ಸನಾತನ ಸಂಸ್ಥೆಯ ವತಿಯಿಂದ ಭಾರತದಾದ್ಯಂತ ನಡೆಸಲಾಗುತ್ತಿರುವ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ನಿಮಿತ್ತ
‘ಗುರುಕೃಪೆಯಿಂದ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಮಷ್ಟಿ ಸಂತರು) ಇವರ ಮಾರ್ಗದರ್ಶಕ್ಕನುಸಾರ ಕರ್ನಾಟಕ ರಾಜ್ಯದಲ್ಲಿ ೧.೯.೨೦೨೧ ರಿಂದ ೩೧.೧೦.೨೦೨೧ ಈ ಕಾಲಾವಧಿಯಲ್ಲಿ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ. ಹಿಂದಿನ ಲೇಖನದಲ್ಲಿ ಪೂ. ರಮಾನಂದ ಗೌಡ ಇವರಿಗೆ ಈ ಅಭಿಯಾನದ ಸಂಕಲ್ಪನೆ ಹೇಗೆ ಹೊಳೆಯಿತು ?, ಅವರು ತಳಮಳದಿಂದ ಮತ್ತು ಪರಿಶ್ರಮ ತೆಗೆದುಕೊಂಡು ಈ ಅಭಿಯಾನದ ನಿಯೋಜನೆಯನ್ನು ಹೇಗೆ ಮಾಡಿದರು ? ಮತ್ತು ಅದರಿಂದ ನಮಗೆ ಯಾವ ಅಂಶಗಳು ಕಲಿಯಲು ಸಿಕ್ಕಿದವು ?’ ಎಂಬ ಬಗ್ಗೆ ಕೊಡಲಾಗಿತ್ತು. ಈ ಲೇಖನದಲ್ಲಿ ಪೂ. ರಮಾನಂದ ಗೌಡ ಇವರು ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ವು ಯಶಸ್ವಿಯಾಗಲೆಂದು ಪ್ರತಿಯೊಂದು ಹಂತದ ಸೇವೆಗಳ ಚಿಂತನೆಯನ್ನು ಹೇಗೆ ಮಾಡಬೇಕು ?’ ಈ ಬಗ್ಗೆ ಮಾಡಿದ ಮಾರ್ಗದರ್ಶನವನ್ನು ಕೊಡಲಾಗಿದೆ.
(ಭಾಗ – ೩)
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/52054.html |
೧. ಗ್ರಂಥಗಳ ‘ಕಿಟ್’ಗಳನ್ನು ತಯಾರಿಸುವುದು
೧ ಅ. ಗ್ರಂಥಮಾಲಿಕೆಯ ವಿಷಯಾನುಸಾರ ‘ಕಿಟ್’ಗಳು
೧. ಮುಂಬರುವ ಪೀಳಿಗೆಯು ಸುಸಂಸ್ಕಾರಯುತವಾಗಬೇಕು
೨. ವ್ಯಕ್ತಿತ್ವ ವಿಕಾಸ ಮತ್ತು ಒತ್ತಡಮುಕ್ತ ಜೀವನ, ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ
೩. ಆರೋಗ್ಯ ಮತ್ತು ಆಯುರ್ವೇದ
೪. ಆಪತ್ಕಾಲೀನ ಸಂಜೀವಿನಿ
೫. ಕನ್ನಡ ಸಹಿತ ಇತರ ಭಾಷೆಗಳಲ್ಲಿ (ಹಿಂದಿ, ಮರಾಠಿ, ಆಂಗ್ಲ, ತಮಿಳು, ತೆಲುಗು, ಮಲಯಾಳಮ್, ಗುಜರಾತಿ, ಓಡಿಶಾ ಇತ್ಯಾದಿ ಭಾಷೆಗಳಲ್ಲಿ) ಲಭ್ಯವಿರುವ ಗ್ರಂಥಗಳ ಪಟ್ಟಿ ಮತ್ತು ಕೆಲವು ಭಾಷೆಯ ಗ್ರಂಥಗಳ ‘ಕಿಟ್’ಗಳನ್ನು ತಯಾರಿಸಿದೆವು.
