅನೇಕ ವರ್ಷಗಳಿಂದ ಒಂದೇ ಸೇವೆಯನ್ನು ಮಾಡುತ್ತಿದ್ದರೂ ಸಾಧನೆಯಲ್ಲಿ ಪ್ರಗತಿ ಆಗದಿರುವ ಹಿಂದಿನ ಕಾರಣಗಳು ಪರಾತ್ಪರ ಗುರು ಡಾಕ್ಟರರ ಗಮನಕ್ಕೆ ಬಂದಿತು. ‘ಈ ಪ್ರಕ್ರಿಯೆಯನ್ನು ಕೇವಲ ದೈನಿಕದ ಸಾಧಕರ ಸಾಧನೆಗೆ ವೇಗವನ್ನು ನೀಡುವುದಕ್ಕೆ ಸೀಮಿತವಾಗಿಡದೇ, ಎಲ್ಲ ಕಡೆಗಿನ ಸಾಧಕರಿಗೆ ಇದರ ಲಾಭವಾಗಬೇಕು’, ಎಂದು ಗುರುದೇವರ ತಳಮಳವಾಗಿದೆ. ಈ ಅಂಶಗಳನ್ನು ಸಮಷ್ಟಿಯವರೆಗೆ ಶೀಘ್ರಾತಿಶೀಘ್ರವಾಗಿ ತಲುಪಿಸಲು ಅವರು ಆಗ್ಗಿಂದಾದ ಈ ತಪ್ಪುಗಳ ಕುರಿತು ಗ್ರಂಥವನ್ನು ಸಿದ್ಧಪಡಿಸಲು ಹೇಳಿದರು. ನಾವು ನಿಯಮಿತವಾಗಿ ತಪ್ಪುಗಳು ಮತ್ತು ಪ್ರಾಯಶ್ಚಿತ್ತವನ್ನು ಬರೆದಿರುವ ಯಾವ ಕಾಗದವನ್ನು ಕಳುಹಿಸುತ್ತಿದ್ದೆವೋ, ‘ಆ ಕಾಗದದಲ್ಲಿರುವ ವಿಷಯಗಳನ್ನೂ ನೇರವಾಗಿ ಗ್ರಂಥದಲ್ಲಿ ತೆಗೆದುಕೊಳ್ಳುವಷ್ಟು ಶುದ್ಧ ಮತ್ತು ಪರಿಪೂರ್ಣವಾಗಿರಬೇಕು’, ಎಂದು ಹೇಳಿದರು. ಇವುಗಳ ಬಗ್ಗೆ ಅವರು ಕಟ್ಟುನಿಟ್ಟಾಗಿ ಗಮನ ಹರಿಸುತ್ತಿದ್ದರು. ಅವರ ಪ್ರೇರಣೆಯಿಂದ ಈ ಲೇಖನಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆ. ಈ ಅಂಕಣದಲ್ಲಿ ಪ್ರಕಟಿಸಲಾಗುವ ಲೇಖನವನ್ನು ಓದಿ ‘ಸೇವೆಯನ್ನು ಮಾಡುವಾಗ ಅದರೊಂದಿಗೆ ಏಕರೂಪವಾಗದಿದ್ದರೆ ಹೇಗೆ ತಪ್ಪುಗಳಾಗುತ್ತವೆ ಮತ್ತು ಅದನ್ನು ಹೇಗೆ ಪರಿಹರಿಸಬೇಕು ?’, ಎಂಬುದು ಗಮನಕ್ಕೆ ಬರುವುದು. ‘ಗುರುಕೃಪಾಯೋಗಾನುಸಾರ ಸಾಧನೆ’ ಇದು ವಿಹಂಗಮ ಸಾಧನಾಮಾರ್ಗವಾಗಿದೆ. ‘ಆಂತರಿಕ ಪ್ರೇರಣೆಯಿಂದ ಸಹಜವಾಗಿ ಸಾಧನೆಯನ್ನು ಮಾಡಿದರೆ, ಭಗವಂತನನ್ನು ಅನುಭವಿಸಲು ಸಾಧ್ಯವಾಗುತ್ತದೆ’, ಎಂಬುದನ್ನು ಅನೇಕ ಸಾಧಕರು ಅನುಭವಿಸಿದ್ದಾರೆ. ಆದರೂ ‘ಅನೇಕ ವರ್ಷಗಳು ಸಾಧನೆಯನ್ನು ಮಾಡುತ್ತಿದ್ದರೂ ಸಾಧಕರು ಆಂತರಿಕ ಸಾಧನೆಯ ಆನಂದ ಪಡೆಯಲು ಏಕೆ ವಂಚಿತರಾಗುತ್ತಾರೆ ?’, ಇದೂ ಈ ಲೇಖನಮಾಲೆಯನ್ನು ಓದಿ ಗಮನಕ್ಕೆ ಬರುವುದು.
