ಲಕ್ಷ್ಮೀಪೂಜೆ (ಅಕ್ಟೋಬರ್ ೩೦)

ಸುಖ-ಸಂಪತ್ತು ವೃದ್ಧಿಯಾಗಲು ದೀಪಾವಳಿಯಂದು ಮನೆಯ ಮುಖ್ಯದ್ವಾರದ ಎರಡೂ ಬದಿಗಳಲ್ಲಿ ಗೋಧಿಹಿಟ್ಟಿನ ಕಣಕ ಮಾಡಿ ಅದರ ಮೇಲೆ ದೀಪವನ್ನು ಹಚ್ಚಿಡಬೇಕು ! : ‘ದೀಪಾವಳಿ ಯಂದು ಮನೆಯ ಮುಖ್ಯದ್ವಾರದ ಎಡ ಮತ್ತು ಬಲ ಬದಿಯಲ್ಲಿ ಗೋಧಿ ಹಿಟ್ಟಿನ ಸಣ್ಣ ಕಣಕ ಮಾಡಿ ಅವುಗಳ ಮೇಲೆ ದೀಪವನ್ನು ಹಚ್ಚಿಡಬೇಕು.

ನರಕ ಚತುರ್ದಶಿ (ಅಕ್ಟೋಬರ್ ೧೮)

ಆಕಾಶದಲ್ಲಿ ನಕ್ಷತ್ರಗಳಿರುವಾಗ ಬ್ರಾಹ್ಮೀ ಮಹೂರ್ತದಲ್ಲಿ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ. ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲುಗಳ ವರೆಗೆ ಮತ್ತು ಪುನಃ ಕಾಲುಗಳಿಂದ ತಲೆಯವರೆಗೆ ನೀರನ್ನು ಸಿಂಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆಯನ್ನು ಉಪಯೋಗಿಸುತ್ತಾರೆ.

ಧನ್ವಂತರಿ ಜಯಂತಿ (ಅಕ್ಟೋಬರ್ ೧೭)

ಆಯುರ್ವೇದದ ದೃಷ್ಟಿಯಿಂದ ಈ ದಿನವು ಧನ್ವಂತರಿ ಜಯಂತಿಯ ದಿನವಾಗಿದೆ. ವೈದ್ಯರು ಈ ದಿನ ಧನ್ವಂತರಿಯ (ದೇವರ ವೈದ್ಯ) ಪೂಜೆಯನ್ನು ಮಾಡುತ್ತಾರೆ. ಬೇವಿನ ಎಲೆಯ ಸಣ್ಣ-ಸಣ್ಣ ತುಂಡುಗಳನ್ನು ಮತ್ತು ಸಕ್ಕರೆಯನ್ನು ‘ಪ್ರಸಾದವೆಂದು ಕೊಡುತ್ತಾರೆ.

ಧನತ್ರಯೋದಶಿ (ಅಕ್ಟೋಬರ್ ೧೭) ಆಶ್ವಯುಜ ಕೃಷ್ಣ ಪಕ್ಷ

ತ್ರಯೋದಶಿಯಂದು ವ್ಯಾಪಾರಿಗಳು ಕೊಪ್ಪರಿಗೆಯನ್ನು (ತಿಜೋರಿಯನ್ನು) ಪೂಜಿಸುತ್ತಾರೆ. ವ್ಯಾಪಾರಿ ವರ್ಷವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಯವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆ-ಕಿರ್ದಿಗಳನ್ನು (ಪುಸ್ತಕಗಳನ್ನು) ಈ ದಿನವೇ ತರುತ್ತಾರೆ.

ರಂಗೋಲಿಯನ್ನು ಸುಂದರ ಹಾಗೂ ಸಾತ್ತ್ವಿಕ ಮಾಡಲು ಅದರಲ್ಲಿ ವಿವಿಧ ಬಣ್ಣಗಳೊಂದಿಗೆ ಭಾವದ ಬಣ್ಣ ಹಾಕುವುದು ಅಪೇಕ್ಷಿತವಿದೆ. ಆಧಾರ : ಸನಾತನ ನಿರ್ಮಿತ ಕಿರುಗ್ರಂಥ ‘ಸಾತ್ತ್ವಿಕ ರಂಗೋಲಿಗಳು

ಸಹೋದರ ಬಿದಿಗೆಯ ನಿಮಿತ್ತ ಹಿಂದೂ ಬಾಂಧವರಿಗೆ ಕರೆ !

