ಹಿಂದೂ ರಾಷ್ಟ್ರ ಸ್ಥಾಪನೆಗೆ ‘ಹಿಂದ ಸಾಮ್ರಾಜ್ಯ ಪಾರ್ಟಿ’ ಎಂಬ ರಾಜಕೀಯ ಪಕ್ಷ ಸ್ಥಾಪನೆ!

ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿಶಂಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಹಿಂದ್ ಸಾಮ್ರಾಜ್ಯ ಪಾರ್ಟಿ’ ಎಂಬ ಪಕ್ಷವು ಅಧಿಕೃತವಾಗಿ ಸ್ಥಾಪನೆಯಾಗಿದೆ ಎಂದು ಘೋಷಿಸಲಾಯಿತು.

ರಾಜ್ಯಸರಕಾರದ ವೈದ್ಯಕೀಯ ಮಹಾವಿದ್ಯಾಲಯಗಳ ಕೇಂದ್ರದ ಕೋಟಾದಲ್ಲಿ ಒಬಿಸಿಗಳಿಗೆ ಶೇ. 27 ಮತ್ತು ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಶೇ. 10 ಮೀಸಲಾತಿ !

ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಇವರಿಗೆ ಕೇವಲ 10 ವರ್ಷಗಳ ಕಾಲ ಮಾತ್ರ ಮೀಸಲಾತಿ ನೀಡಬೇಕೆಂಬುದು ಅಪೇಕ್ಷಿತವಿತ್ತು, ಎಂಬುದನ್ನು ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು !

ಮಕ್ಕಳು ಅಲ್ಲಾಹನ ಕೊಡುಗೆಯಾಗಿದ್ದರೆ ಸರಕಾರದ ಬಳಿ ಅವರಿಗಾಗಿನ ಸೌಲಭ್ಯಗಳು ಮತ್ತು ವಿಶೇಷ ಮೀಸಲಾತಿಗಳನ್ನು ಏಕೆ ಕೇಳುತ್ತೀರಿ ?

ಉತ್ತರಪ್ರದೇಶ ಸರಕಾರವು ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ಯನ್ನು ಜಾರಿಗೆ ತರಲು ನಿರ್ಧರಿಸುವ ಮೂಲಕ ಎಲ್ಲಾ ರಾಜ್ಯಗಳೆದುರು ಒಂದು ಆದರ್ಶವನ್ನು ನಿರ್ಮಿಸಿದ್ದಾರೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ಮನಃಪೂರ್ವಕವಾಗಿ ಸ್ವಾಗತಿಸುತ್ತದೆ.

ವಿದ್ಯಾರ್ಥಿವೇತನದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಶೇ ೮೦ ರಷ್ಟು ಮತ್ತು ಕ್ರೈಸ್ತ ವಿದ್ಯಾರ್ಥಿಗಳಿಗೆ ಶೇ ೨೦ ರಷ್ಟು ಮೀಸಲಾತಿ ನೀಡುವ ಕೇರಳ ಸರಕಾರದ ಆದೇಶವನ್ನು ತಿರಸ್ಕರಿಸಿದ ಕೇರಳ ಉಚ್ಚ ನ್ಯಾಯಾಲಯ !

ಕಮ್ಯುನಿಸ್ಟರ ಕಮ್ಯುನಿಸಂ ಎಷ್ಟು ಕಪಟತನದ್ದು ಮತ್ತು ಮತಾಂಧವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಅಂತಹ ಕಮ್ಯುನಿಸ್ಟ್ ಜನರು ಹಿಂದೂಗಳಿಗೆ ಜಾತ್ಯತೀತತೆಯ ಜ್ಞಾನವನ್ನು ನೀಡುತ್ತಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

ಮುಸ್ಲಿಮರಿಗೆ ಶೇ. ೧೦ ರಷ್ಟು ಮೀಸಲಾತಿ ಕೋರಿ ಮುಸ್ಲಿಂ ಲೀಗ್ ಮನವಿ

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಮೀಸಲಾತಿಯನ್ನು ಹಿಂಬಾಗಿಲಿನ ಮೂಲಕ ಕಬಳಿಸಲು ರಾಜಿಕೀಯ ಬೆಂಬಲದೊಂದಿಗೆ ನಡೆಯುತ್ತಿರುವ ಹುನ್ನಾರವನ್ನು ಮುಸ್ಲಿಂ ಲೀಗ್ ಖಂಡಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಬಲ ವ್ಯಕ್ತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ರದ್ದುಪಡಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಇಲ್ಲಿಯ ಪರಿಶಿಷ್ಟ ಜಾತಿಗೆ ಸೇರಿದ ವಿಕ್ರಮ್ ಬಾಗಡೆ ಎಂಬವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಬಲ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದರ ವಿರುದ್ಧ ಸರ್ವೋಚ್ಚ ನ್ಯಾಯಾಕಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಜನವರಿ ೨೬ ಗಣರಾಜ್ಯೋತ್ಸವದ ನಿಮಿತ್ತ…

ಭಾರತದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ, ಹಾಗೆಯೇ ಇತರ ಸೌಲಭ್ಯಗಳನ್ನು ಕೊಡುವುದು ಸಂವಿಧಾನಕ್ಕನುಸಾರ ಅಯೋಗ್ಯವಾಗಿದೆ ಹೀಗಿದ್ದರೂ ಅಲ್ಪಸಂಖ್ಯಾತರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಮತ್ತು ಇತರ ಸೌಲಭ್ಯಗಳನ್ನು ಕೊಡುವ ಪ್ರಯತ್ನಗಳಾಗುತ್ತದೆ; ಆದರೆ ಹಿಂದೂಗಳಿಗೆ ಧರ್ಮದ ಆಧಾರದಲ್ಲಿ ಯಾವುದೇ ಸೌಲಭ್ಯಗಳನ್ನು ಕೊಡುತ್ತಿಲ್ಲ.

ಸರ್ವೋಚ್ಚ ನ್ಯಾಯಾಲಯವು ಮರಾಠಾ ಮೀಸಲಾತಿಯ ಆಲಿಕೆಯನ್ನು ೫ ಫೆಬ್ರವರಿ ತನಕ ಮುಂದೂಡಿದೆ

ಮರಾಠಾ ಮೀಸಲಾತಿಯ ಪ್ರಕರಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ(ಖಂಡ) ಪೀಠದೆದುರು 20 ಜನವರಿಯಂದು ಅಂತಿಮ ಆಲಿಕೆಯು ಪ್ರಾರಂಭವಾಗಲಿತ್ತು; ಆದರೆ ನ್ಯಾಯಾಲಯವು ಆಲಿಕೆಗೆ ಸ್ಥಗಿತಿಯನ್ನು ನೀಡಿದೆ. ಈಗ ಈ ಪ್ರಕರಣದ ಬಗ್ಗೆ 5 ಫೆಬ್ರವರಿಯಂದು ಆಲಿಕೆಯಾಗಲಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಬುದ್ಧಿಜೀವಿಗಳು ‘ಅಧ್ಯಾತ್ಮಶಾಸ್ತ್ರವು ಹೇಗೆ ಸರಿಯಲ್ಲ’ ಎಂಬುದನ್ನು ಸಾಬೀತುಪಡಿಸಲು ಸಂಶೋಧನೆ ಮಾಡಲು ಸಾಧನಗಳನ್ನು ಎಂದಿಗೂ ಬಳಸಲಿಲ್ಲ; ಆದರೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ನೂರಾರು ಪ್ರಯೋಗಗಳ ಮೂಲಕ ‘ಅಧ್ಯಾತ್ಮಶಾಸ್ತ್ರವು ಚಿರಂತನ ಸತ್ಯವನ್ನು ಹೇಳುತ್ತದೆ’ ಎಂದು ಸಾಬೀತು ಪಡಿಸಿದೆ ಮತ್ತು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಶೋಧಪ್ರಬಂಧಗಳನ್ನು ಮಂಡಿಸಿದೆ.’

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಧರ್ಮವು ತ್ಯಾಗವನ್ನು ಕಲಿಸಿದರೆ, ರಾಜಕಾರಣವು ಸ್ವಾರ್ಥವನ್ನು ಕಲಿಸುತ್ತದೆ; ಆದ್ದರಿಂದ ಮೀಸಲಾತಿ ಇತ್ಯಾದಿಗಳು ಹೆಚ್ಚುತ್ತಿವೆ. ಇದಕ್ಕೆ ಏಕೈಕ ಪರಿಹಾರವೆಂದರೆ ಎಲ್ಲರಿಗೂ ಸರ್ವಸ್ವದ ತ್ಯಾಗ ಮಾಡಲು ಕಲಿಸುವ ಸಾಧನೆಯನ್ನು ಕಲಿಸುವುದು !