೧ ಆ. ಮೌಲ್ಯಕ್ಕನುಸಾರ ‘ಕಿಟ್’ಗಳು : ‘ಪ್ರತಿಯೊಬ್ಬರಿಗೆ ಅತ್ಯಾವಶ್ಯಕವಾಗಿರುವ ಗ್ರಂಥಗಳು ಸಿಗಬೇಕು’ ಎಂಬುದಕ್ಕಾಗಿ ೧ ಸಾವಿರ, ೨ ಸಾವಿರ, ೩ ಸಾವಿರ, ೫ ಸಾವಿರ ರೂಪಾಯಿಗಳ ‘ಕಿಟ್’ ಮತ್ತು ಪೂರ್ಣ ಗ್ರಂಥಗಳ ‘ಕಿಟ್’ ಹೀಗೂ ವಿಭಜನೆ ಮಾಡಿದೆವು. ‘ಈ ‘ಕಿಟ್’ಗಳಲ್ಲಿ ಯಾವೆಲ್ಲ ಗ್ರಂಥಗಳಿರಬೇಕು ?’ ಎಂದು ನಿಶ್ಚಿಯಿಸಿ ಅದರ ಒಂದು ಪಟ್ಟಿಯನ್ನು ತಯಾರಿಸಿದೆವು.
೨. ‘ಯಾರಿಂದ ಗ್ರಂಥಗಳ ಬೇಡಿಕೆಯನ್ನು ಪಡೆಯಬಹುದು ?’ ಎಂಬುದರ ಚಿಂತನೆ ಮಾಡಿದೆವು.
೩. ‘ಸಂಪರ್ಕ ಮಾಡುವ ಪ್ರತಿಯೊಬ್ಬ ಸಾಧಕನ ಬಳಿ ಯಾವೆಲ್ಲ ಸಾಹಿತ್ಯಗಳಿರಬೇಕು ?’ ಎಂದು ನಿರ್ಧರಿಸಿದೆವು.
೪. ಆಯೋಜನೆ, ಪ್ರಸಾರ, ಪ್ರಸಿದ್ಧಿ ಮತ್ತು ‘ಸೋಶಿಯಲ್ ಮೀಡಿಯಾ’ ಈ ಸೇವೆಗಳಿಗೆ ಸಂಬಂಧಿಸಿದ ನಿಯೋಜನೆ
ಅ. ವಿಷಯಕ್ಕನುಸಾರ ಗ್ರಂಥಗಳ ಮಾಹಿತಿಯನ್ನು ಒಂದು ‘ಪವರ್ ಪಾಯಿಂಟ್ ಪ್ರೆಸೆಂಟೇಶನ್’ (ಪಿಪಿಟಿ ಮೂಲಕ ಮಾಹಿತಿಯನ್ನು ಮಂಡಿಸುವ ಒಂದು ಗಣಕೀಯ ಪದ್ಧತಿ) ಮೂಲಕ ಮಂಡಣೆ ಮಾಡಲು ಸಿದ್ಧತೆ ಮಾಡಿದೆವು.
ಆ. ಅಭಿಯಾನದ ಬಗ್ಗೆ ಪ್ರಸಾರ ಮಾಡಲು ದೂರಚಿತ್ರವಾಹಿನಿಗಳು, ಆಕಾಶವಾಣಿ (ರೇಡಿಯೋ), ‘ಎಫ್.ಎಮ್.’ನಲ್ಲಿ ಮಾತನಾಡಲು ನಿಯೋಜನೆಯನ್ನು ಮಾಡಿದೆವು.
ಇ. ‘ಟ್ವಿಟರ್’, ‘ಯುಟ್ಯೂಬ್’, ದೂರದರ್ಶನವಾಹಿನಿಗಳು, ಗ್ರಂಥಗಳ ವಿಷಯಕ್ಕೆ ಸಂಬಂಧಿಸಿದ ಪತ್ರಿಕಾಪ್ರಕಟಣೆ, ಫಲಕಪ್ರಸಿದ್ಧಿ ಇವುಗಳ ಮೂಲಕ ಅಭಿಯಾನದ ಪ್ರಸಾರದ ನಿಯೋಜನೆಯನ್ನು ಮಾಡಿದೆವು.