‘ಕಾರ್ತಿಕ ಶುಕ್ಲ ದ್ವಿತೀಯಾ, ಅಂದರೆ ಸಹೋದರ ಬಿದಿಗೆ ಅಥವಾ ಯಮದ್ವಿತೀಯಾ ! ಈ ವರ್ಷ ೨೧.೧೦.೨೦೧೭ ರಂದು ಸಹೋದರ ಬಿದಿಗೆ ಇದ್ದು ಹಿಂದೂ ಸಂಸ್ಕೃತಿಗನುಸಾರ ಈ ದಿನಕ್ಕೆ ಮಹತ್ವವಿದೆ. ಈ ದಿನ ಸಹೋದರನು ಸಹೋದರಿಯ ಮನೆಗೆ ಭೋಜನಕ್ಕೆ ಹೋಗುತ್ತಾನೆ.

ದೀಪಾವಳಿಯಲ್ಲಿ ಆಚರಿಸಲಾಗುವ ಹಬ್ಬಗಳ ಹಿಂದಿನ ಅಧ್ಯಾತ್ಮಶಾಸ್ತ್ರ

ದೀಪಾವಳಿ ಎನ್ನುವ ಶಬ್ದವು ದೀಪ+ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಯೂ ದೀಪಗಳನ್ನು ಹಚ್ಚುತ್ತಾರೆ. ಆಶ್ವಯುಜ ಕೃಷ್ಣ ಪಕ್ಷ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಪಕ್ಷ ಚತುರ್ದಶಿ (ನರಕ ಚತುರ್ದಶಿ), ಆಶ್ವಯುಜ ಅಮಾವಾಸ್ಯೆ (ಲಕ್ಷ್ಮೀಪೂಜೆ) ಹಾಗೂ ಕಾರ್ತಿಕ ಶುಕ್ಲ ಪಕ್ಷ ಪ್ರತಿಪದೆ (ಬಲಿಪಾಡ್ಯ) ಹೀಗೆ ನಾಲ್ಕು ದಿನ ದೀಪಾವಳಿಯನ್ನು ಆಚರಿಸಲಾಗುತ್ತದೆ.

ದೀಪಾವಳಿಯ ಸ್ವರೂಪ

ದೀಪಾವಳಿಯಂದು ಸಾಯಂಕಾಲ ಮನೆಯೊಳಗೆ ಮತ್ತು ಹೊರಗೆ ಸಾಲಾಗಿ ದೀಪಗಳನ್ನು ಹಚ್ಚಿಡಬೇಕು. ದೀಪಾವಳಿ ಎಂದರೆ ದೀಪಗಳ ಸಾಲು. ಇದರಿಂದ ಮನೆಗೆ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹವು ಬರುತ್ತದೆ ಮತ್ತು ಆನಂದವಾಗುತ್ತದೆ.

ನಿಜವಾದ ದೀಪಾವಳಿಯನ್ನು ಹಿಂದೂ ರಾಷ್ಟ್ರದಲ್ಲಿಯೇ ಆಚರಿಸಬಹುದು ! – ಪ.ಪೂ.ಪಾಂಡೆ ಮಹಾರಾಜರು

ದೀಪಾವಳಿಯ ಅರ್ಥವು ಹೀಗಿದೆ, ದೀಪಾವಲಿ ಎಂದರೆ ಅಸಂಖ್ಯಾತ ದೀಪಗಳ ಜ್ಯೋತಿಯ ಪ್ರಕಾಶದಿಂದ ಆನಂದಮಯವಾದ ವಾತಾವರಣವೇ ದೀಪಾವಳಿ ! ದೀಪ ಈ ಶಬ್ದವು ನಿಜವಾದ ಅರ್ಥದಿಂದ ಆತ್ಮಕ್ಕೆ ಸಂಬಂಧಿತವಾಗಿದೆ. ದೀಪಜ್ಯೋತಿಯು ಆತ್ಮಜ್ಯೋತಿಯ ಪ್ರತೀಕವಾಗಿದೆ.

ಸಹೋದರ ಬಿದಿಗೆ (ಯಮದ್ವಿತೀಯಾ) (ಅಕ್ಟೋಬರ್ ೨೧)

ಈ ದಿನದಂದು ಸಹೋದರಿಯು ಸಹೋದರನಿಗಾಗಿ ಶ್ರೀ ಯಮಾಯಿ ದೇವಿಯಲ್ಲಿ ಏನನ್ನು ಕೇಳುವಳೋ, ಅವಳ ಭಾವಕ್ಕನುಸಾರ ಸಹೋದರನಿಗೆ ಅದು ಸಿಗುತ್ತದೆ. ಅದರಿಂದ ಸಹೋದರನೊಂದಿಗಿನ ಅವಳ ಕೊಡು-ಕೊಳ್ಳುವ ಲೆಕ್ಕಾಚಾರ ಸ್ವಲ್ಪ ಕಡಿಮೆಯಾಗುತ್ತದೆ.