ಭಾರತವು ‘ಸೆಕ್ಯುಲರ್ (ಜಾತ್ಯತೀತ) ದೇಶ ಎಂಬುದೊಂದು ಭ್ರಮೆ; ಭಾವೀ ‘ಹಿಂದೂ ರಾಷ್ಟ್ರ’ವು ನಿಜವಾದ ಅರ್ಥದಿಂದ ಜಾತ್ಯತೀತವಾಗಿರುವುದು !
‘ಭಾರತದ ಸಂವಿಧಾನದಲ್ಲಿ ಭಾರತವಿದು ‘ಸೆಕ್ಯುಲರ್ (ಜಾತ್ಯತೀತ)’ ರಾಷ್ಟ್ರವಾಗಿದೆ ಎಂದು ಹೇಳಲಾಗಿದೆ. ‘ವಿವಿಧತೆಯಲ್ಲಿ ಏಕತೆ’, ಇದನ್ನು ಭಾರತೀಯ ವಿಚಾರಸರಣಿಯ ಪ್ರತೀಕ ಎಂದು ತಿಳಿಯಲಾಗುತ್ತದೆ. ಭಾರತದ ತ್ರಿವರ್ಣ ಧ್ವಜದಲ್ಲಿಯೂ ಸರ್ವಧರ್ಮ-ಪಂಥಗಳಿಗೆ ಸ್ಥಾನವನ್ನು ನೀಡಲಾಗಿದೆ. ಹೀಗಿರುವಾಗ ದೇಶದಲ್ಲಿ ಮುಂದಿನ ಪ್ರಸಂಗಗಳು ಹೇಗೆ ಸಂಭವಿಸುತ್ತವೆ ?
೧. ೧೯೮೦ ರ ದಶಮಾನದಲ್ಲಿ ಜಮ್ಮೂ-ಕಾಶ್ಮೀರದಲ್ಲಿ ಹಿಂದೂಗಳ ನೂರಾರು ದೇವಸ್ಥಾನಗಳನ್ನು ಧ್ವಂಸ ಮಾಡಲಾಯಿತು. ಅನೇಕ ವರ್ಷಗಳಿಂದ ಕೆಲವು ಕುಪ್ರವೃತ್ತಿಯ ಪಂಥದವರಿಂದ ಹಿಂದೂಗಳ ಉತ್ಸವ ಮತ್ತು ಮೆರವಣಿಗೆಗಳ ಮೇಲೆ ಕಲ್ಲುತೂರಾಟ ಮಾಡಲಾಗುತ್ತದೆ ಮತ್ತು ಗಲಭೆಗಳನ್ನು ಎಬ್ಬಿಸಲಾಗುತ್ತದೆ. ಕೆಲವು ಸಂಕುಚಿತ ಪ್ರವೃತ್ತಿಯ ಪಂಥದವರಿಂದ ಹಿಂದೂಗಳಿಗೆ ಹಣದ ಆಮಿಷ ತೋರಿಸಿ ಅಥವಾ ಕಪಟದಿಂದ ಅವರನ್ನು ಮತಾಂತರಿಸಲಾಗುತ್ತದೆ. ಈ ಎಲ್ಲ ಪಿಡುಗುಗಳನ್ನು ತೊಡೆದು ಹಾಕಲು ಇದುವರೆಗೆ ಸರಕಾರಿ ಮಟ್ಟದಲ್ಲಿ ಸಂವಿಧಾನಿಕಮಾರ್ಗದಿಂದ ಪರಿಣಾಮಕಾರಿ ಉಪಾಯಗಳನ್ನು ಮಾಡದಿರುವುದರಿಂದ ಈಗಲೂ ಈ ಕುಪ್ರವೃತ್ತಿಗಳು ಭಾರತದಲ್ಲಿ ಮನೆ ಮಾಡಿವೆ. ದೇಶದಲ್ಲಿ ಇವತ್ತಿಗೂ ‘ಮತಾಂತರ ನಿಷೇಧ’ ಕಾನೂನು ಜಾರಿಯಲ್ಲಿ ಇಲ್ಲ.