– ಶ್ರೀ. ಭೂಷಣ ಕೆರಕರ (ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟ), ಸಹಸಂಪಾದಕರು, ಸನಾತನ ಪ್ರಭಾತ ನಿಯತಕಾಲಿಕೆಗಳು (೧೩.೮.೨೦೨೧)
೧. ದೈನಿಕ ‘ಸನಾತನ ಪ್ರಭಾತ’ದಲ್ಲಿನ ವ್ಯಾಕರಣ ಮತ್ತು ವಾಕ್ಯರಚನೆಗಳಂತಹ ಚಿಕ್ಕ ಚಿಕ್ಕ ತಪ್ಪುಗಳ ಅಧ್ಯಯನ ಮಾಡುವುದರ ಹಿಂದಿನ ಕಾರಣದೈನಿಕ ‘ಸನಾತನ ಪ್ರಭಾತ’ದಲ್ಲಿ ‘ತಪ್ಪು ವಾರ್ತೆಗಳು ಪ್ರಕಟವಾದವು, ಎಂಬಂತಹ ಗಂಭೀರ ತಪ್ಪುಗಳಾಗುವುದಿಲ್ಲ, ವ್ಯಾಕರಣ ಮತ್ತು ವಾಕ್ಯರಚನೆಗಳಂತಹ ತಪ್ಪುಗಳಾಗುತ್ತವೆ. ಈ ತಪ್ಪುಗಳಿಂದ ವಾಚಕರಿಗೆ ಯಾವುದೇ ಹಾನಿಯಾಗುವುದಿಲ್ಲ. ಇದರಿಂದ ಕಳೆದ ೧೦-೧೫ ವರ್ಷಗಳಿಂದ ದೈನಿಕ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರ ಪ್ರಗತಿಯು ಬೇಗನೆ ಆಗುವುದಿಲ್ಲ. ಅವರ ಜೀವನದಲ್ಲಿನ ಸಾಧನೆಯ ಸಮಯ ಈ ತಪ್ಪುಗಳಿಂದಾಗಿ ವ್ಯರ್ಥವಾಗಬಾರದೆಂದು, ನಾನು ಈ ತಪ್ಪುಗಳ ಅಧ್ಯಯನವನ್ನು ಮಾಡುತ್ತಿದ್ದೇನೆ. ೨ ಸಾಧಕರೇ, ನೀವು ಸಹ ಈ ಪದ್ಧತಿಯಿಂದ ನಿಮ್ಮ ಸೇವೆಯಲ್ಲಿನ ತಪ್ಪುಗಳ ಅಧ್ಯಯನ ಮಾಡಿದರೆ ನಿಮ್ಮ ಆಧ್ಯಾತ್ಮಿಕ ಪ್ರಗತಿಯೂ ಶೀಘ್ರ ಗತಿಯಲ್ಲಿ ಆಗುವುದು !‘ದೈನಿಕ ‘ಸನಾತನ ಪ್ರಭಾತ’ದ ಸಾಧಕರು ತಮ್ಮ ಸೇವೆಯಿಂದ ತಮ್ಮ ಸಾಧನೆಯಾಗಬೇಕೆಂದು ತಮ್ಮ ತಪ್ಪುಗಳನ್ನು ಗಾಂಭೀರ್ಯದಿಂದ ತಿಳಿದುಕೊಂಡು ಅವುಗಳನ್ನು ದೂರಗೊಳಿಸಲು ಪ್ರಯತ್ನಿಸುತ್ತಿದ್ದಾರೆ, ಎಂಬುದು ಈ ಲೇಖನಮಾಲೆಯಿಂದ ಗಮನಕ್ಕೆ ಬರುವುದು. ಇದೇ ರೀತಿ ಗ್ರಂಥ, ಕಲಾ, ಸಂಗೀತ, ಲೆಕ್ಕಪತ್ರ, ಧ್ವನಿ-ಚಿತ್ರೀಕರಣ, ಸಂಶೋಧನೆ, ಪ್ರಸಾರ ಇತ್ಯಾದಿ ಸೇವೆಗಳನ್ನು ಮಾಡುವವರು ಮತ್ತು ಇತರ ಎಲ್ಲ ಸಾಧಕರು ತಮ್ಮ ಸೇವೆಗಳಿಗೆ ಸಂಬಂಧಪಟ್ಟ ತಪ್ಪುಗಳನ್ನು ಗಮನದಲ್ಲಿ ತೆಗೆದುಕೊಂಡು ಅಂತರ್ಮುಖರಾಗಿ ಅವುಗಳಿಗೆ ಈ ಪದ್ಧತಿಯಂತೆ ಪ್ರಕ್ರಿಯೆಯನ್ನು ಮಾಡಿದರೆ ಅವರ ತಪ್ಪುಗಳು ಸಹ ಕಡಿಮೆಯಾಗುವವು ಮತ್ತು ಅವರ ಆಧ್ಯಾತ್ಮಿಕ ಉನ್ನತಿಯೂ ಶೀಘ್ರ ಗತಿಯಲ್ಲಾಗುವುದು. – (ಪರಾತ್ಪರ ಗುರು) ಡಾ. ಆಠವಲೆ, ಸಂಸ್ಥಾಪಕ-ಸಂಪಾದಕರು, ‘ಸನಾತನ ಪ್ರಭಾತ’ |
ಕ್ಷಮಾಯಾಚನೆ ಮತ್ತು ಪ್ರಾರ್ಥನೆ‘ಪರಾತ್ಪರ ಗುರು ಡಾ. ಆಠವಲೆಯವರು ‘ಸಚ್ಚಿದಾನಂದ ಪರಬ್ರಹ್ಮ ಆಗಿದ್ದಾರೆ’, ಎಂದು ಮಹರ್ಷಿಗಳು ಹೇಳಿದ್ದಾರೆ. ಅವರ ಅವತಾರೀ ಕಾರ್ಯವು ನಡೆಯುತ್ತಿದೆ. ಆದರು ಸಹ ನಮ್ಮೆಲ್ಲ ಸಾಧಕರನ್ನು ಮುಂದಿನ ಹಂತದಲ್ಲಿ ಕರೆದೊಯ್ಯಲು ಅವರು ಪುನಃ ಗುರು ರೂಪದಲ್ಲಿ ಬಂದು ಕಾರ್ಯವನ್ನು ಮಾಡುತ್ತಿದ್ದಾರೆ. ‘ಹೇ ಗುರುದೇವಾ, ‘ತಮ್ಮ ಮಾರ್ಗದರ್ಶನವು ದೀರ್ಘಕಾಲದಿಂದ ಲಭಿಸುತ್ತಿದ್ದರೂ ನಮಗೆ ಇದುವರೆಗೂ ತಮಗೆ ಅಪೇಕ್ಷಿತ ಸಾಧನೆಯನ್ನು ಮಾಡಲು ಆಗಲಿಲ್ಲ, ಇದಕ್ಕಾಗಿ ನಾವು ತಮ್ಮ ಚರಣಗಳಲ್ಲಿ ಕ್ಷಮೆ ಯಾಚನೆ ಮಾಡುತ್ತೇವೆ. ನಮಗಾಗಿ ತಾವು ತೆಗೆದುಕೊಳ್ಳುತ್ತಿರುವ ಕಷ್ಟಗಳಿಗೆ ಮಿತಿಯೇ ಇಲ್ಲ ಗುರುದೇವಾ ! ನಮ್ಮೆಲ್ಲ ಸಾಧಕರಿಗೆ ತಮ್ಮ ಚರಣಗಳ ಕೃಪೆಯನ್ನು ಅನುಭವಿಸುವ ಭಾಗ್ಯವು ಲಭಿಸಲಿ, ಇದೇ ತಮ್ಮಲ್ಲಿ ಪ್ರಾರ್ಥನೆ ಮಾಡುತ್ತೇವೆ’. – ಶ್ರೀ. ಭೂಷಣ ಕೆರಕರ |