ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಬಲ ವ್ಯಕ್ತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ರದ್ದುಪಡಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಪರಿಶಿಷ್ಟ ಜಾತಿಗೆ ಸೇರಿದ ಯುವಕನಿಂದಲೇ ಅರ್ಜಿ !

ನೀಮಚ್ (ಮಧ್ಯಪ್ರದೇಶ) – ಇಲ್ಲಿಯ ಪರಿಶಿಷ್ಟ ಜಾತಿಗೆ ಸೇರಿದ ವಿಕ್ರಮ್ ಬಾಗಡೆ ಎಂಬವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಬಲ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿದೆ. ಈ ವರ್ಗದ ಜನರಿಗೆ ಸ್ವಯಂಪ್ರೇರಣೆಯಿಂದ ಮೀಸಲಾತಿಯನ್ನು ಬಿಡುವ ಆಯ್ಕೆಯನ್ನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ನ್ಯಾಯಾಲಯವು ಅರ್ಜಿಯನ್ನು ಮುಂದಿನ ತಿಂಗಳು ಆಲಿಸುವ ಸಾಧ್ಯತೆ ಇದೆ. ವಿಕ್ರಮ್ ಬಾಗಡೆ ಎಲ್.ಎಲ್.ಬಿ. ಯ ಪ್ರಥಮ ವರ್ಷದ ವಿದ್ಯಾರ್ಥಿ. ಈ ಅರ್ಜಿಯ ಬಗ್ಗೆ ಅವರೇ ವಾದ ಮಂಡಿಸಲಿದ್ದಾರೆ. ‘ರಾಜಕೀಯದಲ್ಲಿ ಮೀಸಲಾತಿಯನ್ನು ನಾನು ವಿರೋಧಿಸುವುದಿಲ್ಲ’ ಎಂದು ಬಾಗಡೆ ಹೇಳಿದರು. ‘ಮಾಧ್ಯಮಿಕ ಶಿಕ್ಷಣದ ನಂತರ ನಾನು ಮೀಸಲಾತಿಯ ಲಾಭವನ್ನು ಪಡೆದುಕೊಂಡಿಲ್ಲ’ ಎಂದು ಕೂಡ ತಿಳಿಸಿದರು.