ಇ. ‘ಗ್ರಂಥಗಳ ಉಪಯುಕ್ತತೆ, ಮಹತ್ವ ಮತ್ತು ಗ್ರಂಥಗಳನ್ನು ಓದಿ ಬದಲಾವಣೆ ಹೇಗೆ ಆಗುತ್ತದೆ ?’ ಎಂಬ ಬಗ್ಗೆ ‘ವಿಡಿಯೋ ಬೈಟ್ಸ್’ (ಸಣ್ಣ ಸಂದರ್ಶನ ಅಥವಾ ಒಬ್ಬ ವ್ಯಕ್ತಿಯು ನೀಡಿದ ಮಾಹಿತಿ) ತಯಾರಿಸುವ ನಿಯೋಜನೆಯನ್ನು ಮಾಡಿದೆವು, (ಚಿಕ್ಕ ಮಕ್ಕಳು, ಹಿಂದುತ್ವನಿಷ್ಠರು, ಪ್ರತಿಷ್ಠಿತ ವ್ಯಕ್ತಿಗಳು, ಡಾಕ್ಟರ್, ಉದ್ಯಮಿಗಳ ‘ವಿಡಿಯೋ ಬೈಟ್ಸ್’ ತೆಗೆದುಕೊಳ್ಳುವ ನಿಯೋಜನೆಯನ್ನು ಮಾಡಿದೆವು) ಅದರಂತೆ ಚಿಕ್ಕ ಚಿಕ್ಕ ‘ವಿಡಿಯೋ ಬೈಟ್ಸ್’ ತಯಾರಿಸಿ ಅದನ್ನು ಪ್ರಸಾರ ಮಾಡಲು ನಿರ್ಧರಿಸಲಾಯಿತು.
ಉ. ಸಾಧಕರಿಗೆ ಗ್ರಂಥದ ಮಹತ್ವವನ್ನು ತಿಳಿಸುವಂತಹ ವಿಡಿಯೋ ತಯಾರಿಸಿ ಅದನ್ನು ಪ್ರಸಾರ ಮಾಡುವ ಆಯೋಜನೆಯನ್ನು ಮಾಡಿದೆವು.
೫. ಪೂ. ರಮಾನಂದ ಗೌಡ ಇವರು ಒಂದು ‘ಚಿಂತನ ಸತ್ಸಂಗ’ ತೆಗೆದುಕೊಂಡು ಈ ಸೇವೆ ಸುನಿಯೋಜಿತವಾಗಿ ಆಗಲು ಮುಂದಿನ ದಿಶೆ ನೀಡುವುದು
ಅ. ಎಲ್ಲ ಸೇವೆಗಳ ವರದಿಯನ್ನು ತೆಗೆದುಕೊಳ್ಳುವ ಪದ್ಧತಿಯನ್ನು ನಿರ್ಧರಿಸಬೇಕು.
ಆ. ಆಯಾ ದಿನದ ಸೇವೆಯಲ್ಲಾದ ತಪ್ಪುಗಳು ಮತ್ತು ಬಂದ ಅಡಚಣೆಗಳು ಗಮನಕ್ಕೆ ಬಂದು ಅದಕ್ಕೆ ಉಪಾಯಯೋಜನೆಯನ್ನು ತೆಗೆಯಬಹುದು. ಇದರಿಂದ ಫಲಶೃತಿ ಹೆಚ್ಚಾಗಿ ನಿಯೋಜನೆಯು ಒಳ್ಳೆಯ ರೀತಿಯಲ್ಲಿ ಆಗಬಹುದು.
೬. ಅಭಿಯಾನ ನಡೆಸುವಾಗ ವ್ಯಷ್ಟಿ ಸಾಧನೆ ಉತ್ತಮವಾಗಿ ಆಗುವ ದೃಷ್ಟಿಯಿಂದ ಸಾಧಕರಿಗೆ ಮಾಡಲು ಹೇಳಿದ ಪ್ರಯತ್ನ
ಅ. ಸಾಧಕರು ತಮ್ಮ ೪ ಸ್ವಭಾವದೋಷಗಳು, ೨ ಅಹಂ ಲಕ್ಷಣಗಳನ್ನು ದೂರಗೊಳಿಸಲು ನಿರ್ಧರಿಸಿ ಪ್ರಯತ್ನಿಸಬೇಕು.
ಆ. ಸಾಧಕರು ‘ತಳಮಳ ಮತ್ತು ಪ್ರೇಮಭಾವ’ ಈ ಗುಣಗಳ ವೃದ್ಧಿಗಾಗಿ ಪ್ರಯತ್ನಿಸಬೇಕು.
