ಮುಸ್ಲಿಮರಿಗೆ ಶೇ. ೧೦ ರಷ್ಟು ಮೀಸಲಾತಿ ಕೋರಿ ಮುಸ್ಲಿಂ ಲೀಗ್ ಮನವಿ

ಜಾತ್ಯತೀತ ದೇಶದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸುವ ಮತಾಂಧ ಮುಸ್ಲಿಂ ಲೀಗ್! ಭಾರತ ವಿಭಜನೆಗಾಗಿ ಒತ್ತಾಯಿಸುತ್ತಿದ್ದ ಮುಸ್ಲಿಂ ಲೀಗ್ ಈಗ ಧರ್ಮದ ಆಧಾರದಲ್ಲಿ ಮೀಸಲಾತಿ ಬಯಸುತ್ತಿರುವುದನ್ನು ನೋಡಿ, ಅಂತಹ ಪಕ್ಷವನ್ನು ನಿಷೇಧಿಸಬೇಕು!

ಮಂಗಳೂರು – ರಾಜ್ಯದಲ್ಲಿ ಮುಸಲ್ಮಾನರನ್ನು ಪ್ರವರ್ಗ ೨ ಬಿ ಯಲ್ಲಿ ಸೇರಿಸಿ ಶೇ.೪ ಮೀಸಲಾತಿ ಕಲ್ಪಿಸಿ ಅನ್ಯಾಯ ಮಾಡಲಾಗಿದೆ. ಈ ಮೀಸಲಾತಿ ತುಂಬಾ ಕಡಿಮೆಯಾಗಿದ್ದು ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಶೇ.೧೦ ಮೀಸಲಾತಿ ಹೆಚ್ಚಿಸಬೇಕು ಎಂದು ರಾಜ್ಯ ಸರಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಮನವಿ ಸಲ್ಲಿಸಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಮೀಸಲಾತಿಯನ್ನು ಹಿಂಬಾಗಿಲಿನ ಮೂಲಕ ಕಬಳಿಸಲು ರಾಜಿಕೀಯ ಬೆಂಬಲದೊಂದಿಗೆ ನಡೆಯುತ್ತಿರುವ ಹುನ್ನಾರವನ್ನು ಮುಸ್ಲಿಂ ಲೀಗ್ ಖಂಡಿಸಿದೆ.