೨. ಭಾರತದ ಸಂವಿಧಾನದಲ್ಲಿ ‘ಗೋರಕ್ಷಣೆ’ ಮಾಡಲು ಹೇಳಿದ್ದರೂ ದೇಶದ ಅನೇಕ ರಾಜ್ಯಗಳಲ್ಲಿ ಇಂದಿಗೂ ‘ಗೋಹತ್ಯೆ ನಿಷೇಧ’ ಕಾನೂನು ಜಾರಿಯಲ್ಲಿ ಇಲ್ಲ. ‘ಸರ್ವ ಧರ್ಮ-ಪಂಥಗಳು ಪರಸ್ಪರರನ್ನು ಗೌರವಿಸಬೇಕು’, ಎಂಬ ಭಾರತದ ‘ಸೆಕ್ಯುಲರ್’ ವಿಚಾರಧಾರೆಯಲ್ಲಿ ಮೇಲಿನ ಅಂಶಗಳು ಅನ್ವಯವಾಗುತ್ತವೆಯೇ ? ಭಾರತದಲ್ಲಿ ಬಹುಸಂಖ್ಯಾತರಿರುವ ಹಿಂದೂಗಳ ಧಾರ್ಮಿಕಭಾವನೆಗಳಿಗೆ ಯಾವುದೇ ಬೆಲೆ ಇಲ್ಲವೇ ? ತದ್ವಿರುದ್ಧ ಹಿಂದೂಗಳು ಇತರ ಪಂಥದವರ ಉತ್ಸವ ಹಾಗೂ ಮೆರವಣಿಗೆಗಳ ಮೇಲೆ ಆಕ್ರಮಣ ಮಾಡಿದ್ದು ಅಥವಾ ಇತರ ಪಂಥದವರಿಗೆ ಬಲವಂತವಾಗಿ ಅಥವಾ ಅವರನ್ನು ಮೋಸಗೊಳಿಸಿ ಅವರ ಮತಾಂತರ ಮಾಡಿದ ಒಂದಾದರೂ ಉದಾಹರಣೆ ಇದೆಯೇ ?
೩. ಭಾರತದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ, ಹಾಗೆಯೇ ಇತರ ಸೌಲಭ್ಯಗಳನ್ನು ಕೊಡುವುದು ಸಂವಿಧಾನಕ್ಕನುಸಾರ ಅಯೋಗ್ಯವಾಗಿದೆ ಹೀಗಿದ್ದರೂ ಅಲ್ಪಸಂಖ್ಯಾತರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಮತ್ತು ಇತರ ಸೌಲಭ್ಯಗಳನ್ನು ಕೊಡುವ ಪ್ರಯತ್ನಗಳಾಗುತ್ತದೆ; ಆದರೆ ಹಿಂದೂಗಳಿಗೆ ಧರ್ಮದ ಆಧಾರದಲ್ಲಿ ಯಾವುದೇ ಸೌಲಭ್ಯಗಳನ್ನು ಕೊಡುತ್ತಿಲ್ಲ.
ಮೇಲಿನ ಎಲ್ಲ ಅಂಶಗಳಿಂದ ‘ಭಾರತವಿದು ಜಾತ್ಯತೀತ ರಾಷ್ಟ್ರವೇ ಅಲ್ಲ !’, ಎಂದು ಖೇದದಿಂದ ಹೇಳಬೇಕಾಗುತ್ತದೆ. ಭಾವೀ ಹಿಂದೂ ರಾಷ್ಟ್ರದಲ್ಲಿ ಧರ್ಮದ ಹೆಸರಿನಲ್ಲಿ ಧರ್ಮ-ಪಂಥದವರಲ್ಲಿ ಯಾವುದೇ ಭೇದಭಾವ ಮಾಡಲಾಗುವುದಿಲ್ಲ. ಎಲ್ಲ ಧರ್ಮ-ಪಂಥದವರ ಧಾರ್ಮಿಕ ಭಾವನೆಗಳನ್ನು ಯಥಾಯೋಗ್ಯ ರೀತಿಯಲ್ಲಿ ಕಾಪಾಡಲಾಗುವುದು. ಹಿಂದೂ ರಾಷ್ಟ್ರವಿದು ನಿಜವಾದ ಅರ್ಥದಿಂದ ‘ಸೆಕ್ಯುಲರ್ (ಜಾತ್ಯತೀತ)’ ರಾಷ್ಟ್ರವಾಗುವುದು !
– (ಪೂ.) ಶ್ರೀ. ಸಂದೀಪ ಆಳಶಿ (೮.೧೧.೨೦೧೯)