ಇ. ಸಾಧಕರು ‘ಕೃತಜ್ಞತಾಭಾವ ಮತ್ತು ಸಮರ್ಪಣಾಭಾವ’ ವೃದ್ಧಿಸಲು ಪ್ರಯತ್ನಿಸಬೇಕು.
೭. ಪ್ರತಿಯೊಬ್ಬ ಸಾಧಕನಲ್ಲಿ ಜಾಗೃತಿಯನ್ನು ಮೂಡಿಸಲು ಮಾಡಿದ ಪ್ರಯತ್ನ
೭ ಅ. ಸತ್ಸಂಗದಲ್ಲಿ ಸಾಧಕರಿಗೆ ಇತರರಿಗೆ ‘ಗ್ರಂಥ ಅಭಿಯಾನ ಮತ್ತು ಗ್ರಂಂಥಗಳ ಮಹತ್ವವನ್ನು ಹೇಗೆ ಹೇಳಬೇಕು ? ಮತ್ತು ವೈಯಕ್ತಿಕವಾಗಿ ಹೇಗೆ ಧ್ಯೇಯವಿಡಬೇಕು ?’ ಎಂಬ ಬಗ್ಗೆ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು : ಪ್ರತಿಯೊಬ್ಬ ಸಾಧಕನವರೆಗೆ ಅಭಿಯಾನದ ವಿಷಯ ತಲುಪುವುದು ಮಹತ್ವದ್ದಾಗಿತ್ತು. ಇದಕ್ಕಾಗಿ ಎಲ್ಲ ಸಾಧಕರಿಗಾಗಿ ಸಂತರ ಮಾರ್ಗದರ್ಶನದ ಆಯೋಜನೆಯನ್ನು ಮಾಡಲಾಯಿತು. ಈ ಸತ್ಸಂಗದಲ್ಲಿ ಎಲ್ಲ ಸಾಧಕರಿಗೆ ‘ಗ್ರಂಥ ಅಭಿಯಾನದ ಮಹತ್ವ ಮತ್ತು ಗ್ರಂಥಗಳ ಮಹತ್ವವನ್ನು ಇತರರಿಗೆ ಹೇಗೆ ಹೇಳಬೇಕು ?, ನಮ್ಮ ಬಳಿ ಯಾವ ಮಾಹಿತಿ ಇರಬೇಕು ? ನಾವು ಯಾರಿಗೆಲ್ಲ ಸಂಪರ್ಕ ಮಾಡಬಹುದು ? ವೈಯಕ್ತಿಕ ಸ್ತರದಲ್ಲಿ ಹೇಗೆ ಧ್ಯೇಯವಿಡಬಹುದು ಮತ್ತು ಲೆಕ್ಕಪತ್ರದ ದೃಷ್ಟಿಯಿಂದ ಹೇಗೆ ಕಾಳಜಿ ವಹಿಸಿ ಈ ಸೇವೆಯನ್ನು ಮಾಡಬೇಕು ?’ ಇದಕ್ಕೆ ಸಂಬಂಧಿಸಿದ ವಿಷಯವನ್ನು ತೆಗೆದುಕೊಂಡಿದ್ದೆವು.
