ಮಕ್ಕಳು ಅಲ್ಲಾಹನ ಕೊಡುಗೆಯಾಗಿದ್ದರೆ ಸರಕಾರದ ಬಳಿ ಅವರಿಗಾಗಿನ ಸೌಲಭ್ಯಗಳು ಮತ್ತು ವಿಶೇಷ ಮೀಸಲಾತಿಗಳನ್ನು ಏಕೆ ಕೇಳುತ್ತೀರಿ ?

ಸಂಸದ ಶಫಿಕುರ್ರಹಮಾನ್‌ಗೆ ಹಿಂದೂ ಜನಜಾಗೃತಿ ಸಮಿತಿಯ ಪ್ರಶ್ನೆ !

( ಎಡದಿಂದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಮತ್ತು ಶಫಿಕುರ್ರಹಮಾನ್ ಬರ್ಕ)

ಮುಂಬೈ – ಉತ್ತರಪ್ರದೇಶದಲ್ಲಿ ಪ್ರಸ್ತಾವಿತ ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ಯನ್ನು ವಿರೋಧಿಸಿ ಸಂಭಲನಲ್ಲಿನ ಸಂಸದ ಶಫಿಕುರ್ರಹಮಾನ್ ಬರ್ಕ (ಸಮಾಜವಾದಿ ಪಕ್ಷ) ಇವರು ಮಕ್ಕಳಿಗೆ ಜನ್ಮ ನೀಡುವುದು ಅಲ್ಲಾಹನ ಕೊಡುಗೆಯಾಗಿದೆ ಮತ್ತು ನೈಸರ್ಗಿಕ ವಿಷಯಗಳನ್ನು ವಿರೋಧಿಸುವುದು ಸರಿಯಲ್ಲ ಎಂದು ಹೇಳಿದ್ದರು. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ಸಂಸದ ಶಫಿಕುರ್ರಹಮಾನ್ ಅವರನ್ನು ಮಕ್ಕಳಿಗೆ ಜನ್ಮ ನೀಡುವುದು ಮತ್ತು ಪೋಷಿಸುವುದು ಅಲ್ಲಾಹನ ಇಚ್ಛೆಯಾಗಿದ್ದರೆ, ಧರ್ಮದ ಆಧಾರದಲ್ಲಿ ಸೌಲಭ್ಯ, ಅಲ್ಪಸಂಖ್ಯಾತ ಆಯೋಗ ಮತ್ತು ಇತರ ಮೀಸಲಾತಿಗಳನ್ನು ಸರಕಾರದ ಬಳಿ ಏಕೆ ಕೇಳುತ್ತೀರಿ? ಎಂದು ಪ್ರಶ್ನಿಸಿದ್ದು, ಹಿಂದೂ ಜನಜಾಗೃತಿ ಸಮಿತಿಯು ಶಫಿಕುರ್ರಹಮಾನ್ ಅವರ ಹೇಳಿಕೆಯನ್ನು ಖಂಡಿಸುತ್ತದೆ ಎಂದೂ ಶ್ರೀ. ಶಿಂದೆಯವರು ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾ. ಯೋಗಿ ಆದಿತ್ಯನಾಥ ಅವರಿಗೆ ಅಭಿನಂದನೆಗಳು !

ಉತ್ತರಪ್ರದೇಶ ಸರಕಾರವು ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ಯನ್ನು ಜಾರಿಗೆ ತರಲು ನಿರ್ಧರಿಸುವ ಮೂಲಕ ಎಲ್ಲಾ ರಾಜ್ಯಗಳೆದುರು ಒಂದು ಆದರ್ಶವನ್ನು ನಿರ್ಮಿಸಿದ್ದಾರೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ಮನಃಪೂರ್ವಕವಾಗಿ ಸ್ವಾಗತಿಸುತ್ತದೆ. ಈ ದೇಶದಲ್ಲಿ, ಧರ್ಮದ ಹೆಸರಿನಲ್ಲಿ ಅಲ್ಪಸಂಖ್ಯಾತರಿಗೆ ಒಂದು ನ್ಯಾಯ ಮತ್ತು ಬಹುಸಂಖ್ಯಾತ ಹಿಂದೂಗಳಿಗೆ ಇನ್ನೊಂದು ನ್ಯಾಯವನ್ನು ನೀಡಲು ಸಾಧ್ಯವಿಲ್ಲ. ಭಾರತದಾದ್ಯಂತ ಎಲ್ಲ ನಿಯಮಗಳು ಮತ್ತು ಕಾನೂನುಗಳು ಒಂದೇ ಆಗಿರಬೇಕು. ಜನಸಂಖ್ಯೆಯ ಧಾರ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕಾದರೆ, ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ ಜಾರಿಗೆ ತರುವುದು ಕಾಲಾನುಸಾರ ಆವಶ್ಯಕವಾಗಿದೆ. ಜನಸಂಖ್ಯಾ ಹೆಚ್ಚಳವು ರಾಷ್ಟ್ರೀಯ ಸಮಸ್ಯೆಯಾಗಿದ್ದು, ಕೇಂದ್ರ ಸರಕಾರವು ರಾಷ್ಟ್ರೀಯ ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ಎಂದು ನಾವು ಮಾ. ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಒತ್ತಾಯಿಸುತ್ತಿದ್ದೇವೆ.