ಸರ್ವೋಚ್ಚ ನ್ಯಾಯಾಲಯವು ಮರಾಠಾ ಮೀಸಲಾತಿಯ ಆಲಿಕೆಯನ್ನು ೫ ಫೆಬ್ರವರಿ ತನಕ ಮುಂದೂಡಿದೆ

ನವ ದೆಹಲಿ – ಮರಾಠಾ ಮೀಸಲಾತಿಯ ಪ್ರಕರಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ(ಖಂಡ) ಪೀಠದೆದುರು ೨೦ ಜನವರಿಯಂದು ಅಂತಿಮ ಆಲಿಕೆಯು ಪ್ರಾರಂಭವಾಗಲಿತ್ತು; ಆದರೆ ನ್ಯಾಯಾಲಯವು ಆಲಿಕೆಗೆ ಸ್ಥಗಿತಿಯನ್ನು ನೀಡಿದೆ. ಈಗ ಈ ಪ್ರಕರಣದ ಬಗ್ಗೆ ೫ ಫೆಬ್ರವರಿಯಂದು ಆಲಿಕೆಯಾಗಲಿದೆ.

ಸರ್ವೋಚ್ಚ ನ್ಯಾಯಾಲಯವು ಮರಾಠಾ ಮೀಸಲಾತಿಯ ಕ್ರಮಕ್ಕೆ ಸ್ಥಗಿತಿಯನ್ನು ನೀಡಿದ ನಂತರ ರಾಜ್ಯ ಸರಕಾರವು ಈ ಪ್ರಕರಣವನ್ನು ಪಂಚ ಸದಸ್ಯರ ಸಂವಿಧಾನ ಪೀಠಕ್ಕೆ ವರ್ಗಾಯಿಸುವಂತೆ ಬೇಡಿಕೆ ಸಲ್ಲಿಸಿತ್ತು. ಹಾಗೆಯೇ ಮೀಸಲಾತಿಯ ಮೇಲಿನ ಸ್ಥಗಿತಿಯನ್ನು ತೆಗೆಯುವಂತೆ ಬೇಡಿಕೆಯನ್ನು ನೀಡಲಾಗಿತ್ತು. ಆದರೆ ೯ ಡಿಸೆಂಬರ್ ೨೦೨೦ ರಂದು ನಡೆದ ಆಲಿಕೆಯಲ್ಲಿ ನ್ಯಾಯಾಲಯವು ಮೀಸಲಾತಿಯ ಮೇಲಿನ ಸ್ಥಗಿತಿಯನ್ನು ತೆಗೆಯಲು ನಿರಾಕರಿಸಿತ್ತು.