೭ ಆ. ಪೂ. ರಮಾನಂದ ಗೌಡ ಇವರು ‘ಪ್ರತಿಯೊಬ್ಬ ಸಾಧಕನು ಶ್ರಮವಹಿಸಿ ಹೇಗೆ ಸೇವೆ ಮಾಡಬೇಕು ಮತ್ತು ಸಾಧನೆಯ ದೃಷ್ಟಿಯಿಂದ ಎಲ್ಲರೂ ಹೇಗೆ ಪ್ರಯತ್ನಿಸಬೇಕು ?’ ಎಂಬ ಬಗ್ಗೆ ಮಾರ್ಗದರ್ಶನ ಮಾಡುವುದು : ಪೂ. ರಮಾನಂದಅಣ್ಣನವರು ‘ಪ್ರತಿಯೊಬ್ಬ ಸಾಧಕನು ಪರಿಶ್ರಮ ವಹಿಸಿ ಈ ಸೇವೆಯನ್ನು ಹೇಗೆ ಮಾಡಬೇಕು ? ಸಾಧನೆಯ ದೃಷ್ಟಿಯಿಂದ ಸೇವೆಯಲ್ಲಿ ಸಮಯವನ್ನು ನೀಡಿ ಕೊಡುಗೆಯನ್ನು ನೀಡಿದರೆ ಮತ್ತು ಈ ಜ್ಞಾನಶಕ್ತಿಯನ್ನು ಮನೆಮನೆಗಳಲ್ಲಿ ತಲುಪಿಸಲು ತಳಮಳದಿಂದ ಭಾವದಿಂದ ಮತ್ತು ಪರಿಶ್ರಮ ಪಟ್ಟು ಮಾಡಿದರೆ, ನಮ್ಮ ಸಾಧನೆ ಹೇಗಾಗಬಲ್ಲದು ? ಸಮಾಜಕ್ಕೆ ಹೋಗುವಾಗ ನಮ್ಮ ಆದರ್ಶ ಆಚರಣೆಯು ಹೇಗಿರಬೇಕು ? ಇದಕ್ಕಾಗಿ ನಮ್ಮಲ್ಲಿ ಯಾವ ಯಾವ ಗುಣಗಳಿರಬೇಕು, ಹಾಗೆಯೇ ನಮ್ಮ ಸ್ವಂತದ ವ್ಯಷ್ಟಿ ಸಾಧನೆಯ ದೃಷ್ಟಿಯಿಂದ ಎಲ್ಲರೂ ಹೇಗೆ ಪ್ರಯತ್ನಿಸಬೇಕು ?’ ಎಂಬ ಬಗ್ಗೆ ಮಾರ್ಗದರ್ಶನ ಮಾಡಿದರು.
೮. ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಿಂದ ಇಡೀ ರಾಜ್ಯದಲ್ಲಿ ಜ್ಞಾನಶಕ್ತಿ ಪ್ರಸಾರ ಅಭಿಯಾನದ ವಾತಾವರಣ ಮೂಡುವುದು ಮತ್ತು ಎಲ್ಲ ಸಾಧಕರು ಉತ್ಸಾಹದಿಂದ ಸೇವೆ ಆರಂಭಿಸುವುದು
ಪೂ. ಅಣ್ಣನವರ ಮಾರ್ಗದರ್ಶನದಿಂದ ಇಡೀ ರಾಜ್ಯದಲ್ಲಿ ಅಭಿಯಾನದ ವಾತಾವರಣವು ನಿರ್ಮಾಣವಾಯಿತು. ಈ ಸೇವೆಯನ್ನು ಯಾವಾಗ ಆರಂಭಿಸಬೇಕು ? ಎಂಬ ತಳಮಳವು ಸಾಧಕರಲ್ಲಿ ನಿರ್ಮಾಣವಾಯಿತು ಮತ್ತು ಎಲ್ಲರೂ ಉತ್ಸಾಹದಿಂದ ಸೇವೆ ಆರಂಭಿಸಿದರು. ಪೂ. ರಮಾನಂದ ಗೌಡ ಇವರು ‘ಅಭಿಯಾನದ ಈ ಸೇವೆಯನ್ನು ಹೇಗೆ ಮಾಡಬೇಕು ?’ ಈ ಬಗೆಗಿನ ಎಲ್ಲ ತಯಾರಿಯನ್ನು ಮಾಡಿಕೊಟ್ಟಿದ್ದರಿಂದ ‘ಈಗ ಕೇವಲ ನಮಗೆ ಮಾಧ್ಯಮವಾಗಿ ಸೇವೆ ಮಾಡಬೇಕಿದೆ, ಎಂದು ಸಾಧಕರಿಗೆ ಅನಿಸುತ್ತಿತ್ತು.
೯. ಪೂ. ರಮಾನಂದ ಗೌಡ ಇವರು ಪ್ರತಿಷ್ಠಿತರೊಂದಿಗೆ ಮಾತನಾಡುವುದು ಮತ್ತು ಅವರ ಪರಿಣಾಮ
೯ ಅ. ಪೂ. ರಮಾನಂದ ಗೌಡ ಇವರು ಕೆಲವು ಪ್ರತಿಷ್ಠಿತರೊಂದಿಗೆ ಚರ್ಚಿಸಿ ‘ಗ್ರಂಥ ಅಭಿಯಾನದಲ್ಲಿ ಹೇಗೆ ಯೋಗದಾನ ನೀಡಬಹುದು ?’ ಎಂಬ ಬಗ್ಗೆ ಮಾರ್ಗದರ್ಶನ ಮಾಡುವುದು : ಪೂ. ಅಣ್ಣಾನವವರು ಕೆಲವು ಧರ್ಮಪ್ರೇಮಿಗಳು, ಉದ್ಯಮಿಗಳು, ಅಭಿಯಂತ (ಇಂಜಿನೀಯರ್), ಕಾರ್ಖಾನೆಯ ಮಾಲೀಕರೊಂದಿಗೆ ಅಭಿಯಾನದ ಬಗ್ಗೆ ಚರ್ಚೆ ಮಾಡಿದರು. ಪೂ. ಅಣ್ಣನವರು ಅವರಿಗೆ ‘ಗ್ರಂಥಗಳ ಮಹತ್ವ, ಗ್ರಂಥದಲ್ಲಿ ನೀಡಿದ ಜ್ಞಾನಕ್ಕನುಸಾರ ಆಚರಣೆ ಮಾಡಿದರೆ ಏನು ಲಾಭವಾಗುತ್ತದೆ ? ನಾವೆಲ್ಲರೂ ಈ ಅಭಿಯಾನದಲ್ಲಿ ಹೇಗೆ ಕೊಡುಗೆ ನೀಡಬಹುದು ?’ ಎಂಬ ಬಗ್ಗೆ ಮಾರ್ಗದರ್ಶನ ಮಾಡಿದರು. ಪೂ, ಅಣ್ಣನವರು ಸಾಧನೆಯ ದೃಷ್ಟಿಯಿಂದ ಮುಂದಿನ ದಿಶೆಯನ್ನು ನೀಡಿದರು.
೯ ಆ. ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಿಂದ ಎಲ್ಲರಿಗೆ ಪ್ರೇರಣೆ ದೊರೆಯುವುದು : ಮೇಲಿನವರಿಗೆ ‘ಸಂತರ ಮಾರ್ಗದರ್ಶನ ಸಿಕ್ಕಿತು’ ಈ ಬಗ್ಗೆ ಅವರಿಗೆ ತುಂಬಾ ಕೃತಜ್ಞತೆ ಎನಿಸಿತು ಮತ್ತು ಪ್ರೇರಣೆಯೂ ದೊರಕಿತು. ಅವರು ತಾವಾಗಿಯೇ ಒಳ್ಳೆಯ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಿದರು ಮತ್ತು ಸಂರ್ಪಕದ ನಿಯೋಜನೆಯನ್ನು ಮಾಡಿದರು. ಇದರಿಂದ ಅತ್ಯುತ್ತಮ ಸ್ಪಂದನ ದೊರೆಯಿತು. ಇವರೆಲ್ಲರು ಪ್ರತಿದಿನ ತಳಮಳದಿಂದ ಪ್ರಯತ್ನಿಸುತ್ತಿದ್ದಾರೆ.
೧೦. ಪೂ. ರಮಾನಂದ ಗೌಡ ಇವರು ಸಾಧಕರಿಗೆ ಅಭಿಯಾನದ ಸೇವೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸುವುದು
‘ಯಾರೂ ಈ ಸೇವೆಯಿಂದ ವಂಚಿತರಾಗಿ ಉಳಿಯಬಾರದು’ ಎಂದು ಅಭಿಯಾನವು ಆರಂಭವಾದ ನಂತರ ೧೦ ದಿನಗಳ ನಂತರ ಪೂ. ರಮಾನಂದ ಗೌಡ ಇವರು ವಿವಿಧೆಡೆಯ ಸಾಧಕರಿಗೆ ಅಭಿಯಾನದ ಸೇವೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಿದರು. ಆದ್ದರಿಂದ ಎಲ್ಲರಲ್ಲಿ ಸೇವೆ ಮಾಡುವ ಆತ್ಮವಿಶ್ವಾಸವು ಹೆಚ್ಚಾಯಿತು.
– ಶ್ರೀ. ಕಾಶಿನಾಥ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೯), ಸೌ. ಮಂಜುಳಾ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೫) ಮತ್ತು ಶ್ರೀ. ವಿಜಯ ರೇವಣಕರ (ಆಧ್ಯಾತ್ಮಿಕ ಮಟ್ಟ ಶೇ. ೬೫). (ಅಕ್ಟೋಬರ್ ೨೦೨೧)